ಆ್ಯಪ್ನಗರ

ಕೊರೊನಾಗಾಗಿ 20,000 ರೈಲು ಬೋಗಿಗಳ ಮಾರ್ಪಾಡು; 3.2 ಲಕ್ಷ ಐಸೊಲೇಷನ್‌ ವಾರ್ಡ್‌ ಸಿದ್ಧ

ಈಗಾಗಲೇ ತೆಲಂಗಾಣದಲ್ಲಿ 486, ಮುಂಬೈನಲ್ಲಿ 482 ಬೋಗಿಗಳು ಕೇಂದ್ರೀಯ ರೈಲ್ವೆ ವಲಯದ ಅಡಿಯಲ್ಲಿ ನಿಗಾ ಇರಿಸಲು ಸಿದ್ಧಗೊಂಡಿವೆ. ಪ್ರತಿ ಬೋಗಿಗಳಲ್ಲಿ16 ಹಾಸಿಗೆಗಳಿದ್ದು ಎಲ್ಲಾ ರೀತಿಯ ವೈದ್ಯಕೀಯ ಸಾಧನಗಳನ್ನು ಕೂಡ ಇರಿಸಲಾಗಿದೆ.

THE ECONOMIC TIMES 31 Mar 2020, 7:14 pm

ಹೊಸದಿಲ್ಲಿ: ಕೊರೊನಾ ವೈರಸ್‌ ಶಂಕಿತರು ಮತ್ತು ಕೋವಿಡ್‌-19 ಸೋಂಕಿತರನ್ನು ಪ್ರತ್ಯೇಕ ನಿಗಾ ಘಟಕಗಳಲ್ಲಿ ಇರಿಸಲು ಆಸ್ಪತ್ರೆಗಳಲ್ಲಿ ಸ್ಥಳದ ಕೊರತೆ ಎದುರಾದರೆ ಅದಕ್ಕೆ ಪರಿಹಾರವಾಗಿ 20 ಸಾವಿರ ಬೋಗಿಗಳನ್ನು ನಿಗಾ ಕೊಠಡಿಗಳಾಗಿ ಪರಿವರ್ತಿಸುವುದಾಗಿ ಭಾರತೀಯ ರೈಲ್ವೆ ಇಲಾಖೆ ಹೇಳಿತ್ತು.
Vijaya Karnataka Web Railway


ಅದರಂತೆ ಈಗಾಗಲೇ ಒಂದಷ್ಟು ಬೋಗಿಗಳನ್ನು ಆಸ್ಪತ್ರೆಯ ಚಿಕಿತ್ಸಾ ಕೊಠಡಿಗಳಾಗಿ ಮಾರ್ಪಡಿಸಿರುವ ಇಲಾಖೆ ಒಟ್ಟು 3.2 ಲಕ್ಷ ಹಾಸಿಗೆಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದು, ಅಷ್ಟೇ ಮಂದಿಯನ್ನು ನಿಗಾದಲ್ಲಿ ಇರಿಸಲು ಸಿದ್ಧರಿದ್ದೇವೆ ಎಂದು ಹೇಳಿದೆ.

ಇಲಾಖೆ ತನ್ನ 16 ವಲಯಗಳಿಗೆ ಕೂಡ ನಿಗದಿತ ಪ್ರಮಾಣದಲ್ಲಿ ಬೋಗಿಗಳನ್ನು ಕಾಯ್ದಿರಿಸಲು ಸೂಚಿಸಿದೆ. ಈಗಾಗಲೇ ತೆಲಂಗಾಣದಲ್ಲಿ 486, ಮುಂಬೈನಲ್ಲಿ 482 ಬೋಗಿಗಳು ಕೇಂದ್ರೀಯ ರೈಲ್ವೆ ವಲಯದ ಅಡಿಯಲ್ಲಿ ನಿಗಾ ಇರಿಸಲು ಸಿದ್ಧಗೊಂಡಿವೆ. ಪ್ರತಿ ಬೋಗಿಗಳಲ್ಲಿ16 ಹಾಸಿಗೆಗಳಿದ್ದು ಎಲ್ಲಾ ರೀತಿಯ ವೈದ್ಯಕೀಯ ಸಾಧನಗಳನ್ನು ಕೂಡ ಇರಿಸಲಾಗಿದೆ. ಆಸ್ಪತ್ರೆ ಕೊಠಡಿಗಳಂತೆಯೇ ಸ್ವಚ್ಛತೆ ಕೂಡ ಕಾಪಾಡಿಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲ್ವೆ ಬೋಗಿಗಳೇ ಐಸೋಲೇಷನ್‌ ವಾರ್ಡ್‌, ಕೊರೊನಾ ವಿರುದ್ಧದ ಹೋರಾಟಕ್ಕೆ ತಾತ್ಕಾಲಿಕ ಸಿದ್ಧತೆ



20,000 ರೈಲ್ವೆ ಬೋಗಿಗಳ ಮಾರ್ಪಾಡುಗೊಳಿಸುವ ಸಂಬಂಧ ಈಗಾಗಲೇ 5,000 ಕೋಚ್‌ಗಳ ಚಟುವಟಿಕೆ ಆರಂಭಗೊಂಡಿದೆ ಎಂಬುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

ಕೊರೊನಾ ಹರಡುವಿಕೆ ಆತಂಕದ ಹಿನ್ನೆಲೆಯಲ್ಲಿ ಮಾ. 21ರಿಂದ ದೇಶಾದ್ಯಂತ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ