ಆ್ಯಪ್ನಗರ

ರಾಷ್ಟ್ರೀಯ ಹೆದ್ದಾರಿ ಸುಗಮ ಸಂಚಾರಕ್ಕೆ ಮುಕ್ತ

ಮುಂದಿನ ನಾಲ್ಕೈದು ವರ್ಷಗಳಲ್ಲಿ ಕನಿಷ್ಠ 20,000 ಕೀ.ಮೀ. ದೂರದ ವರೆಗಿನ ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಅಡೆ ತಡೆಗಳಿಲ್ಲದೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಕೇಂದ್ರ ಸರಕಾರ ತಿಳಿಸಿದೆ.

ಟೈಮ್ಸ್ ಆಫ್ ಇಂಡಿಯಾ 27 Apr 2017, 2:54 pm
ಹೊಸದಿಲ್ಲಿ: ಮುಂದಿನ ನಾಲ್ಕೈದು ವರ್ಷಗಳಲ್ಲಿ ಕನಿಷ್ಠ 20,000 ಕೀ.ಮೀ. ದೂರದ ವರೆಗಿನ ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಅಡೆ ತಡೆಗಳಿಲ್ಲದೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಕೇಂದ್ರ ಸರಕಾರ ತಿಳಿಸಿದೆ.
Vijaya Karnataka Web 20000km of highways will soon be access controlled
ರಾಷ್ಟ್ರೀಯ ಹೆದ್ದಾರಿ ಸುಗಮ ಸಂಚಾರಕ್ಕೆ ಮುಕ್ತ


ಮುಖ್ಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಪ್ರಾಣಿಗಳ ಅಡೆ ತಡೆಗಳು ಎದುರಾಗುತ್ತಿದೆ. ಆದರೆ ಇದನ್ನು ತಡೆಗಟ್ಟಲು ವ್ಯವಸ್ಥೆ ಮಾಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ವೇಗವಾಗಿ ಸಂಚರಿಸುವ ವಾಹನಗಳಿಗೆ ಹೆದ್ದಾರಿ ಮುಕ್ತಗೊಳಿಸುವುದು ಯೋಜನೆಯ ಇರಾದೆಯಾಗಿದೆ. ಮೊದಲ ಹಂತವಾಗಿ ನಾಲ್ಕು ಲೇನ್‌ಗಳಲ್ಲಿ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ನಿರ್ಮಿಸಲಾಗುವುದು.

ಭಾರತ್‌ಮಾಲಾ ಎಂಬ ಈ ಮಹತ್ತರ ಯೋಜನೆಗೆ 3.85 ಕೋಟಿ ರೂ. ವೆಚ್ಚ ತಗುಗಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯ ಸೈಕಲ್ ರಿಕ್ಷಾ, ಮೋಟಾರ್‌ಸೈಕಲ್‌ಗಳು ಹೆದ್ದಾರಿಗಳಲ್ಲಿ ಚಲಿಸುವುದರಿಂದ ವಾಹನಗಳ ವೇಗಕ್ಕೆ ಅಡ್ಡಿಯಾಗುತ್ತದೆ. ಹೆದ್ದಾರಿ ಸಚಿವಾಲಯದ ವರದಿಯ ಪ್ರಕಾರ ಜಪಾನ್‌ನಲ್ಲಿರುವ 4 ಲೇನ್ ರಸ್ತೆ ವ್ಯವಸ್ಥೆಯು ದೈನಂದಿನ 40,000 ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ. ಇದಕ್ಕೆ ಸಮಾನವಾದ ಯೋಜನೆಯನ್ನು ಭಾರತದಲ್ಲಿ ಕಾರ್ಯಗತಗೊಳಿಸಲಾಗುವುದು.

ಕೇಂದ್ರ ಹೆದ್ದಾರಿ ಸಚಿವ ನಿತಿನಿ ಗಡ್ಕರಿ ಸಲ್ಲಿಸಿರುವ ಯೋಜನೆಗೆ ಹಸಿರು ನಿಶಾನೆ ದೊರಕಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಬಂದರುಗಳು, ಉತ್ಪಾದನಾ ಕೇಂದ್ರ, ವ್ಯಾಪಾರ ಕೇಂದ್ರಗಳನ್ನು ಒಳಗೊಂಡಿರುವ ಪ್ರಮುಖ ಆರ್ಥಿಕ ಚಟುವಟಿಕೆ ಕೇಂದ್ರಗಳಾಗಿರುವ ಮುಂಬೈ-ಕೋಲ್ಕತ್ತಾ, ಬೆಂಗಳೂರು-ಮಂಗಳೂರು, ಲೂಧಿಯಾನ-ಕಂಡ್ಲ, ಪೋರ್‌ಬಂದರ್-ಸಿಲ್ಚಾರ್ ಹೆದ್ದಾರಿಗಳು ಈ ಕಾರಿಡಾರ್‌ನಲ್ಲಿ ಒಳಗೊಂಡಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ