Lok Sabha Election Voting Live: ಸಂಜೆ 6 ಗಂಟೆವರೆಗೆ ಅಂದಾಜು 61.25% ಮತದಾನ, ಅಸ್ಸಾಂನಲ್ಲಿ ಗರಿಷ್ಠ

| 7 May 2024, 7:59 pm
LIVE NOW

LIVE | Lok Sabha Election 2024 Voting: :ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಬುಧವಾರ (ಮೇ 7) ನಡೆಯಲಿದೆ. 10 ರಾಜ್ಯ, 2 ಕೇಂದ್ರಾಡಳಿತ ಪ್ರದೇಶದ ಒಟ್ಟು 93 ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 1,531 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ..ಪ್ರಧಾನಿ ಮೋದಿ ತವರು ರಾಜ್ಯವಾಗಿರುವ ಗುಜರಾತ್ ನಲ್ಲಿ ಅತಿ ಹೆಚ್ಚು 25 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದರೆ, ಕರ್ನಾಟಕದಲ್ಲಿ 14 ಕಣಗಳಲ್ಲಿ ಅಭ್ಯರ್ಥಿಗಳ ಸತ್ವ ಪರೀಕ್ಷೆ ನಡೆಯಲಿದೆ. ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮನ್ಸುಖ್‌ ಮಂಡಾವೀಯ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು ಪ್ರಮುಖ ಅಪ್ ಡೇಟ್ ಗಳು ವಿಕ ವೆಬ್ ನಲ್ಲಿ ಲಭ್ಯವಾಗಲಿವೆ.

  • ಮೂರನೇ ಹಂತದಲ್ಲಿ ದೇಶದಲ್ಲಿ ಅಂದಾಜು ಶೇ. 61.28ರಷ್ಟು ಮತದಾನ
    ಮೂರನೇ ಹಂತದಲ್ಲಿ ದೇಶದ 93 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಅಂದಾಜು ಶೇ. 61.28ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಅಸ್ಸಾಂನಲ್ಲಿ ಗರಿಷ್ಠ ಶೇ. 75.09ರಷ್ಟು ಮತದಾನ ನಡೆದಿದ್ದರೆ, ಗೋವಾದಲ್ಲಿ ಶೇ. 74.27 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ. 73.93ರಷ್ಟು ಮತದಾನ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ ಕನಿಷ್ಠ ಶೇ. 54.56, ಬಿಹಾರದಲ್ಲಿ ಶೇ. 56.55, ಗುಜರಾತ್‌ನಲ್ಲಿ ಶೇ. 56.65, ಉತ್ತರ ಪ್ರದೇಶದಲ್ಲಿ ಶೇ. 57.34ರಷ್ಟು ಮತದಾನ ನಡೆದಿದೆ.
  • ದೇಶದಲ್ಲಿ ಸಂಜೆ 5 ಗಂಟೆವರೆಗೆ ಶೇ. 60.19ರಷ್ಟು ಮತದಾನ
    ದೇಶದಲ್ಲಿ ಸಂಜೆ 5 ಗಂಟೆವರೆಗೆ ಶೇ. 60.19ರಷ್ಟು ಮತದಾನ ನಡೆದಿದೆ. ಅಸ್ಸಾಂನಲ್ಲಿ ಗರಿಷ್ಠ ಶೇ. 74.86ರಷ್ಟು ಮತದಾನ ನಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ಎರಡನೇ ಅತಿ ಹೆಚ್ಚಿನ ಶೇ. 73.93ರಷ್ಟು ಮತದಾನ ನಡೆದಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ ಕನಿಷ್ಠ ಶೇ. 53.40 ಮತದಾನ ವರದಿಯಾಗಿದ್ದು, ಉತ್ತರ ಪ್ರದೇಶ, ಗುಜರಾತ್‌, ಬಿಹಾರದಲ್ಲೂ ಮತದಾದನ ಶೇ. 60ರ ಗಡಿ ದಾಟಿಲ್ಲ.
  • ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ
    ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ಮಂಗಳವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, 'ಇಂದು ದೇಶದ ಮೂಲೆ ಮೂಲೆಯಲ್ಲಿ ಯುವಕರು ನಿರುದ್ಯೋಗ ಎದುರಿಸುತ್ತಿದ್ದಾರೆ, ಮಹಿಳೆಯರು ದೌರ್ಜನ್ಯ ಎದುರಿಸುತ್ತಿದ್ದಾರೆ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ತಾರತಮ್ಯಕ್ಕೆ ಒಳಗಾಗಿದ್ದಾರೆ. ಪ್ರಧಾನಿಯವರ ಉದ್ದೇಶಗಳಿಂದಾಗಿ ಈ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.ನರೇಂದ್ರ ಮೋದಿ ಮತ್ತು ಬಿಜೆಪಿಯು ಯಾವುದೇ ಬೆಲೆ ತೆತ್ತಾದರೂ ಅಧಿಕಾರ ಪಡೆಯುವುದರ ಮೇಲೆಯೇ ಗಮನ ಕೇಂದ್ರೀಕರಿಸಿದೆ. ಆದರೆ ಕಾಂಗ್ರೆಸ್ ಮತ್ತು ಭಾರತ ಒಕ್ಕೂಟವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಮರ್ಪಿತವಾಗಿದೆ. ಸರ್ವರ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಮತ್ತು ನಾವು ಬಲಿಷ್ಠ ಮತ್ತು ಅಖಂಡ ಭಾರತವನ್ನು ನಿರ್ಮಿಸೋಣ ಎಂದು ಅವರು ಕರೆ ನೀಡಿದ್ದಾರೆ.
  • ಮಧ್ಯಾಹ್ನ 3 ಗಂಟೆವರೆಗೆ ದೇಶದಲ್ಲಿ ಶೇ. 50.71ರಷ್ಟು ಮತದಾನ
    ಮಧ್ಯಾಹ್ನ 3 ಗಂಟೆವರೆಗೆ ದೇಶದ 93 ಕ್ಷೇತ್ರಗಳಲ್ಲಿ ಶೇ. 50.71ರಷ್ಟು ಮತದಾನ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಶೇ. 63.11ರಷ್ಟು ಮತದಾನ ನಡೆದಿದ್ದರೆ, ಅಸ್ಸಾಂನಲ್ಲಿ ಶೇ. 63.08ರಷ್ಟು ಮತದಾದನ ನಡೆದಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ ಕನಿಷ್ಠ ಶೇ. 42.63ರಷ್ಟು ಮತದಾನ ದಾಖಲಾಗಿದೆ.
  • ಪವನ್‌ ಕಲ್ಯಾಣ್‌ಗೆ ತೆಲುಗು ಚಿತ್ರರಂಗದ ಬೆಂಬಲ
    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್‌ರನ್ನು ಬೆಂಬಲಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ ತೆಲುಗು ಚಿತ್ರರಂಗದ ನಟರಾದ ಮೆಗಾಸ್ಟಾರ್ ಚಿರಂಜೀವಿ ಮತ್ತು ನಾನಿ
  • ಮಧ್ಯಾಹ್ನ 1ಗಂಟೆವರೆಗೆ 39.92% ಮತದಾನ
    ದೇಶಾದ್ಯಂತ 93 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಮಧ್ಯಾಹ್ಮ 1 ಗಂಟೆ ವೇಳೆಗೆ ಒಟ್ಟಾರೆ 39.92% ಮತದಾನವಾಗಿದೆ. ಬಿಸಿಲು ಇಳಿದ ಬಳಿಕ ಸಂಜೆವೇಳೆ ದೊಡ್ಡ ಪ್ರಮಾಣದಲ್ಲಿ ಮತದಾನ ಆಗಬಹುದೆಂಬ ನಿರೀಕ್ಷೆ ಇದೆ.
  • ಕೇಜ್ರೀವಾಲ್ ನ್ಯಾಯಾಂಗ ಬಂಧನ ಮೇ 20ರವೆರೆಗೆ ವಿಸ್ತರಣೆ
    ದೆಹಲಿ ಲಿಕ್ಕರ್ ಕೇಸಿಗೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಮೇ 20 ರವರೆಗೆ ವಿಸ್ತರಿಸಿದೆ.
  • ಕಾಲಲ್ಲೇ ಮತ ಹಾಕಿದ ಅಂಕಿತ್ ಸೋನಿ
    ಗುಜರಾತ್: ನಾಡಿಯಾಡ್‌ನ ಮತಗಟ್ಟೆಯಲ್ಲಿ ಅಂಕಿತ್ ಸೋನಿ ಎಂಬ ಕೈಗಳಿಲ್ಲದ ಮತದಾರ ತಮ್ಮ ಕಾಲಿನ ಸಹಾಯದಿಂದ ಮತ ಚಲಾಯಿಸಿದರು. ಮತಗಟ್ಟೆ ಅಧಿಕಾರಿ ಅವರ ಕಾಲಿನ ಬೆರಳುಗಳಿಗೆ ಶಾಯಿಯನ್ನು ಹಾಕಿದರು. ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಂಕಿತ್ ಸೋನಿ, ``20 ವರ್ಷಗಳ ಹಿಂದೆ ವಿದ್ಯುತ್ ಶಾಕ್‌ನಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದೆ, ನನ್ನ ಗುರುಗಳು ಮತ್ತು ಗುರುಗಳ ಆಶೀರ್ವಾದದಿಂದ ನಾನು ಪದವಿ ಪಡೆದಿದ್ದೇನೆ, ಸಿಎಸ್.. ಜನರು ಹೊರಗೆ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ'' ಎಂದಿದ್ದಾರೆ.
  • ಗೌತಮ್ ಅದಾನಿ ದಂಪತಿ ಮತದಾನ
    ಉದ್ಯಮಿ ಗೌತಮ್ ಅದಾನಿ ಮತದಾನದ ಬಳಿಕ ಮಾತನಾಡಿ "ಇಂದು ನನ್ನ ಕುಟುಂಬದೊಂದಿಗೆ ಮತ ಚಲಾಯಿಸಿದ್ದಕ್ಕಾಗಿ ಹೆಮ್ಮೆಪಡುತ್ತೇನೆ. ಮತದಾನವು ಈ ಮಹಾನ್ ರಾಷ್ಟ್ರದ ನಾಗರಿಕರಾಗಿ ನಾವೆಲ್ಲರೂ ಹಂಚಿಕೊಳ್ಳುವ ಹಕ್ಕು, ಸವಲತ್ತು ಮತ್ತು ಜವಾಬ್ದಾರಿಯಾಗಿದೆ. ಪ್ರತಿ ಮತವೂ ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರಬಲ ಧ್ವನಿಯಾಗಿದೆ. ಭಾರತದ ಭವಿಷ್ಯವನ್ನು ರೂಪಿಸಲು ನಿಮ್ಮ ಮತವನ್ನು ಚಲಾಯಿಸಿ. " ಎಂದರು.
  • "ಸಮಾಜವಾದಿ ಪಕ್ಷವಾಗಲಿ ಅಥವಾ ಕಾಂಗ್ರೆಸ್ ಆಗಲಿ, ಇವೆರಡೂ ಹಿಂದೂ ವಿರೋಧಿ ಮತ್ತು ರಾಮ ವಿರೋಧಿ. ಇವರೇ ಗುಂಡು ಹಾರಿಸಿದವರು. ರಾಮಭಕ್ತರು ಮತ್ತು ಭಗವಾನ್ ರಾಮನ ಅಸ್ತಿತ್ವವನ್ನು ನಿರಾಕರಿಸುವ ಅವರು ಭಾರತದ ನಂಬಿಕೆಯನ್ನು ಗೌರವಿಸಬಹುದು ಮತ್ತು ಭಾರತದ ರಾಷ್ಟ್ರೀಯ ವೀರರನ್ನು ಗೌರವಿಸಬಹುದು ಎಂದು ನಿರೀಕ್ಷಿಸುವುದೇ ಅರ್ಥಹೀನವಾಗಿದೆ. ರಾಮ್ ಗೋಪಾಲ್ ಯಾದವ್ ಅವರ ಹೇಳಿಕೆಯು INDI ಮೈತ್ರಿ, ಸಮಾಜವಾದಿ ಪಕ್ಷದ ನೈಜತೆಯನ್ನು ತೋರಿಸುತ್ತದೆ.
    ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ
  • ಮಧ್ಯ ಪ್ರದೇಶದಲ್ಲಿ ಮೋದಿ ಪ್ರಚಾರ ಭಾಷಣ
    ಅಹ್ಮದಾಬಾದ್ ನಲ್ಲಿ ಮತ ಹಕ್ಕು ಚಲಾಯಿಸಿದ ಬಳಿಕ ಪ್ರಧಾನಿ ಮೋದಿ ಮಧ್ಯಪ್ರದೇಶದ ಕರ್ಗೋನ್ ತೆರಳಿ ಬಿಜೆಪಿ ಸಮಾವೇಶದಲ್ಲಿ ಪ್ರಚಾರ ಭಾಷಣ ಮಾಡಿದರು. ತಮ್ಮ ಒಂದು ಮತ ದೇಶದಲ್ಲಿ ಅನೇಕ ಬದಲಾವಣೆಯನ್ನು ತಂದಿತು ಎಂದು ಹೇಳಿದರು.
  • ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತದಾನ
    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯ ಗುಂಡುಗುರ್ತಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ರಾಧಾಕೃಷ್ಣ ಸ್ಪರ್ಧಸಿದ್ದು, ಬಿಜೆಪಿಯಿಂದ ಉಮೇಶ್‌ ಜಿ ಜಾಧವ್‌ ಕಣಕ್ಕಿಳಿದಿದ್ದಾರೆ.
  • ಲೋಕಸಭಾ ಚುನಾವಣೆ : ಬೆಳಿಗ್ಗೆ 9 ಗಂಟೆಯವರೆಗೆ 10.57% ಮತದಾನ
    ಅಸ್ಸಾಂ- 10.12%ಬಿಹಾರ- 10.03%ಛತ್ತೀಸ್‌ಗಢ -13.24%ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು- 10.13%ಗೋವಾ- 12.35%ಗುಜರಾತ್- 9.87%ಕರ್ನಾಟಕ- 9.45%ಮಧ್ಯ ಪ್ರದೇಶ- 14.22%
  • ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಶಾಯಿಯ ಬೆರಳುಗಳನ್ನು ತೋರಿಸುತ್ತಿರುವುದು.
  • ಲಾತೂರ್ ನಲ್ಲಿ ನಟ ರಿತೇಶ್ ದೇಶಮುಖ್ ಮತದಾನ
    ಮಹಾರಾಷ್ಟ್ರದ ಮಾಜಿ ಸಿಎಂ ವಿಲಾಸ್ ರಾವ್ ದೇಶ್ ಮುಖ್ ಅವರ ಪುತ್ರ ನಟ ರಿತೇಶ್ ದೇಶಮುಖ್ ಅವರು ಮಹಾರಾಷ್ಟ್ರದ ಲಾತೂರ್ ಮತಗಟ್ಟೆಯಲ್ಲಿ ಮತ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿ,: "ನಾನು ಮತದಾನ ಮಾಡಲು ಮುಂಬೈನಿಂದ ಲಾತೂರ್‌ಗೆ ಬಂದಿದ್ದೇನೆ. ಎಲ್ಲರೂ ತಮ್ಮ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಬೇಕು. ಇಂದು ಮಹತ್ವದ ದಿನ. ಪ್ರತಿಯೊಬ್ಬರೂ ಖಂಡಿತವಾಗಿ ಮತದಾನ ಮಾಡಬೇಕು..." ಎಂದು ಹೇಳಿದ್ದಾರೆ.
  • ಅಹಮದಾಬಾದ್ ನಲ್ಲಿ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರಬಂದ ಬಳಿಕ ಜನರಿಗೆ ಕೈಬೆರಳಿಗೆ ಹಾಕಿದ ಶಾಯಿಯನ್ನು ಪ್ರದರ್ಶಿಸುತ್ತಿರುವ ಪ್ರಧಾನಿ ಮೋದಿ.
  • ಅಹಮದಾಬಾದ್ ನಲ್ಲಿ ಪ್ರಧಾನಿ ಮೋದಿ ಮತದಾನ
    ಪ್ರಧಾನಿ ಮೋದಿ ಅವರು ಬೆೆಳಗ್ಗೆ 7.45ರ ಸುಮಾರಿಗೆ ಅಹ್ಮದಾಬಾದ್ ನ ನಿಶಾನ್ ಹೈಯರ್ ಸಕೆಂಡರಿ ಶಾಲೆಯಲ್ಲಿ ಮತ ಚಲಾಯಸಿದರು. ಅವರ ಜೊತೆಗೆ ಬಂದ ಗೃಹ ಸಚಿವ ಅಮಿತ್ ಶಾ ಅವರೂ ಇದೇ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.
  • ಕಾವೇರಿ ನದಿ ನೀರು ಹಂಚಿಕೆ: ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
    ನೆರೆಯ ರಾಜ್ಯಗಳೊಂದಿಗೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ.
  • ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ.: ಮೋದಿ ಟ್ವೀಟ್
  • ಗುಜರಾತ್ ನ ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ ಚಲಾಯಿಸಲಿದ್ದು ಬಿಗಿ ಭದ್ರತೆ ಹಮ್ಮಿಕೊಳ್ಳಲಾಗಿದೆ.
  • ಹೈವೋಲ್ಟೇಜ್‌ ಕ್ಷೇತ್ರಗಳಿವು
    ರಾಜ್‌ಕೋಟ್‌, ವಡೋದರಾ (ಗುಜರಾತ್‌), ಧಾರವಾಡ, ಬೆಳಗಾವಿ, ಶಿವಮೊಗ್ಗ(ಕರ್ನಾಟಕ) ಬಾರಾಮತಿ (ಮಹಾರಾಷ್ಟ್ರ), ಬರೇಲಿ, ಆಗ್ರಾ, ಬದೌನ್‌, (ಉತ್ತರ ಪ್ರದೇಶ), ಭೋಪಾಲ್‌, ಗ್ವಾಲಿಯರ್‌ (ಮಧ್ಯಪ್ರದೇಶ), ರಾಯಪುರ, ಬಿಲಾಸ್‌ಪುರ (ಛತ್ತೀಸ್‌ಗಢ), ಕೋಕ್ರಾಜಾರ್‌, ಗುವಾಹಟಿ (ಅಸ್ಸಾಂ), ಜಂಗೀಪುರ, ಮುರ್ಷಿದಾಬಾದ್‌ (ಪ.ಬಂಗಾಳ).
  • ಕಣದಲ್ಲಿರುವ ಪ್ರಮುಖರಿವರು
    ಗೃಹ ಸಚಿವ ಅಮಿತ್‌ ಶಾ (ಗಾಂಧಿನಗರ), ಮಾಜಿ ಸಿಎಂ ಜಗದೀಶ್ ಶೆಟ್ಟರ್(ಬೆಳಗಾವಿ), ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(ಹಾವೇರಿ), ಕೇಂದ್ರ ಸಚಿವ ಪ್ರಹ್ಲಾದ ಜೋಶಿ(ಧಾರವಾಢ), ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ (ಗುಣಾ) ಮನ್ಸುಖ್‌ ಮಂಡಾವೀಯ (ಪೋರ್‌ಬಂದರ್‌), ಸುಪ್ರಿಯಾ ಸುಳೆ (ಬಾರಾಮತಿ), ಡಿಂಪಲ್‌ ಯಾದವ್‌ (ಮೈನ್‌ಪುರಿ), ಶಿವರಾಜ್‌ ಸಿಂಗ್‌ ಚೌಹಾಣ್‌ (ವಿಧಿಶಾ), ದಿಗ್ವಿಜಯ್‌ ಸಿಂಗ್‌ (ರಾಜಗಢ), ಶ್ರೀಪಾದ್‌ ನಾಯಕ್‌ (ಗೋವಾ ಉತ್ತರ), ಬದ್ರುದ್ದೀನ್‌ ಅಜ್ಮಲ್‌ (ಧುಬ್ರಿ), ಪ್ರಣಿತಿ ಶಿಂಧೆ (ಸೊಲ್ಲಾಪುರ).
  • ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ
    ಬಿಗಿ ಭದ್ರತೆ: ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ., ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಭದ್ರತಾ ಸಿಬ್ಬಂದಿಯೊಂದಿಗೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ದೇಶದ ಬಹುತೇಕ ಭಾಗದಲ್ಲಿ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆಗೆ ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಂಡಿದೆ.
  • ದೇಶದ 93 ಕ್ಷೇತ್ರಗಳಿಗೆ ಇಂದು ಮತದಾನ
    ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯಲಿದೆ. 10 ರಾಜ್ಯ, 2 ಕೇಂದ್ರಾಡಳಿತ ಪ್ರದೇಶದ ಒಟ್ಟು 93 ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 1,531 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೂರನೇ ಹಂತದಲ್ಲಿಒಟ್ಟು 94 ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ ಗುಜರಾತ್‌ನ ಸೂರತ್‌ ಕ್ಷೇತ್ರದಲ್ಲಿಅವಿರೋಧ ಆಯ್ಕೆಯಾಗಿರುವುದರಿಂದ 93 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರಿಗೆ ಮತದಾನ ನಡೆಯಲಿದೆ.
  • ಯಾವ ಯಾವ ರಾಜ್ಯಗಳಲ್ಲಿ ಮತದಾನ?
    ಕರ್ನಾಟಕ 14, ಮಧ್ಯಪ್ರದೇಶ 9, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ಪಶ್ಚಿಮ ಬಂಗಾಳ 4, ಛತ್ತೀಸ್‌ಗಢ 7, ದಾದ್ರಾ ನಗರ್‌ ಹವೇಲಿ 1, ದಿಯು ದಾಮನ್‌ 1, ಅಸ್ಸಾಂ 4, ಬಿಹಾರ 5, ಗೋವಾ 2, ಗುಜರಾತ್‌ 25 (ಒಂದು ಕ್ಷೇತ್ರಕ್ಕೆ ಅವಿರೋಧ ಆಯ್ಕೆ) ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.