ಆ್ಯಪ್ನಗರ

ಇಂದು ಇರುತ್ತೇವೆ ನಾಳೆ ಗೊತ್ತಿಲ್ಲ: ಹುತಾತ್ಮ ಯೋಧನ ಗೆಳೆಯರೊಂದಿಗಿನ ಕೊನೆ ವಾಟ್ಸಪ್ ಸಂದೇಶ ವೈರಲ್!

ಶ್ರೀನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾದ 21 ವರ್ಷದ ವೀರ ಯೋಧ ಯಶ್ ದೇಶ್‌ಮುಖ್, ದಾಳಿಯ ಹಿಂದಿನ ದಿನ ತನ್ನ ಗೆಳೆಯರೊಂದಿಗೆ ನಡೆಸಿದ ವಾಟ್ಸಪ್ ಚಾಟ್ ಇದೀಗ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

Vijaya Karnataka Web 27 Nov 2020, 10:49 pm
ಜಲಗಾಂವ್: 'ಸೈನಿಕನ ಜೀವನದ ಬಗ್ಗೆ ಏನು ಹೇಳಬೇಕು, ಇಂದು ಇರುತ್ತೇವೆ ನಾಳೆ ಇರೋದಿಲ್ಲ..' ಇದು ನಿನ್ನೆ(ನ.26-ಗುರುವಾರ) ಶ್ರೀನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತನಾದ ವೀರ ಯೋಧ, ತನ್ನ ಗೆಳೆಯರಿಗೆ ಕಳುಹಿಸಿದ ಕೊನೆಯ ವಾಟ್ಸಪ್ ಸಂದೇಶ.
Vijaya Karnataka Web Yash Deshmukh
ಹುತಾತ್ಮ ಯೋಧ ಯಶ್ ದೇಶ್‌ಮುಖ್


ಹೌದು ಶ್ರೀನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾದ 21 ವರ್ಷದ ವೀರ ಯೋಧ ಯಶ್ ದೇಶ್‌ಮುಖ್, ದಾಳಿಯ ಹಿಂದಿನ ದಿನ ತನ್ನ ಗೆಳೆಯರೊಂದಿಗೆ ನಡೆಸಿದ ವಾಟ್ಸಪ್ ಚಾಟ್ ಇದೀಗ ಎಲ್ಲರ ಕಣ್ಣಾಲಿಗಳನ್ನು ತುಂಬಿಸಿದೆ.

ತನ್ನ ಗೆಳೆಯರೊಂದಿಗೆ ವಾಟ್ಸಪ್‌ನಲ್ಲಿ ಮಾತನಾಡಿದ್ದ ಯಶ್ ದೇಶ್‌ಮುಖ್, ಊರಿನ ಜನರ ಯೋಗಕ್ಷೇಮ ವಿಚಾರಿಸಿದ್ದಾನೆ. ಈ ವೇಳೆ ಆತನ ಗೆಳೆಯರು ನಿನ್ನ ಜೀವನ ಹೇಗಿದೆ ಎಂದು ಕೇಳಿದ್ದಾರೆ.

ನಾನು ಚೆನ್ನಾಗಿದ್ದೇನೆ, ಆದರೆ ಯೋಧನ ಜೀವನ ಬಗ್ಗೆ ಏನು ಹೇಳಲು ಬರುವುದಿಲ್ಲ. ಆತ ಇಂದು ಇರುತ್ತಾನೆ ನಾಳೆ ಇರುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾನೆ.

ಶ್ರೀನಗರದಲ್ಲಿ ಗಸ್ತಿನಲ್ಲಿದ್ದ ಸೇನಾ ಪಡೆ ಮೇಲೆ ಉಗ್ರರ ದಾಳಿ, ಇಬ್ಬರು ಸೈನಿಕರು ಸಾವು

ಇದಾದ ಮರುದಿನವೇ ಅಂದರೆ ಗುರುವಾರ ಯಶ್ ದೇಶ್‌ಮುಖ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾಗಿದ್ದು, ಆತನ ಗೆಳೆಯರ ನೋವು ಹೇಳತೀರದಾಗಿದೆ.


ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಚಲೀಸ್‌ಗಾಂಬವ್ ತಾಲೂಕಿನ ಯಶ್ ದೇಶ್‌ಮುಖ್ ಕೇವಲ ತನ್ನ 21ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದು, ಕೃಷಿಕರಾದ ತಂದೆ ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾನೆ.

ಮೊದಲಿನಿಂದಲೂ ಸೇನೆಗೆ ಸೇರುಉವ ಕನಸು ಕಂಡಿದ್ದ ಯಶ್ ದೇಶ್‌ಮುಖ್, ಇದಕ್ಕಾಗಿ ಭಾರೀ ಶ್ರಮಪಟ್ಟಿದ್ದ. ಬೆಳಗಾವಿಯಲ್ಲಿ ನಡೆದ ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೊನೆಗೂ ಮರಾಠಾ ಲೈಟ್ ಇನ್ಫೆಂಟ್ರಿಗೆ ಸೇರ್ಪಡೆಗೊಂಡ ಯಶ್, ಸೇನೆಗೆ ಸೇರಿ ಒಂದು ಒಂದು ವರ್ಷದಲ್ಲಿ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ.

ಜಮ್ಮು-ಕಾಶ್ಮೀರ: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು ಭಾರತೀಯ ಯೋಧರು ಹುತಾತ್ಮ!

ಇದೀಗ ಯಶ್ ದೇಶ್‌ಮುಖ್ ವಾಟ್ಸಪ್ ಸಂದೇಶ ಭಾರೀ ವೈರಲ್ ಆಗಿದ್ದು, ಆತನ ಕೊನೆಯ ಸಂದೇಶಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ