ಆ್ಯಪ್ನಗರ

ತಿರುಪತಿ: ಭಕ್ತರಿಂದ ಟಿಪ್ಸ್ ಪಡೆದ 243 ಕ್ಷೌರಿಕರ ವಜಾ

ಭಕ್ತರಿಂದ ಹಣ ಪಡೆಯುತ್ತಿದ್ದ ಆರೋಪದ ಮೇಲೆ ತಿರುಪತಿ ದೇವಾಲಯದ ಆಡಳಿತ ಹೊಣೆ ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ… (ಟಿಟಿಡಿ) ಟ್ರಸ್ಟ್‌ 243 ಕ್ಷೌರಿಕರನ್ನು ವಜಾಗೊಳಿಸಿದೆ...

Agencies 16 Oct 2017, 10:36 am

ತಿರುಪತಿ: ಭಕ್ತರಿಂದ ಹಣ ಪಡೆಯುತ್ತಿದ್ದ ಆರೋಪದ ಮೇಲೆ ತಿರುಪತಿ ದೇವಾಲಯದ ಆಡಳಿತ ಹೊಣೆ ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ… (ಟಿಟಿಡಿ) ಟ್ರಸ್ಟ್‌ 243 ಕ್ಷೌರಿಕರನ್ನು ವಜಾಗೊಳಿಸಿದೆ.

ದರ್ಶನ ಪಡೆಯುವುದಕ್ಕೂ ಮುನ್ನ ಮುಡಿ ಕೊಡಲು ಇಚ್ಛಿಸುವ ಭಕ್ತಾದಿಗಳಿಗೆ ಉಚಿತ ಸೌಲಭ್ಯ ನೀಡುವುದು ಟಿಟಿಡಿ ನಿಯಮವಾಗಿದೆ. ಆದರೆ ಮುಡಿ ಕೊಡುವ ಭಕ್ತರಿಂದ ಕ್ಷೌರಿಕರು 10 ರಿಂದ 50 ರೂಪಾಯಿ ಹಣ ಪಡೆಯುತ್ತಿದ್ದರೆಂದು ಭಕ್ತಾದಿಗಳು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟಿಟಿಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಷೌರಿಕರಿಗೆ ನೋಟೀಸ್‌ ಜಾರಿ ಮಾಡಿತ್ತು.

ನೋಟಿಸ್‌ ಜಾರಿಗೊಳಿಸಿದ ಬೆನ್ನಲ್ಲೇ, ಟಿಟಿಡಿ 243 ಕ್ಷೌರಿಕರನ್ನು ವಜಾಗೊಳಿಸಿದೆ. ಟಿಟಿಡಿ ಆದೇಶವನ್ನು ಪ್ರಶ್ನಿಸಿ ಕ್ಷೌರಿಕರು ಪ್ರತಿಭಟನೆ ನಡೆಸುತ್ತಿದ್ದು, ಈ ಕ್ರಮದಿಂದಾಗಿ ತಮ್ಮ ಜೀವನ ನಿರ್ವಹಣೆ ಕಷ್ಟವಾಗಲಿದೆ, ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಆದೇಶವನ್ನು ವಾಪಸ್‌ ಪಡೆಯಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ