ಆ್ಯಪ್ನಗರ

ಅಂಡಮಾನ್‌ ದ್ವೀಪಗಳಿಗೆ ಮರುನಾಮಕರಣ

''ರೋಸ್‌ ಐಲ್ಯಾಂಡ್‌ ಅನ್ನು ನೇತಾಜಿ ಸುಭಾಷ್‌ಚಂದ್ರ ಬೋಸ್‌ ದ್ವೀಪವೆಂದು, ನೀಲ್‌ ಐಲ್ಯಾಂಡ್‌ ಅನ್ನು ಶಾಹಿದ್‌ ದ್ವೀಪವೆಂದು, ಹ್ಯಾವ್‌ಲಾಕ್‌ ಐಲ್ಯಾಂಡ್‌ ಅನ್ನು ಸ್ವರಾಜ್‌ ದ್ವೀಪ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ,'' ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Vijaya Karnataka 26 Dec 2018, 5:00 am
ಹೊಸದಿಲ್ಲಿ: ಅಂಡಮಾನ್‌-ನಿಕೋಬಾರ್‌ನಲ್ಲಿನ ಮೂರು ಪ್ರಸಿದ್ಧ ದ್ವೀಪಗಳ ಹೆಸರು ಬದಲಿಸಲು ಕೇಂದ್ರ ಸರಕಾರ ಮುಂದಾಗಿದೆ. ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 75ನೇ ಪೋರ್ಟ್‌ಬ್ಲೇರ್‌ ಭೇಟಿಯ 75ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗಿಯಾಗಲು ದ್ವೀಪ ಸಮೂಹಕ್ಕೆ ತೆರಳುವ ಪ್ರಧಾನಿ ನರೇಂದ್ರ ಮೋದಿ ಅವರು ಮರುನಾಮಕರಣ ಮಾಡುವ ಸಾಧ್ಯತೆ ಇದೆ.
Vijaya Karnataka Web andaman


''ರೋಸ್‌ ಐಲ್ಯಾಂಡ್‌ ಅನ್ನು ನೇತಾಜಿ ಸುಭಾಷ್‌ಚಂದ್ರ ಬೋಸ್‌ ದ್ವೀಪವೆಂದು, ನೀಲ್‌ ಐಲ್ಯಾಂಡ್‌ ಅನ್ನು ಶಾಹಿದ್‌ ದ್ವೀಪವೆಂದು, ಹ್ಯಾವ್‌ಲಾಕ್‌ ಐಲ್ಯಾಂಡ್‌ ಅನ್ನು ಸ್ವರಾಜ್‌ ದ್ವೀಪ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ,'' ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿಂಗಳ ಹಿಂದಷ್ಟೇ ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಚಂದ್ರಕುಮಾರ್‌ ಬೋಸ್‌ ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿದ್ದರು.

ಪ್ರಧಾನಿ ಮೋದಿ ಅವರು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಜತೆಗೂಡಿ ಡಿ.30ರಂದು ಅಂಡಮಾನ್‌-ನಿಕೋಬಾರ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ವಿಶೇಷ ಅಂಚೆಚೀಟಿ ಹಾಗೂ ನಾಣ್ಯ ಬಿಡುಗಡೆ ಮಾಡುವುದರ ಜತೆಗೆ, 150 ಮೀಟರ್‌ ಎತ್ತರದ ರಾಷ್ಟ್ರಧ್ವಜವನ್ನು ಅನಾವರಣ ಮಾಡಲಿದ್ದಾರೆ.

ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರು 1943ರ ಡಿಸೆಂಬರ್‌ 30ರಂದು ಪೋರ್ಟ್‌ಬ್ಲೇರ್‌ಗೆ ಭೇಟಿ ನೀಡಿದ್ದರಲ್ಲದೆ, ಅಂಡಮಾನ್‌-ನಿಕೋಬಾರ್‌ ದ್ವೀಪವು ಬ್ರಿಟಿಷರಿಂದ ಸ್ವತಂತ್ರಗೊಂಡ ಭಾರತದ ಮೊದಲ ಪ್ರದೇಶ ಎಂದು ಘೋಷಿಸಿದ್ದರು. ಜಿಮಖಾನಾ ಮೈದಾನ (ಈಗ ನೇತಾಜಿ ಕ್ರೀಡಾಂಗಣ)ದಲ್ಲಿ ರಾಷ್ಟ್ರ ಧ್ವಜಾರೋಹಣವನ್ನೂ ನೆರವೇರಿಸಿದ್ದರು. ಆ ಸಂದರ್ಭದಲ್ಲಿ ದ್ವೀಪ ಸಮೂಹ ಜಪಾನ್‌ ಹಿಡಿತದಲ್ಲಿತ್ತು.

......

ಯಾವ ದ್ವೀಪದ ಹೆಸರು ಬದಲು?

ರೋಸ್‌ ಐಲ್ಯಾಂಡ್‌ - ನೇತಾಜಿ ಸುಭಾಷ್‌ಚಂದ್ರ ಬೋಸ್‌ ದ್ವೀಪ

ನೀಲ್‌ ಐಲ್ಯಾಂಡ್‌ - ಶಾಹಿದ್‌ ದ್ವೀಪ

ಹ್ಯಾವ್‌ಲಾಕ್‌ ಐಲ್ಯಾಂಡ್‌ - ಸ್ವರಾಜ್‌ ದ್ವೀಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ