ಆ್ಯಪ್ನಗರ

ಭಯೋತ್ಪಾದಕ ಸಂಘಟನೆ ನಂಟು ಶಂಕೆ: 4 ವಿದ್ಯಾರ್ಥಿಗಳ ಬಂಧನ

ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯ ಮೇರೆಗೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ...

Vijaya Karnataka 11 Oct 2018, 11:07 am
ಜಲಂಧರ್‌: ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯ ಮೇರೆಗೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
Vijaya Karnataka Web arrest


ಬಂಧಿತರನ್ನು ಝಹೀದ್‌ ಗುಲ್ಜಾರ್‌, ಮೊಹಮ್ಮದ್‌ ಇದ್ರಿಸ್‌ ಶಾ, ನದೀಮ್‌ ಮತ್ತು ಯೂಸುಫ್‌ ರಫೀಕ್‌ ಭಟ್‌ ಎಂದು ಗುರುತಿಸಲಾಗಿದೆ.

ಪಂಜಾಬ್‌ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿರುವ ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ವಶಪಡಿಕೊಳ್ಳಲಾಗಿದೆ.

ಬುಧವಾರ ನಸುಕಿನ ವೇಳೆ ನಡೆದ ಈ ಕಾರ್ಯಾಚರಣೆಯಲ್ಲಿ ಸುಮಾರು 90 ಪೊಲೀಸರು ಭಾಗಿಯಾಗಿದ್ದರು.

ಬಂಧಿತ ವಿದ್ಯಾರ್ಥಿಗಳಿಗೆ ಜೈಷೆ ಮಾತ್ರವಲ್ಲದೆ, 'ಅನ್ಸಾರ್‌ ಗಝವತ್‌ ಉಲ್‌ ಹಿಂದ್‌' ಸಂಘಟನೆ ಜತೆಗೂ ನಂಟಿರುವುದು ಗೊತ್ತಾಗಿದೆ.

ಈ ಉಗ್ರ ಜಾಲವನ್ನು ನಿರ್ವಹಣೆ ಮಾಡುತ್ತಿದ್ದ ಮುಖ್ಯಸ್ಥನನ್ನು ಕೂಡ ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ