ಆ್ಯಪ್ನಗರ

ಬರ್ತ್‌ ಡೇ ವೇಳೆ ಬಲೂನು ಒಡೆಯುವ ಮುನ್ನ ಯೋಚಿಸಿ !

ಆಸ್ಪತ್ರೆಯೊಂದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ಹುಟ್ಟುಹಬ್ಬದ ಆಚರಣೆ ವೇಳೆ ಬಲೂನು ಒಡೆದು ಸಂಭವಿಸಿದ ಅವಘಡದಲ್ಲಿ ನಾಲ್ವರು ವೈದ್ಯರು ಗಂಭೀರ ಗಾಯಗೊಂಡಿದ್ದಾರೆ.

Mumbai Mirror 18 Jan 2017, 4:38 pm
ಮುಂಬೈ: ಆಸ್ಪತ್ರೆಯೊಂದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ಹುಟ್ಟುಹಬ್ಬದ ಆಚರಣೆ ವೇಳೆ ಬಲೂನು ಒಡೆದು ಸಂಭವಿಸಿದ ಅವಘಡದಲ್ಲಿ ನಾಲ್ವರು ವೈದ್ಯರು ಗಂಭೀರ ಗಾಯಗೊಂಡ ಘಟನೆ ಮುಂಬಯಿಯ ಪರೆಲ್‌ನ ವಾಡಿಯಾ ಆಸ್ಪತ್ರೆಯಲ್ಲಿ ನಡೆದಿದೆ.
Vijaya Karnataka Web 4 injured after balloons explode
ಬರ್ತ್‌ ಡೇ ವೇಳೆ ಬಲೂನು ಒಡೆಯುವ ಮುನ್ನ ಯೋಚಿಸಿ !


ಆಸ್ಪತ್ರೆಯ ಮುಖ್ಯ ಅಧಿಕಾರಿ ಡಾ. ಮಿನ್ನಿ ಬದನ್‌ವಾಲ ಅವರು ತಮ್ಮ 54ನೇ ಹುಟ್ಟು ಹಬ್ಬವನ್ನು ಆಸ್ಪತ್ರೆಯ ಸಿಬ್ಬಂದಿ ವರ್ಗದ ಜತೆ ಆಚರಿಸುತ್ತಿದ್ದರು. ಆವರಣದಲ್ಲಿ ನಿಗದಿ ಮಾಡಿದ ಸ್ಥಳಕ್ಕೆ ಬದನ್ವಾಲ್‌ ಅವರು ಆಗಮಿಸುತ್ತಿದ್ದಂತೆಯೇ, ಆಸ್ಪತ್ರೆ ಸಿಬ್ಬಂದಿಗಳು ಪಟಾಕಿ ಹೊಡೆದು ಬಲೂನು ಹಾರಿಸಿ ಬಟ್ಟು ಬರ್ತ್‌ಡೇ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಬದನ್‌ವಾಲ ಅವರು ಕೇಕ್‌ ಕತ್ತರಿಸುತ್ತಿದ್ದಂತೆಯೇ ಗಾಳಿ ತುಂಬಿದ ಬಲೂನು ಒಡೆದು ದೊಡ್ಡ ಮಟ್ಟದಲ್ಲಿ ಸ್ಪೋಟಿಸಿ ಸದ್ದು ಮಾಡಿದೆ.


ಘಟನೆಯುಲ್ಲಿ ನಾಲ್ವರು ಗಂಭೀರ ಗಾಯಗೊಂಡರೆ ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ನಾಲ್ವರ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ.

ಘಟನೆ ಕುರಿತು ಹೆಸರು ಹೇಳಲು ಇಚ್ಚಿಸದ ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಾತನಾಡಿದ್ದು, ಆಸ್ಪತ್ರೆಯ ಸುತ್ತ ಪಟಾಕಿ ಹಚ್ಚುವುದು ನಿಷೇದವಿದ್ದರೂ, ಬರ್ತ್‌ಡೇ ಅಂಗವಾಗಿ ಪಟಾಕಿ ಸಿಡಿಸಲಾಗಿದೆ, ಈ ವೇಳೆ ಪಟಾಕಿಯ ಕೆಲ ತುಣುಕುಗಳು ಬಲೂನ್‌ ಮೇಲೂ ಬಿದ್ದಿರಬಹುದು. ಹಾಗಾಗಿ ಬಲೂನು ಸ್ಪೋಟಗೊಂಡಿರುವ ಸಾಧ್ಯತೆಗಳಿವೆ ಎಂದಿದ್ದಾರೆ. ಆಡಿಯೋಲಾಜಿಸ್ಟ್ ಸಾದಿಯಾ ಅನ್ಸಾರಿ ಘಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದು, ಇವರ ದೇಹದ ಶೇ.40 ಭಾಗದಷ್ಟು ಸುಟ್ಟುಕರಕಲಾಗಿದೆ.

ಇಷ್ಟೆಲ್ಲಾ ಗಲಾಟೆ ಸಂಭವಿಸಿ ಗ್ಯಾಸ್‌ ತುಂಬಿದ ಬಲೂನು ಹಾಗೂ ಪಟಾಕಿಯಿಂದ ಉಂಟಾದ ಅವಘಡಕ್ಕೆ ಈ ವರೆಗೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಪೊಲೀಸರ ಬಳಿ ದೂರು ದಾಖಲಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ