ಆ್ಯಪ್ನಗರ

4 ವರ್ಷದ ಪದವಿ ಕೋರ್ಸ್‌ ಮರುಜಾರಿ?

ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮೂರು ವರ್ಷಗಳ ಪದವಿ ಕೋರ್ಸ್‌ಗಳ ಗುಣಮಟ್ಟ ಕುಸಿಯುತ್ತಿದ್ದು ಸಂಶೋಧನೆ ಹಾಗೂ ತರಬೇತಿಗೆ ಹೆಚ್ಚು ಒತ್ತುಕೊಡುವ ನಿಟ್ಟಿನಲ್ಲಿ 4 ವರ್ಷಗಳ ಪದವಿ ಕೋರ್ಸ್‌ಗಳನ್ನು ಪರಿಚಯಿಸಲಾಗಿತ್ತಾದರೂ ನಾನಾ ಕಾರಣಗಳಿಂದ 5 ವರ್ಷದ ಹಿಂದೆ ಅದನ್ನು ರದ್ದುಪಡಿಸಲಾಗಿತ್ತು.

Agencies 5 Aug 2019, 5:00 am
ಹೊಸದಿಲ್ಲಿ: ಐದು ವರ್ಷಗಳ ಹಿಂದೆ ರದ್ದಾಗಿದ್ದ 4 ವರ್ಷಗಳ ಪದವಿ ಕೋರ್ಸ್‌ಗಳನ್ನು ಮರು ಪರಿಚಯಿಸುವಂತೆ ವಿಶ್ವವಿದ್ಯಾಲಯದ ಅನುದಾನ ಆಯೋಗದ (ಯುಜಿಸಿ) ಸಮಿತಿಯು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು(ಐಐಎಸ್ಸಿ ) ಮಾಜಿ ನಿರ್ದೇಶಕ ಪಿ. ಬಲರಾಮ್‌ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯು ಕೆಲ ದಿನಗಳ ಹಿಂದಷ್ಟೇ ಸರಕಾರಕ್ಕೆ ವರದಿ ಸಲ್ಲಿಸಿದೆ.
Vijaya Karnataka Web 4 years graduation course to resume again
4 ವರ್ಷದ ಪದವಿ ಕೋರ್ಸ್‌ ಮರುಜಾರಿ?


ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮೂರು ವರ್ಷಗಳ ಪದವಿ ಕೋರ್ಸ್‌ಗಳ ಗುಣಮಟ್ಟ ಕುಸಿಯುತ್ತಿದ್ದು ಸಂಶೋಧನೆ ಹಾಗೂ ತರಬೇತಿಗೆ ಹೆಚ್ಚು ಒತ್ತುಕೊಡುವ ನಿಟ್ಟಿನಲ್ಲಿ 4 ವರ್ಷಗಳ ಪದವಿ ಕೋರ್ಸ್‌ಗಳನ್ನು ಪರಿಚಯಿಸಲಾಗಿತ್ತಾದರೂ ನಾನಾ ಕಾರಣಗಳಿಂದ 5 ವರ್ಷದ ಹಿಂದೆ ಅದನ್ನು ರದ್ದುಪಡಿಸಲಾಗಿತ್ತು. ಪ್ರಾಯೋಗಿಕ ತರಬೇತಿ ಹಾಗೂ ಸಂಶೋಧನೆಗೆ ಹೆಚ್ಚು ಒತ್ತು ಸಿಗಲಿರುವುದರಿಂದ 4 ವರ್ಷದ ಪದವಿ ಕೋರ್ಸ್‌ಗಳನ್ನು ಪರಿಚಯಿಸುವಂತೆ ಸಮಿತಿಯು ವರದಿಯಲ್ಲಿ ಶಿಫಾರಸು ಮಾಡಿದೆ. ಇಂತಹ ಕೋರ್ಸ್‌ ಪರಿಚಯಿಸುವ ವಿವಿಗಳ ಸಂಖ್ಯೆ ಹೆಚ್ಚಿಸುವಂತೆ ಸಲಹೆ ಮಾಡಿದೆ. ಅಲ್ಲದೇ ಹೊಸ ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಸುಧಾರಣೆಗೂ ಹಲವು ಸಲಹೆಗಳನ್ನು ಕೊಟ್ಟಿದೆ.

ಹಾಲಿ ಇರುವ ಎಂ.ಎ ಮತ್ತು ಎಂ.ಎಸ್ಸಿ ಕೋರ್ಸ್‌ಗಳಲ್ಲಿ ರಿಸರ್ಚ್‌ ಪ್ರಾಜೆಕ್ಟ್ ಸೇರಿಸುವಂತೆ ಹಾಗೂ ಉದ್ಯೋಗಾವಕಾಶಗಳು ಕಡಿಮೆ ಇರುವ ಸ್ಪೆಷಲೈಸ್ಡ್‌ ಸಬ್ಜೆಕ್ಟ್ ಆಧಾರಿತ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವಂತೆಯೂ ಶಿಫಾರಸು ಮಾಡಿದೆ.

ಶಿಕ್ಷಣ ನೀತಿಯಲ್ಲೂ ಪ್ರಸ್ತಾಪ!

ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್‌ ನೇತೃತ್ವದ ಸಮಿತಿ ಸಲ್ಲಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಲ್ಲಿಯೂ ನಾಲ್ಕು ವರ್ಷದ ಪದವಿ ಕೋರ್ಸ್‌ ಆರಂಭಿಸಲು ಸಲಹೆ ಮಾಡಲಾಗಿತ್ತು. ಮೂರು ವರ್ಷ ಹಾಗೂ ನಾಲ್ಕು ವರ್ಷ ಎರಡೂ ರೀತಿಯ ಪದವಿ ಕೋರ್ಸ್‌ಗೆ ಅವಕಾಶ ಇರಬೇಕು, ನಾಲ್ಕು ವರ್ಷದ ಪದವಿಯಲ್ಲಿ ಸಂಶೋಧನೆಗೆ ಒತ್ತು ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ