ಆ್ಯಪ್ನಗರ

ಪಂಜಾಬ್‌ ಪಿಯುಸಿ ವಿದ್ಯಾರ್ಥಿನಿಯರಿಗೆ ವಿತರಿಸಲು ರೆಡಿಯಾಯ್ತು 50,000 ಸ್ಮಾರ್ಟ್‌ಫೋನ್ಸ್‌..!

11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌ ವಿತರಿಸಲು ಪಂಜಾಬ್ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮೊದಲ ಬ್ಯಾಚ್‌ನ 50,000 ಸ್ಮಾರ್ಟ್‌ಫೋನ್‌ಗಳು ವಿದ್ಯಾರ್ಥಿನಿಯರಿಗೆ ವಿತರಿಸಲು ಸಿದ್ಧವಾಗಿದೆ ಎಂದು ಸಿಎಂ ಕ್ಯಾ. ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

Hindustan Times 29 Jul 2020, 10:41 am
ಪಂಜಾಬ್: ಆನ್‌ಲೈನ್ ಶಿಕ್ಷಣಕ್ಕೆ ಸಹಾಯಕಾರಿಯಾಗಲೆಂದು 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌ ವಿತರಿಸಲು ಪಂಜಾಬ್ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮೊದಲ ಬ್ಯಾಚ್‌ನ 50,000 ಸ್ಮಾರ್ಟ್‌ಫೋನ್‌ಗಳು ವಿದ್ಯಾರ್ಥಿನಿಯರಿಗೆ ವಿತರಿಸಲು ಸಿದ್ಧವಾಗಿದೆ ಎಂದು ಸಿಎಂ ಕ್ಯಾ. ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
Vijaya Karnataka Web Amarindar singh


ರಫೇಲ್‌ ಯುದ್ಧ ವಿಮಾನ ಲ್ಯಾಂಡಿಗ್‌ಗೆ ಸಕಲ ಸಿದ್ಧತೆ: ಚೀನಾದ ಜೆ-20ಗಿಂತ ಬಲಿಷ್ಠ ಈ

ದೇಶದೆಲ್ಲೆಡೆ ಕೊರೊನಾ ವೈರಸ್ ಬಾಧಿಸಿರುವ ಹಿನ್ನೆಲೆ ಈ ವರ್ಷ ಆನ್‌ಲೈನ್ ಕ್ಲಾಸ್‌ಗಳನ್ನು ಮಾಡಲಾಗ್ತಿದ್ದು, ಹೀಗಾಗಿ ಮಕ್ಕಳಿಗೆ ಅನುಕೂಲವಾಗಲಿ ಅನ್ನುವ ದೃ‍ಷ್ಟಿಯಿಂದ ಯಾರ ಬಳಿ ಸ್ಮಾರ್ಟ್‌ ಫೋನ್‌ ಇಲ್ಲವೋ ಅವರಿಗೆ ಫೋನ್ ಕೊಡಿಸಲು ಪಂಜಾಬ್‌ ರಾಜ್ಯ ಸರ್ಕಾರ ಮುಂದಾಗಿದೆ.

ಭಾರತದ ವಿಐಪಿಗಳ ಹತ್ಯೆಗೆ ತಾಲಿಬಾನ್‌ನ 20 ಉಗ್ರರಿಗೆ ಪಾಕಿಸ್ತಾನ ಸೇನೆಯಿಂದ ತರಬೇತಿ!

2017ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌ ಕೊಡುವ ಆಶ್ವಾಸನೆಯನ್ನು ಪಂಜಾಬ್ ಕಾಂಗ್ರೆಸ್‌ ನೀಡಿತ್ತು. ಇದೀಗ ಕೊರೊನಾ ಕಾಲದಲ್ಲಿ ಆನ್‌ಲೈನ್‌ ಕ್ಲಾಸ್‌ಗೆ ಸ್ಮಾರ್ಟ್‌ಫೋನ್ ಅನಿವಾರ್ಯವಾಗಿರುವುದರಿಂದ ಪಂಜಾಬ್ ಸರ್ಕಾರ ಫೋನ್ ಕೊಡಿಸೋಕೆ ಮುಂದಾಗಿದ್ದು, ಅತ್ತ ತಾನು ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಯನ್ನೂ ತೀರಿಸಿದಂತಾಗಿದೆ.

ಲಡಾಖ್‌ ಗಡಿಯಲ್ಲಿರುವ ಯೋಧರಿಗೆ ಕಡು ಚಳಿಯೇ ಸವಾಲು, ಆಕ್ಸಿಜನ್‌ ಪ್ರಮಾಣ ತೀರಾ ಕಡಿಮೆ!

ಇದೇ ವೇಳೆ ಪಂಜಾಬ್ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಅವರು, 2017ರ ವಿಧಾನಸಭಾ ಚುನಾವಣೆ ವೇಳೆ ನಾವು ನೀಡಿದ್ದ 562 ಆಶ್ವಾಸನೆಗಳ ಪೈಕಿ 435 ಅಂಶಗಳನ್ನು ಜಾರಿ ತಂದಿದ್ದೇವೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ