ಆ್ಯಪ್ನಗರ

ವಲಸೆ ಕಾರ್ಮಿಕರ ಮೇಲೆ ಜವರಾಯನ ಅಟ್ಟಹಾಸ: ಮತ್ತೊಂದು ಅಪಘಾತದಲ್ಲಿ 6 ಜನ ಸಾವು!

ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲ ಒಟ್ಟು 6 ಮಂದಿ ವಲಸೆ ಕಾರ್ಮಿಕರು ಸಾವನಪ್ಪಿದ್ದಾರೆ

ANI 16 May 2020, 3:50 pm
ಸಾಗರ್‌: ಇಂದು ಬೆಳಗ್ಗೆ ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿ 24 ವಲಸೆ ಕಾರ್ಮಿಕರು ಸಾವನಪ್ಪಿರುವ ಸುದ್ದಿ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲೂ ವಲಸೆ ಕಾರ್ಮಿಕರ ಮೇಲೆ ಯಮ ತನ್ನ ಅಟ್ಟಹಾಸ ಮೆರೆದಿದ್ದಾನೆ. ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲ ಒಟ್ಟು 6 ಮಂದಿ ವಲಸೆ ಕಾರ್ಮಿಕರು ಸಾವನಪ್ಪಿದ್ದಾರೆ.
Vijaya Karnataka Web ezgifcom-webp-to-jpg---2020-03-27T174017577_5e7dedd17de26


16ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದಿಂದ ಲಾರಿ ಮೂಲಕ ಈ ಎಲ್ಲಾ ವಲಸೆ ಕಾರ್ಮಿಕರು ತಮ್ಮ ಉತ್ತರ ಪ್ರದೇಶದ ಗ್ರಾಮಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಲಾರಿ ಏಕಾಏಕಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.


ಈ ವೇಳೆ ವಾಹನದಲ್ಲಿದ್ದ 6 ಕಾರ್ಮಿಕರು ಸಾವನಪ್ಪಿದ್ದಾರೆ. 16 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದು ಮುಂಜಾನೆ 24 ಜನ ವಲಸೆ ಕಾರ್ಮಿಕರು ಭೀಕರ ಅಪಘಾತದಲ್ಲಿ ಸಾವನಪ್ಪಿದ್ದರು. ಇನ್ನು ನಾಲ್ಕು ದಿನದ ಹಿಂದೆ ರೈಲಿನ ಹಳಿಯಲ್ಲಿ ಮಲಗಿದ್ದ 16 ಮಂದಿ ಕಾರ್ಮಿಕರ ಮೇಲೆ ರೈಲು ಹರಿದ ಹಿನ್ನೆಲೆ ಅಸುನೀಗಿದ್ದರು. ಮನೆಗೆ ಸೇರುವ ಆಸೆಯಲ್ಲಿ ಊರಿಗೆ ಹೋಗುತ್ತಿರುವ ವಲಸೆ ಕಾರ್ಮಿಕರು ಸಾವನಪ್ಪುತ್ತಿದ್ದಾರೆ.

ಕೊರೊನಾ ರೋಗಿಗಳಿಗೆ ವೆಂಟಿಲೇಟರ್‌ ತಯಾರಿಸಿದ ಸಾಫ್ಟ್‌ವೇರ್‌ ಯುವಕರ ತಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ