ಆ್ಯಪ್ನಗರ

ಉತ್ತರ ಪ್ರದೇಶ: ವಿಷಾನಿಲ ಸೇವಿಸಿ ಮೂವರು ಮಕ್ಕಳು ಸೇರಿ 7 ಕಾರ್ಮಿಕರ ಸಾವು

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಗುರುವಾರ ವಿಷಾನಿಲ ಸೇವಿಸಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.ಕಾರ್ಖಾನೆ ಮಾಲೀಕ ತಲೆ ಮರೆಸಿಕೊಂಡಿದ್ದಾನೆ.

Vijaya Karnataka Web 7 Feb 2020, 9:41 am
ಲಖನೌ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಗುರುವಾರ ವಿಷಾನಿಲ ಸೇವಿಸಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಜಲಾಲ್‌ಪುರ ಗ್ರಾಮದಲ್ಲಿನ ನೆಲಹಾಸು (ಕಾರ್ಪೆಟ್‌) ತಯಾರಿಕೆ ಕಾರ್ಖಾನೆಯಲ್ಲಿ ದುರ್ಘಟನೆ ಸಂಭವಿಸಿದೆ. ಕಾರ್ಖಾನೆ ಮಾಲೀಕ ತಲೆ ಮರೆಸಿಕೊಂಡಿದ್ದಾನೆ.
Vijaya Karnataka Web acid factory


''ಪಕ್ಕದ ಆ್ಯಸಿಡ್‌ ಕಾರ್ಖಾನೆಯ ಟ್ಯಾಂಕರ್‌ ಅನ್ನು ಕಾರ್ಪೆಟ್‌ ಫ್ಯಾಕ್ಟರಿ ಸಮೀಪ ತೊಳೆಯಲಾಗಿತ್ತು. ಟ್ಯಾಂಕರ್‌ನಿಂದ ಸೋರಿಕೆಯಾದ ವಿಷಾನಿಲವು ಕಾರ್ಪೆಟ್‌ ಕಾರ್ಖಾನೆಯ ಕಾರ್ಮಿಕರು ಮತ್ತು ಅವರ ಜತೆಗಿದ್ದ ಮಕ್ಕಳು ಉಸಿರಾಡುವಾಗ ದೇಹ ಪ್ರವೇಶಿಸಿರುವ ಸಾಧ್ಯತೆ ಇದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿಕೆಲವು ಶ್ವಾನಗಳು ಕೂಡ ಸತ್ತುಬಿದ್ದಿರುವುದು ಪತ್ತೆಯಾಗಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತದೆ,'' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೃತ ಕಾರ್ಮಿಕರು ಮತ್ತು ಮಕ್ಕಳ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರಲ್ಲದೇ, ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ