ಆ್ಯಪ್ನಗರ

ಪಾಕ್‌ ಮೂಲದ ಉಗ್ರರ ಬೇಟೆ

ಜಮ್ಮು-ಕಾಶ್ಮೀರದ ಕೆರನ್‌ ಸೆಕ್ಟರ್‌ನಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ಐದರಿಂದ ಏಳು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಇದರಲ್ಲಿ ಉಗ್ರರ ಒಳನುಸುಳುವಿಕೆಗೆ ನೆರವು ನೀಡುತ್ತಿದ್ದ ಪಾಕ್‌ ಗಡಿ ಭದ್ರತಾ ಪಡೆ ಯೋಧರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

Vijaya Karnataka 4 Aug 2019, 5:00 am
ಹೊಸದಿಲ್ಲಿ/ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ ಮತ್ತು ತೀವ್ರ ಕಟ್ಟೆಚರದಿಂದ ಹೆಚ್ಚಿದ ಆತಂಕದ ನಡುವೆಯೇ ಭಾರತ-ಪಾಕ್‌ ಗಡಿಯಲ್ಲಿ ಭಾರತೀಯ ಸೇನೆ ಶನಿವಾರ ಉಗ್ರ ಬೇಟೆ ತೀವ್ರಗೊಳಿಸಿದೆ.
Vijaya Karnataka Web BNG-0308-2-2-KASHMIR


ಜಮ್ಮು-ಕಾಶ್ಮೀರದ ಕೆರನ್‌ ಸೆಕ್ಟರ್‌ನಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ಐದರಿಂದ ಏಳು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಇದರಲ್ಲಿ ಉಗ್ರರ ಒಳನುಸುಳುವಿಕೆಗೆ ನೆರವು ನೀಡುತ್ತಿದ್ದ ಪಾಕ್‌ ಗಡಿ ಭದ್ರತಾ ಪಡೆ (ಬಾರ್ಡರ್‌ ಆ್ಯಕ್ಷನ್‌ ಟೀಮ್‌- ಬ್ಯಾಟ್‌) ಯೋಧರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಭದ್ರತಾ ಪಡೆಗಳ ಮೇಲೆ ಸರಣಿ ದಾಳಿ ನಡೆಸಲು ಜೈಷೆ ಉಗ್ರರು ಸಂಚು ರೂಪಿಸಿದ್ದು, ಗಡಿ ನುಸುಳಲು ಕಾದು ಕುಳಿತಿದ್ದಾರೆ ಎಂಬ ಗುಪ್ತಚರ ವರದಿಗಳ ನಡುವೆಯೇ ಈ ಕಾರ್ಯಾಚರಣೆ ನಡೆದಿದೆ.

''ಕಳೆದ 36 ಗಂಟೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನದ ಕಡೆಯಿಂದ ಹಲವು ಬಾರಿ ಪ್ರಯತ್ನ ನಡೆದಿದ್ದು, ಸೇನೆಯು ಅವುಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ. ಜಮ್ಮು-ಕಾಶ್ಮೀರದ ಕೆರನ್‌ ಸೆಕ್ಟರ್‌ನಲ್ಲಿ ಭಾರತೀಯ ಸೇನೆಯ ಮುಂಚೂಣಿ ಠಾಣೆಯೊಂದರ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಲಾಯಿತು. ಯೋಧರ ಸಮಯ ಪ್ರಜ್ಞೆಯಿಂದ ವಿಫಲವಾಗಿದೆ, ಐದರಿಂದ ಏಳು ಪಾಕಿಸ್ತಾನಿ ಉಗ್ರರು ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆ,'' ಎಂದು ಭಾರತೀಯ ಸೇನೆಯ ಪ್ರಕಟಣೆ ತಿಳಿಸಿದೆ.

ಇತರೆಡೆ ನಾಲ್ವರು ಉಗ್ರರು ಬಲಿ


ಬಾರಾಮುಲ್ಲಾ ಹಾಗೂ ಶೋಪಿಯಾಜ್‌ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು ನಾಲ್ವರು ಜೈಷೆ ಮೊಹಮ್ಮದ್‌ ಉಗ್ರರನ್ನು ಶನಿವಾರ ಸೇನಾಪಡೆಗಳು ಹತ್ಯೆಗೈದಿವೆ. ಮೃತ ಉಗ್ರರಿಂದ ಸ್ನಿಫರ್‌ ರೈಫಲ್‌, ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮತ್ತು ಪಾಕಿಸ್ತಾನಿ ಸೀಲ್‌ ಹೊಂದಿರುವ ನೆಲಬಾಂಬ್‌ ವಶಪಡಿಸಿಕೊಳ್ಳಲಾಗಿದೆ. ಗಡಿಯಲ್ಲಿ ಪಾಕ್‌ ಉಗ್ರರ ಸಕ್ರಿಯತೆಗೆ ಇದು ಸಾಕ್ಷಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ