ಆ್ಯಪ್ನಗರ

ಎರಡು ದಶಕಗಳಿಂದ ಸೋಂಕು ತಗುಲಿದ ಯಕೃತ್ತಿನೊಂದಿಗೆ ಜೀವನ

''12% ಕಾರ್ಯನಿರ್ವಹಿಸುತ್ತಿರುವ ಯಕೃತ್ತಿನೊಂದಿಗೆ ಜೀವನ ನಡೆಸುತ್ತಿರುವವರು ಇದ್ದಾರೆ. ಆದರೆ ಇಂಥ ಸ್ಥಿತಿ ಯಾರಿಗೂ ಬರಬಾರದು. ನಾನೊಬ್ಬ ಕ್ಷಯರೋಗದಿಂದ ನರಳಿ ಬದುಕುಳಿದಾತ, ಹೆಪಟೈಟಿಸ್‌ ವೈರಾಣು ಸೋಂಕು ತಗುಲಿಯೂಬದುಕುಳಿದಾತ,'' ಎಂದು ಹೇಳಿಕೊಂಡಿದ್ದಾರೆ.

PTI 21 Aug 2019, 5:00 am
ಮುಂಬಯಿ: ತಾವು ಎರಡು ದಶಕಗಳಿಂದ ಶೇ.25ರಷ್ಟು ಮಾತ್ರ ಕಾರ್ಯನಿರ್ವಹಣೆ ಸಾಮರ್ಥ್ಯ‌ ಹೊಂದಿರುವ ಯಕೃತ್ತು ಹೊಂದಿರುವುದಾಗಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಹೇಳಿಕೊಂಡಿದ್ದಾರೆ.
Vijaya Karnataka Web amkitab

''1982ರಲ್ಲಿ ಶೂಟಿಂಗ್‌ ವೇಳೆ ಆದ ಅಪಘಾತದಲ್ಲಿ ಗಾಯಗೊಂಡಾಗ ರಕ್ತದಾನಿಯಿಂದ ಪಡೆದ ರಕ್ತದಲ್ಲಿ ಹೆಪಟೈಟಿಸ್‌ ವೈರಾಣು ಇದ್ದ ಕಾರಣ ನನ್ನ ಯಕೃತ್ತು (ಲಿವರ್‌) ಸಿರ್ಹೋಸಿಸ್‌ಗೆ ತುತ್ತಾಯಿತು. ಆಗ ವೈದ್ಯರು ನನಗೆ ಕೇವಲ 25% ಕಾರ್ಯನಿರ್ವಹಿಸುವ ಶಕ್ತಿಯಿರುವ ಯಕೃತ್ತು ಮಾತ್ರವಿದೆ ಎಂದು ಎಚ್ಚರಿಸಿದರು. ಕಳೆದ 20 ವರ್ಷಗಳಿಂದ ಇದರೊಂದಿಗೆ ಜೀವನ ನಡೆಸುತ್ತಿದ್ದೇನೆ,'' ಎಂದು ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಚ್ಚನ್‌ ಹೇಳಿದ್ದಾರೆ.
''12% ಕಾರ್ಯನಿರ್ವಹಿಸುತ್ತಿರುವ ಯಕೃತ್ತಿನೊಂದಿಗೆ ಜೀವನ ನಡೆಸುತ್ತಿರುವವರು ಇದ್ದಾರೆ. ಆದರೆ ಇಂಥ ಸ್ಥಿತಿ ಯಾರಿಗೂ ಬರಬಾರದು. ನಾನೊಬ್ಬ ಕ್ಷಯರೋಗದಿಂದ ನರಳಿ ಬದುಕುಳಿದಾತ, ಹೆಪಟೈಟಿಸ್‌ ವೈರಾಣು ಸೋಂಕು ತಗುಲಿಯೂಬದುಕುಳಿದಾತ,'' ಎಂದು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ