ಆ್ಯಪ್ನಗರ

ಸಾವಿಗೆ 8 ದಿನ ಮೊದಲು ಮೋದಿಗಾಗಿ ಪ್ರಚಾರ ಮಾಡಬಯಸಿದ್ದ ಪರಿಕ್ಕರ್

ರಫೇಲ್ ಒಪ್ಪಂದದ ಬಳಿಕ ಅಸಮಧಾನಗೊಂಡು ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದನ್ನು ಉಲ್ಲೇಖಿಸಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

Times Now 14 Apr 2019, 6:51 pm
ಹೊಸದಿಲ್ಲಿ: ಗೋವಾದ ಮಾಜಿ ಮುಖ್ಯಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಸಾವನ್ನಪ್ಪುವ 8 ದಿನಗಳ ಮೊದಲು ನರೇಂದ್ರ ಮೋದಿಗಾಗಿ ಪ್ರಚಾರ ನಡೆಸಲು ಬಯಸಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹೇಳಿದ್ದಾರೆ.
Vijaya Karnataka Web Parikkar


ರಫೇಲ್ ಒಪ್ಪಂದದ ಬಳಿಕ ಅಸಮಧಾನಗೊಂಡು ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದನ್ನು ಉಲ್ಲೇಖಿಸಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಕೊಲ್ಹಾಪುರದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಶರದ್ ಪವಾರ್, ರಫೇಲ್ ಒಪ್ಪಂದವನ್ನು ವಿರೋಧಿಸಿದ್ದ ಪರಿಕ್ಕರ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಗೋವಾಕ್ಕೆ ಹಿಂತಿರುಗಿದ್ದರು, ಎಂದು ಆರೋಪಿಸಿದ್ದರು. ಇದನ್ನು ಅಲ್ಲಗಳೆದಿದ್ದ ಫಡ್ನವೀಸ್, ಪರಿಕ್ಕರ್ ಸಾವಿನ ಬಳಿಕ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಬದುಕಿದ್ದರೆ ಇದಕ್ಕೆ ಸ್ಪಷ್ಟ ಉತ್ತರ ನೀಡುತ್ತಿದ್ದರು. ಸಾವನ್ನಪ್ಪುವ 8 ದಿನ ಮೊದಲು ಸಹ ಅವರು ಮೋದಿ ಪರ ಪ್ರಚಾರ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು, ಎಂದಿದ್ದಾರೆ.

ನವೆಂಬರ್ 2014ರಲ್ಲಿ ರಕ್ಷಣಾ ಸಚಿವರಾಗಿ ಪರಿಕ್ಕರ್ ಅಧಿಕಾರ ಸ್ವೀಕರಿಸಿದ್ದರು. ಏಪ್ರಿಲ್ 2015ರಲ್ಲಿ ಪ್ರಧಾನಿ ಮೋದಿ ರಫೇಲ್ ಒಪ್ಪಂದದ ಬಗ್ಗೆ ಘೋಷಿಸಿದ್ದರು ಮತ್ತು ಸೆಪ್ಟೆಂಬರ್ 23, 2016ರಲ್ಲಿ ಒಪ್ಪಂದ ಅಂತಿಮವಾಗಿತ್ತು.

ಗೋವಾ ವಿಧಾನ ಸಭಾ ಚುನಾವಣೆ ಬಳಿಕ ರಕ್ಷಣಾ ಸಚಿವ ಸ್ಥಾನ ತ್ಯಜಿಸಿದ್ದ ಪರಿಕ್ಕರ್ ಮಾರ್ಚ್ 14, 2017ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ