ಆ್ಯಪ್ನಗರ

ಮುಂಗಾರು ಅಧಿವೇಶನ: ಧರಣಿ ನಿಲ್ಲಿಸಿದ ಅಮಾನತುಗೊಂಡ 8 ರಾಜ್ಯಸಭಾ ಸದಸ್ಯರು, ರಾಜ್ಯಸಭೆ ಈಗ ಖಾಲಿ ಖಾಲಿ!

ಸೋಮವಾರ ರಾತ್ರಿಯಿಡಿ ಸಂಸತ್ ಭವನದ ಮುಂದೆ ಈ ಎಂಟು ಸದಸ್ಯರು ಧರಣಿ ಕುಳಿತ್ತಿದ್ದರು. ಇದೀಗ ಧರಣಿಗೆ ಈ ಎಂಟು ಸದಸ್ಯರು ಪೂರ್ಣ ವಿರಾಮ ಇಟ್ಟಿದ್ದಾರೆ. ಇವರೆಲ್ಲ ಈಗಾಗಲೇ ರಾಜ್ಯಸಭೆಯ ಕಲಾಪ ಬಹಿಷ್ಕರಿಸಿ ಬಂದಿರುವ ಸದಸ್ಯರ ಜೊತೆ ಸೇರಿಕೊಂಡಿದ್ದಾರೆ. ದೊಟ್ಟ ಮಟ್ಟದ ಪ್ರತಿಭಟನೆಗೆ ಈ ತಂಡ ಮುಂದಾಗುತ್ತಿದೆ ಎಂದು ತಿಳಿದುಬಂದಿದೆ.

Vijaya Karnataka Web 22 Sep 2020, 12:48 pm
ಹೊಸದಿಲ್ಲಿ: ಈ ಬಾರಿಯ ಸಂಸತ್‌ನ ಮುಂಗಾರು ಅಧಿವೇಶನ ಭಾರೀ ಗದ್ದಲ ರಂಪಾಟಕ್ಕೆ ಕಾರಣವಾಗಿದೆ. ಒಂದು ಕಡೆಯಿಂದ ಕೃಷಿ ಮಸೂದೆ ವಿರೋಧಿಸಿ ರೈತರು ಬೀದಿಗಿಳಿದರೆ ಇನ್ನೊಂದು ಕಡೆ ವಿಪಕ್ಷಗಳ ಸದಸ್ಯರು ಕೂಡ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿದ್ದಾರೆ. ಇನ್ನು ಭಾನುವಾರ ಕೃಷಿ ಬಿಲ್‌ ಕುರಿತು ರಂಪಾಟ ನಡೆಸಿದ ಪ್ರತಿಪಕ್ಷದ ಎಂಟು ಸದಸ್ಯರನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಎ. ವೆಂಕಯ್ಯನಾಯ್ಡು ಒಂದು ವಾರಗಳ ಕಾಲ ಅಮಾನತು ಮಾಡಿದ್ದರು. ಈ ಹಿನ್ನೆಲೆ ಸೋಮವಾರ ರಾತ್ರಿಯಿಡಿ ಸಂಸತ್ ಭವನದ ಮುಂದೆ ಈ ಎಂಟು ಸದಸ್ಯರು ಧರಣಿ ಕುಳಿತ್ತಿದ್ದರು. ಇದೀಗ ಧರಣಿಗೆ ಈ ಎಂಟು ಸದಸ್ಯರು ಪೂರ್ಣ ವಿರಾಮ ಇಟ್ಟಿದ್ದಾರೆ. ಇವರೆಲ್ಲ ಈಗಾಗಲೇ ರಾಜ್ಯಸಭೆಯ ಕಲಾಪ ಬಹಿಷ್ಕರಿಸಿ ಬಂದಿರುವ ಸದಸ್ಯರ ಜೊತೆ ಸೇರಿಕೊಂಡಿದ್ದಾರೆ.
Vijaya Karnataka Web 8 mps end dharna from tea offer to session boycott and pm modis praise for harivansh
ಮುಂಗಾರು ಅಧಿವೇಶನ: ಧರಣಿ ನಿಲ್ಲಿಸಿದ ಅಮಾನತುಗೊಂಡ 8 ರಾಜ್ಯಸಭಾ ಸದಸ್ಯರು, ರಾಜ್ಯಸಭೆ ಈಗ ಖಾಲಿ ಖಾಲಿ!


ಖಾಲಿ ಖಾಲಿಯಾದ ರಾಜ್ಯಸಭೆ!

ಅಮಾನತುಗೊಂಡ ಸದಸ್ಯರಿಂದಾಗಿ ಇದೀಗ ರಾಜ್ಯಸಭೆ ಗದ್ದಲದ ಗೂಡಾಗಿ ಬದಲಾಗಿದೆ. ಇನ್ನು ಮಂಗಳವಾರ ಕೂಡ ಬಿಲ್ ವಾಪಸಾತಿ, ಎಂಟು ಸದಸ್ಯರ ಅಮಾನತು ವಾಪಸಾತಿ ಸೇರಿ ರೈತರ ಪರವಾದ ಮೂರು ಬೇಡಿಕೆ ಹಿನ್ನೆಲೆ ರಾಜ್ಯಸಭೆಯಲ್ಲಿ ನಡೆಯುತ್ತಿರುವ ಕಲಾಪವನ್ನು ವಿಪಕ್ಷಗಳ ಸದಸ್ಯರುಗಳು ತ್ಯಜಿಸಿದರು. ಇದೇ ಸಂಘಕ್ಕೆ ಇದೀಗ ಅಮಾನತುಗೊಂಡ ಎಂಟು ಸದಸ್ಯರುಗಳು ಕೂಡ ಸೇರಿಕೊಂಡಿದ್ದಾರೆ. ಮೂಲಗಳ ಪ್ರಕಾರ ಎಲ್ಲಾ ಪ್ರತಿಪಕ್ಷಗಳು ಸೇರಿಕೊಂಡು ಬೃಹತ್‌ ಪ್ರತಿಭಟನೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಇನ್ನು ಸಭಾತ್ಯಾಗದ ಮೂಲಕ ಇದೀಗ ರಾಜ್ಯಸಭೆ ಖಾಲಿ ಖಾಲಿಯಾಗಿ ಹೋಗಿದೆ. ಇನ್ನು ಸದಸ್ಯರು ಹೊರಗೆ ಹೋಗುವ ವೇಳೆ ರಾಜ್ಯಸಭಾಧ್ಯಕ್ಷ ಎ. ವೆಂಕಯ್ಯನಾಯ್ಡು ವಾಪಸ್‌ ಬರುವಂತೆ ಕರೆದರು ಯಾರು ಕೂಡ ಲೆಕ್ಕಿಸಿಲ್ಲ.

ಭಿವಾಂಡಿ ಕಟ್ಟಡ ಕುಸಿತ: 20ಕ್ಕೇರಿದ ಮೃತರ ಸಂಖ್ಯೆ, ಮುಂದುವರಿದ ರಕ್ಷಾಣಾ ಕಾರ್ಯಾಚರಣೆ

ಟೀ ಕೊಟ್ಟ ಹರಿವಂಶ್‌!

ಇನ್ನು ಸೋಮವಾರ ರಾತ್ರಿಯಿಡಿ ಧರಣಿ ಕುಳಿತ್ತಿದ್ದ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಇಂದು ಮುಂಜಾನೆ ತೆರಳಿ ಟೀ ಹಾಗೂ ತಿಂಡಿ ನೀಡಿದರು. ಆದರೆ ಯಾವೊಬ್ಬ ಸದಸ್ಯರು ಹರಿವಂಶ್‌ ನೀಡಿದ ಟೀ ಮತ್ತು ಉಪಹಾರವನ್ನು ಸೇವಿಸಿಲ್ಲ. ಅದನ್ನು ಕೂಡ ಬಹಿಷ್ಕರಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಮಾನತುಗೊಂಡ ಸದಸ್ಯರು, ಉಪಾಧ್ಯಕ್ಷ ಹರಿವಂಶ್ ಮೇಲೆ ನಮಗೆ ಯಾವುದೇ ವೈಷಮ್ಯ ಇಲ್ಲ. ಆದರೆ ಅವರು ಮೀಡಿಯಾ ಗಿಮಿಕ್‌ಗಾಗಿ ಚಹಾ ಹಾಗೂ ಉಪಹಾರ ತಂದಿರುವುದಾಗಿ ಆರೋಪಿಸಿದ್ದಾರೆ. ಇನ್ನು ವಿಪಕ್ಷಗಳ ಸದಸ್ಯರು ಅಷ್ಟೇಲ್ಲ ದಾಂಧಲೆ ನಡೆಸಿದರು ಉಪಾಧ್ಯಕ್ಷ ಹರಿವಂಶ್ ತಾಳ್ಮೆಯಿಂದ ಇದ್ದಿದ್ದು ನಿಜಕ್ಕೂ ಪ್ರಜಾಪ್ರಭುತ್ವದ ಸ್ವರೂಪವಾಗಿ ಬದಲಾಗಿದ್ದಾರೆ ಎಂದು ಪ್ರಶಂಸಿಸಿದರು.

ವಿಶ್ವಸಂಸ್ಥೆ 'ವಿಶ್ವಾಸದ ಬಿಕ್ಕಟ್ಟ'ನ್ನು ಎದುರಿಸುತ್ತಿದೆ: ಪ್ರಧಾನಿ ಮೋದಿ

ಭಾನುವಾರ ನಡೆದಿದ್ದು ಏನು?

ತೃಣಮೂಲ ಕಾಂಗ್ರೆಸ್ ಸದಸ್ಯ ಡೆರಿಕ್ ಓಬ್ರಿಯಾನ್, ಕಾಂಗ್ರೆಸ್ ಸಂಸದ ರಿಪುನ್ ಬೋರಾ, ಎಎಪಿ ಸದಸ್ಯ ಸಂಜಯ್ ಸಿಂಗ್ ಹಾಗೂ ಡಿಎಂಕೆ ಸಂಸದ ತಿರುಚಿ ಶಿವ ಅವರು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅವರಿದ್ದ ವೇದಿಕೆ ಬಳಿ ತೆರಳಿ ಪೋಡಿಯಂನ ಮೈಕ್‌ ಕಸಿದುಕೊಳ್ಳಲು ಯತ್ನಿಸಿದರು. ಉಪಾಧ್ಯಕ್ಷರ ವಿರುದ್ಧ ಘೋಷಣೆ ಕೂಗಿ, ಕಾಗದ-ಪತ್ರಗಳನ್ನು ಹರಿದುಹಾಕಿದರು. ಇದರಿಂದ ಅಸಮಾಧಾನಗೊಂಡಿದ್ದ ರಾಜ್ಯಸಭೆಯ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಕೆಟ್ಟ ನಡತೆ ಹಿನ್ನೆಲೆ ಎಂಟು ಸದಸ್ಯರನ್ನು ಅಮಾನತುಗೊಳಿಸಿದರು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ