ಹೊಸದಿಲ್ಲಿ: ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಪ್ ಇಂಡಿಯಾ (ಸಿಮಿ)ದ ಎಂಟು ಉಗ್ರರು ಭದ್ರತಾ ಸಿಬ್ಬಂದಿಯನ್ನು ಕೊಂದು, ಭೋಪಾಲ್ ಕೇಂದ್ರ ಕಾರಾಗೃಹದಿಂದ ಇಂದು ಮುಂಜಾನೆ ತಪ್ಪಿಸಿಕೊಂಡಿದ್ದಾರೆ.
ಜೈಲಿನ ಗೋಡೆಯನ್ನು ಬೆಟ್ ಶೀಟ್ ಸಹಾಯದಿಂದ ಹತ್ತಿ, ಪರಾರಿಯಾಗಿದ್ದಾರೆ.
'ಬೆಳಗ್ಗೆ 2-3 ಗಂಟೆಗೆ ಎಂಟು ಸಿಮಿ ಕಾರ್ಯಕರ್ತರು ಭದ್ರತಾ ಸಿಬ್ಬಂದಿಯ ಕತ್ತನ್ನು ಸ್ಟೀಲಿನ ತಟ್ಟೆ ಹಾಗೂ ಗ್ಲಾಸ್ನಿಂದ ಸೀಳಿ, ತಪ್ಪಿಸಿಕೊಂಡಿದ್ದಾರೆ,' ಎಂದು ಭೋಪಾಲ್ ಡಿಐಜಿ ರಮಣ್ ಸಿಂಗ್ ಹೇಳಿದ್ದಾರೆ.
ತಪ್ಪಿಸಿಕೊಂಡ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಮಧ್ಯಪ್ರದೇಶದ ಭೋಪಾಲ್ ಜೈಲಿನಿಂದ ಸಿಮಿ ಉಗ್ರರು ತಪ್ಪಿಸಿಕೊಂಡಿದ್ದು ಇದೇ ಮೊದಲಲ್ಲ. 2013ರಲ್ಲಿಯೂ ಈ ಸಂಘಟನೆಯ ಏಳು ಶಂಕಿತ ಉಗ್ರರು ಖಾಂಡ್ವಾ ಜೈಲಿನ ಶೌಚಾಲಯದ ಕಬ್ಬಿಣದ ಸಲಾಕೆಗಳನ್ನು ಮುರಿದು, ತಪ್ಪಿಸಿಕೊಂಡಿದ್ದರು. ಆಗಲೂ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಇರಿದಿದ್ದರು. ಅಷ್ಟೇ ಅಲ್ಲ ಗನ್ ಹಾಗೂ ವೈಯರ್ಲೆಸ್ ಸೆಟ್ಗಳನ್ನು ಕದ್ದೋಯ್ದಿದ್ದರು.