ಆ್ಯಪ್ನಗರ

ರೈತರ ಟ್ರ್ಯಾಕ್ಟರ್‌ ರ್‍ಯಾಲಿ ವೇಳೆ ಹಿಂಸಾಚಾರ: 83 ಪೊಲೀಸರಿಗೆ ಗಾಯ

​ ರೈತ ಪ್ರತಿಭಟನೆಯಿಂದ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ, ಜನದಟ್ಟಣೆ ಮಿತಿಮೀರಿತ್ತು. ಬ್ಯಾರಿಕೇಡ್‌ಗಳನ್ನು ಮುರಿದು ರೈತರ ಟ್ರ್ಯಾಕ್ಟರ್‌ಗಳು ನಿಗದಿತ ಮಾರ್ಗಗಳನ್ನು ಉಲ್ಲಂಘಿಸಿ ಬೇರೆಡೆ ಸಾಗಿದ್ದರಿಂದ ಮಧುಬನ್‌ ಚೌಕ್‌, ಪಲ್ಲಾರಸ್ತೆ, ವಿಕಾಸ್‌ ಮಾರ್ಗ್‌, ನೋಯ್ಡಾ ಲಿಂಕ್‌ ರಸ್ತೆ, ಜಿಟಿಕೆ ರಸ್ತೆಗಳಲ್ಲಿಟ್ರಾಫಿಕ್‌ ಜಾಮ್‌ ಉಂಟಾಗಿ ಜನರು ಪರದಾಡಿದರು.

Vijaya Karnataka Web 27 Jan 2021, 6:59 am
ಹೊಸದಿಲ್ಲಿ: ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದಿಲ್ಲಿಯ ಹಲವು ಕಡೆಗಳಲ್ಲಿ ಜಟಾಪಟಿ ನಡೆಯಿತು. ಈ ಘರ್ಷಣೆಯಲ್ಲಿ 83 ಪೊಲೀಸರು, 14 ರೈತರು ಗಾಯಗೊಂಡರು. ಅವರನ್ನು ಆರ್‌ಎಂಎಲ್‌ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮತ್ತೆ ಕೆಲವರನ್ನು ಲೋಕನಾಯಕ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ನೇರವಾಗಿ ಹಲ್ಲೆ ಮಾಡಿರುವ ದೃಶ್ಯಗಳನ್ನು ಮಾಧ್ಯಮಗಳು ಪ್ರದರ್ಶಿಸಿದೆ. ಇನ್ನು ಟ್ರ್ಯಾಕ್ಟರ್‌ಗಳನ್ನು ಬಳಸಿ ಪೊಲೀಸರ ಮೇಲೆ ದಾಳಿ ಮಾಡಿರುವ ದೃಶ್ಯ ಕೂಡ ಸೆರೆಯಾಗಿದೆ.
Vijaya Karnataka Web Tracator rally


ವಾಹನ ಸವಾರರು ಹೈರಾಣ!
ರೈತ ಪ್ರತಿಭಟನೆಯಿಂದ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ, ಜನದಟ್ಟಣೆ ಮಿತಿಮೀರಿತ್ತು. ಬ್ಯಾರಿಕೇಡ್‌ಗಳನ್ನು ಮುರಿದು ರೈತರ ಟ್ರ್ಯಾಕ್ಟರ್‌ಗಳು ನಿಗದಿತ ಮಾರ್ಗಗಳನ್ನು ಉಲ್ಲಂಘಿಸಿ ಬೇರೆಡೆ ಸಾಗಿದ್ದರಿಂದ ಮಧುಬನ್‌ ಚೌಕ್‌, ಪಲ್ಲಾರಸ್ತೆ, ವಿಕಾಸ್‌ ಮಾರ್ಗ್‌, ನೋಯ್ಡಾ ಲಿಂಕ್‌ ರಸ್ತೆ, ಜಿಟಿಕೆ ರಸ್ತೆಗಳಲ್ಲಿಟ್ರಾಫಿಕ್‌ ಜಾಮ್‌ ಉಂಟಾಗಿ ಜನರು ಪರದಾಡಿದರು. ಟ್ರಾಫಿಕ್‌ ಪೊಲೀಸರು ಟ್ವಿಟರ್‌ನಲ್ಲಿನ ಅಧಿಕೃತ ಖಾತೆ ಮೂಲಕ ಆಗಾಗ್ಗೆ ಟ್ರಾಫಿಕ್‌ ಜಾಮ್‌ ಪ್ರದೇಶಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದರು.

ಟ್ರ್ಯಾಕ್ಟರ್‌ ರ‍್ಯಾಲಿ ಹಿನ್ನೆಲೆ: ಮಂಗಳವಾರದ ದಿಲ್ಲಿ ರೈಲುಗಳ ಟಿಕೆಟ್‌ ಹಣ ವಾಪಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ