ಆ್ಯಪ್ನಗರ

ಮುಂಬಯಿ: ಕಳೆದ 3 ವರ್ಷಗಲ್ಲಿ ರಕ್ತ ವರ್ಗಾಯಿಸುವಾಗ 85 ಮಂದಿಗೆ ಎಚ್‌ಐವಿ

ಕಳೆದ ಮೂರು ವರ್ಷಗಳಲ್ಲಿ ರಕ್ತ ವರ್ಗಾಯಿಸುವಾಗ 85 ಮಂದಿಗೆ ಎಚ್ಐವಿ ಸೋಂಕು ತಗುಲಿದೆ, ಎಂದು ಇಲ್ಲಿನ ಏಡ್ಸ್ ನಿಯಂತ್ರಣ ಮಂಡಳಿ ಹೇಳಿದೆ.

ಟೈಮ್ಸ್ ಆಫ್ ಇಂಡಿಯಾ 1 Sep 2016, 4:11 pm
ಮುಂಬಯಿ: ಕಳೆದ ಮೂರು ವರ್ಷಗಳಲ್ಲಿ ರಕ್ತ ವರ್ಗಾಯಿಸುವಾಗ 85 ಮಂದಿಗೆ ಎಚ್ಐವಿ ಸೋಂಕು ತಗುಲಿದೆ, ಎಂದು ಇಲ್ಲಿನ ಏಡ್ಸ್ ನಿಯಂತ್ರಣ ಮಂಡಳಿ ಹೇಳಿದೆ. ಖುದ್ದು ರೋಗಿಗಳೇ ತಮಗೆ ತಗುಲಿದ ಸೋಂಕಿನ ಬಗ್ಗೆ ಮಾಹಿತಿ ನೀಡಿದ್ದು, ರಕ್ತ ನಿಧಿ ಹಾಗೂ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳುವ ಸುರಕ್ಷಿತ ವಿಧಾನಗಳ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.
Vijaya Karnataka Web 85 infected with hiv after blood transfusion in 3 years
ಮುಂಬಯಿ: ಕಳೆದ 3 ವರ್ಷಗಲ್ಲಿ ರಕ್ತ ವರ್ಗಾಯಿಸುವಾಗ 85 ಮಂದಿಗೆ ಎಚ್‌ಐವಿ


ಮುಂಬಯಿ ಜಿಲ್ಲಾ ಏಡ್ಸ್ ನಿಯಂತ್ರಣ ಮಂಡಳಿಯಿಂದ ಮಾಹಿತಿ ಹಕ್ಕಿನಡಿಯಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, 2015-16ನೇ ಸಾಲಿನಲ್ಲಿ 18 ಮಂದಿಗೆ ಸೋಂಕು ತಗುಲಿದೆ. 2014-15ರಲ್ಲಿ 42 ಹಾಗೂ 2013-14ರಲ್ಲಿ 25 ಮಂದಿಗೆ ಸೋಂಕು ತಗುಲಿದೆ, ಎಂದು ಮಾಹಿತಿ ನೀಡಲಾಗಿದೆ.

ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ರಕ್ತ ವರ್ಗಾವಣೆ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಎಚ್‌ಐವಿ ಸೋಂಕಿತರ ಸಂಖ್ಯೆಯೂ ಕಡಿಮೆ ಇದೆ, ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ ಬಹಿರಂಗ ಪಡಿಸಿದ ಬೆನ್ನಲ್ಲೇ, ಈ ವರದಿ ಹೊರ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ