ಆ್ಯಪ್ನಗರ

100ಕ್ಕೂ ಹೆಚ್ಚು ಗಡಿ ಭದ್ರತಾ ಯೋಧರಿಗೆ ಕೊರೊನಾ ಸೋಂಕು!

ದೇಶವನ್ನು ಕಾಯುವ ಯೋಧರಿಗೂ ಕೊರೋನಾ ವೈರಸ್ ಕಾಡುತ್ತಿರುವುದು ದೇಶವನ್ನೆ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕಿತ ಬಿಎಸ್ಎಫ್ ಯೋಧರ ಸಂಖ್ಯೆ ಹೆಚ್ಚುತ್ತಲೇ ಇದೆ.

Vijaya Karnataka Web 6 May 2020, 6:12 pm
ನವದೆಹಲಿ: ದೇಶವನ್ನು ಕಾಯುವ ಯೋಧರಿಗೂ ಕೊರೋನಾ ವೈರಸ್ ಕಾಡುತ್ತಿರುವುದು ದೇಶವನ್ನೆ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕಿತ ಬಿಎಸ್ಎಫ್ ಯೋಧರ ಸಂಖ್ಯೆ ಹೆಚ್ಚುತ್ತಲೇ ಇದೆ.
Vijaya Karnataka Web BSF


ಇನ್ನೂ 85 ಬಿಎಸ್‌ಎಫ್ ಸಿಬ್ಬಂದಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದು, ಇದೀಗ ಒಟ್ಟು ಸೋಂಕಿತರ ಸಂಖ್ಯೆ 154 ಕ್ಕೆ ಏರಿಕೆಯಾಗಿದೆ. ಸದ್ಯ ಇಬ್ಬರು ಚೇತರಿಸಿಕೊಂಡಿದ್ದಾರೆ ಎಂದು ವಕ್ತಾರರು ಹೇಳುತ್ತಾರೆ.

ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿದ ನಂತರ ದೆಹಲಿಯ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಪ್ರಧಾನ ಕಚೇರಿಯನ್ನು ಇಂದು ತೆರೆಯಲಾಗಿದೆ. ಕಾರ್ಯಾಚರಣೆಯ ಮತ್ತು ಅಗತ್ಯ ಕರ್ತವ್ಯಗಳನ್ನು ನಿರ್ವಹಿಸುವಾಗ 85 ಸಿಬ್ಬಂದಿಗಳಲ್ಲಿ COVID19 ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಪುರುಷೋತ್ತಮ್ ಕೊಲೆ ಪ್ರಕರಣ: ಆರೋಪಿ ಗಿರೀಶ್ ಪೊಲೀಸ್‌ ವಶಕ್ಕೆ

ಮೇ 2 ರಂದು ತ್ರಿಪುರದ ಅಂಬಾಸ್ಸಾದ 138 ನೇ ಬೆಟಾಲಿಯನ್‌ನ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿತ್ತು. ಒಂದು ದಿನದ ನಂತರ ಮೇ 3 ರಂದು, ಅದೇ ಬೆಟಾಲಿಯನ್‌ನಿಂದಲೇ ಇನ್ನೂ 12 ಸಿಬ್ಬಂದಿಗಳಲ್ಲೂ ಸೋಂಕು ದೃಢವಾಗಿತ್ತು.

ಮೇ 4 ರಂದು ಅದೇ ಬೆಟಾಲಿಯನ್‌ನಲ್ಲಿ 13 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಮೇ 5 ರಂದು ಮತ್ತೆ 13 ಹೊಸ ಪ್ರಕರಣಗಳು ಹೊರಬಿದ್ದಿವೆ.

ಸರಕಾರದ ಅಮಾನುಷ ನಿರ್ಧಾರಗಳಿಗೆ ಕಾಂಗ್ರೆಸ್‌ ಬೆಂಬಲವಿಲ್ಲ: ಈಶ್ವರ ಖಂಡ್ರೆ

ಕೆಲವು ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ 24 ಸದಸ್ಯರು ಮಂಗಳವಾರ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದರು. ನಂತರ ಚಿಕಿತ್ಸೆಗಾಗಿ ನಿಗದಿತ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ