ಆ್ಯಪ್ನಗರ

ಪೊಲೀಸ್ ಠಾಣೆಗೆ ಬಂದ 9 ಅಡಿ ಉದ್ದದ ಈ ಅಪರೂಪದ ಅತಿಥಿ ಯಾರು?

ಮಧ್ಯಪ್ರದೇಶದಲ್ಲಿರುವ ಭದಭದಾ ಆಣೆಕಟ್ಟಿನ ಬಳಿ ಇರುವ ರತಿಬಾದ್ ಪೊಲೀಸ್ ಠಾಣೆಗೆ ಭಾನುವಾರ ರಾತ್ರಿ ಅಪರೂಪದ ಅತಿಥಿಯೊಬ್ಬರು ಅಚ್ಚರಿಯ ಭೇಟಿ ನೀಡಿದ್ದಾರೆ.

TIMESOFINDIA.COM 11 Sep 2018, 1:15 pm
ಭೋಪಾಲ: ಮಧ್ಯಪ್ರದೇಶದ ಭದಭದಾ ಆಣೆಕಟ್ಟಿನ ಬಳಿ ಇರುವ ರತಿಬಾದ್ ಪೊಲೀಸ್ ಹೊರಠಾಣೆಗೆ ಭಾನುವಾರ ರಾತ್ರಿ ಅಪರೂಪದ ಅತಿಥಿಯೊಬ್ಬರು ಅಚ್ಚರಿಯ ಭೇಟಿ ನೀಡಿ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದಾರೆ. ಬಂದವರು ಉನ್ನತಾಧಿಕಾರಿ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಅಂದು ಅಚಾನಕ್ ಆಗಿ ಠಾಣೆಗೆ ನುಗ್ಗಿದ್ದು 9 ಅಡಿ ಉದ್ದದ ಮೊಸಳೆ.
Vijaya Karnataka Web MADHY


ಆಣೆಕಟ್ಟಿನ ಬಳಿ ಇರುವ ಠಾಣೆ ಮೇಲೆ ಮೊಸಳೆಗಳಿಗೆ ಅದೇನು ಆಕರ್ಷಣೆಯೋ ಗೊತ್ತಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ಮೊಸಳೆಗಳು ಭೇಟಿ ನೀಡುತ್ತಲೇ ಇರುತ್ತವೆಯಂತೆ.

ಭಾನುವಾರ ರಾತ್ರಿ ಸಹ ಪೊಲೀಸ್ ಠಾಣೆಗೆ 9 ಅಡಿ ಉದ್ದದ ಮೊಸಳೆ ನುಗ್ಗಿದ್ದು, ತಕ್ಷಣವೇ ಅಲಾರಾಂ ಬಾರಿಸಿ ಠಾಣೆಯಲ್ಲಿದವರನ್ನು ಅಲರ್ಟ್ ಮಾಡಲಾಯ್ತು. ಸುದ್ದಿ ಕೇಳಿ ನಿದ್ದೆ ಬಿಟ್ಟು ಓಡಿ ಬಂದ ಸ್ಥಳೀಯರು ಠಾಣೆ ಬಳಿ ಜಮಾವಣೆಗೊಂಡು ಉದ್ದದ ಮೊಸಳೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡುವ ಮುನ್ನವೇ ಪೊಲೀಸರು ಬಡಿಗೆಗಳ ಸಹಾಯದಿಂದ ಮೊಸಳೆಯನ್ನು ನೀರಿಗೆ ಮರಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿಯ ಪೊಲೀಸ್ ಠಾಣೆಗೆ ಮೊಸಳೆ ನುಗ್ಗುವುದು ಹೊಸ ವಿಷಯವೇನಲ್ಲ. ಕನಿಷ್ಠವೆಂದರೆ ವರ್ಷಕ್ಕೆ ಎರಡು ಬಾರಿಯಾದರೂ ಅವು ಬಂದೇ ಬರುತ್ತವೆ. ಮೊಸಳೆ ಠಾಣೆ ಬಳಿಯ ಗೇಟ್ ಸಮೀಪ ಬರುತ್ತಿದ್ದಂತೆ ಬೀದಿ ನಾಯಿಗಳು ಬೊಗಳಲಾರಂಭಿಸಿದ್ದು, ತಕ್ಷಣವೇ ಅಲರ್ಟ್ ಆದೆವು ಎಂದು ಹೊರಠಾಣೆಯ ಪೊಲೀಸ್ ದೇವೇಂದ್ರ ಠಾಕೂರ್ ತಿಳಿಸಿದ್ದಾರೆ.

ಆಣೆಕಟ್ಟಿನ ಬಳಿ ಒಂದು ದೇವಸ್ಥಾನವಿದ್ದು, ಅದರ ಮೂಲಕ ಮೊಸಳೆಗಳು ಸುಲಭವಾಗಿ ಪೊಲೀಸ್ ಠಾಣೆ ಮಾರ್ಗಕ್ಕೆ ಬರುತ್ತವೆ, ಎಂದು ಠಾಕೂರ್ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ