ಆ್ಯಪ್ನಗರ

98 ಅಂಕ ಗಳಿಸಿ ಮಿಂಚಿದ್ದ 96ರ ಅಜ್ಜಿ ಈಗ ಕಂಪ್ಯೂಟರ್‌ ಕಲಿಯುತ್ತಿದ್ದಾರೆ!

ಹೊಸ ಲ್ಯಾಪ್‌ಟಾಪ್‌ನಲ್ಲಿ ತನ್ನ ಹೆಸರನ್ನು ಇಂಗ್ಲಿಷ್‌ನಲ್ಲಿ ಟೈಪ್‌ ಮಾಡುವ ಮೂಲಕ ನೆರೆದವರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

Agencies 8 Nov 2018, 2:47 pm
ತಿರುವನಂತಪುರ: ಕಲಿಯುವುದಕ್ಕೆ ವಯಸ್ಸು ಮುಖ್ಯ ಅಲ್ಲ, ಛಲ ಮುಖ್ಯ ಎಂಬುದನ್ನು ಕೇರಳದ 96 ವರ್ಷದ ಅಜ್ಜಿ ಕಾರ್ತಿಯಾನಿ ಅಮ್ಮ ಪದೇ ಪದೇ ಸಾರಿ ಹೇಳುತ್ತಿದ್ದಾರೆ.
Vijaya Karnataka Web Kerala Old Student


ಇತ್ತೀಚೆಗೆ ಕಾರ್ತಿಯಾನಿ ಅಮ್ಮ ಅವರು ಕೇರಳ ಸರಕಾರದ ಅಕ್ಷರಲಕ್ಷಂ ಸಾಕ್ಷರತಾ ಪರೀಕ್ಷೆಯಲ್ಲಿ ಶೇ.98 ಅಂಕ ಗಳಿಸುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು.

ತಮ್ಮನ್ನು ಅಭಿನಂದಿಸಿದ ಸಿಎಂ ಪಿಣರಾಯಿ ವಿಜಯನ್‌ ಅವರ ಜತೆ ಕಂಪ್ಯೂಟರ್‌ ಕಲಿಯುವ ಆಸೆ ಇರುವುದಾಗಿ ಕಾರ್ತಿಯಾನಿ ಅಮ್ಮ ಹೇಳಿಕೊಂಡಿದ್ದರು.

ದೀಪಾವಳಿಯಂದು ಹೊಸ ಲ್ಯಾಪ್‌ಟಾಪ್‌ ಕಾರ್ತಿಯಾನಿ ಅವರ ಮನೆಗೆ ಬಂದಿದೆ. ಕೇರಳದ ಶಿಕ್ಷಣ ಸಚಿವ ಪ್ರೊ. ಸಿ ರವಿಚಂದ್ರನ್‌ ಅವರು ಕಾರ್ತಯಾನಿ ಅವರ ಮನೆಗೆ ಆಗಮಿಸಿ ಹೊಸ ಲ್ಯಾಪ್‌ಟಾಪ್‌ಅನ್ನು ಕೊಡುಗೆಯಾಗಿ ನೀಡಿದ್ದಾರೆ.

ಹೊಸ ಲ್ಯಾಪ್‌ಟಾಪ್‌ನಲ್ಲಿ ತನ್ನ ಹೆಸರನ್ನು ಇಂಗ್ಲೀಷ್‌ನಲ್ಲಿ ಟೈಪ್‌ ಮಾಡುವ ಮೂಲಕ ನೆರೆದವರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.


ಆಲಪ್ಪುಳ ನೆಯ್ಯತ್ತಿನಕರಾ ಗ್ರಾಮದವರಾದ ಕಾರ್ತಿಯಾನಿ 10ನೇ ತರಗತಿ ತತ್ಸಮಾನ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಕಾರ್ತಿಯಾನಿ ಅವರಿಗೆ ಬಾಲ್ಯದಲ್ಲಿ ಯಾವುದೇ ತೆರನಾದ ಶಿಕ್ಷಣ ದೊರೆತಿರಲಿಲ್ಲ. 60ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ತನ್ನ ಮಗಳಿಂದ ಸ್ಫೂರ್ತಿ ಪಡೆದ ಕಾರ್ತಿಯಾನಿ ಅಮ್ಮ ಓದಲು ಆರಂಭಿಸಿದ್ದರು.
ರಾಜ್ಯ ಮಟ್ಟದ ಸಾಕ್ಷರತೆ ಪರೀಕ್ಷೆ ಬರೆದ 96 ವರ್ಷದ ಅಜ್ಜಿಗೆ ಬಂದ ಅಂಕಗಳು ಎಷ್ಟು ಗೊತ್ತೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ