ಆ್ಯಪ್ನಗರ

ರಾಜ್ಯ ಮಟ್ಟದ ಸಾಕ್ಷರತೆ ಪರೀಕ್ಷೆ ಬರೆದ 96 ವರ್ಷದ ಅಜ್ಜಿಗೆ ಬಂದ ಅಂಕಗಳು ಎಷ್ಟು ಗೊತ್ತೆ?

ಸ್ಫೂರ್ತಿ ತುಂಬುವ ಟಾಪರ್‌ ಅಜ್ಜಿಯ ಕತೆ

Vijaya Karnataka Web 1 Nov 2018, 3:21 pm
ತಿರುವನಂತಪುರ: ಕಳೆದ ಆಗಸ್ಟ್‌ನಲ್ಲಿ ಕೇರಳ ಸರಕಾರ ನಡೆಸಿದ ಅಕ್ಷರಲಕ್ಷಂ ಸಾಕ್ಷರತೆ ಪರೀಕ್ಷೆ ಬರೆದಿದ್ದ ಅತಿ ಹಿರಿಯ ಅಭ್ಯರ್ಥಿ, 96 ವರ್ಷದ ಅಜ್ಜಿ ಶೇ.98 ಅಂಕಗಳನ್ನು ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web Kerala Old Woman


ಕೇರಳದ ಆಲಪ್ಪುಳದ ಕಾರ್ತಿಯಾನಿ ಅಮ್ಮ ಈ ಸಾಧನೆ ಮಾಡಿದ ಹಿರಿಯ ಜೀವಿ. ಕಾರ್ತಿಯಾನಿ ಆರು ಮಕ್ಕಳನ್ನು ಹೆತ್ತು, ಗಂಡನ ಸಾವಿನ ನಂತರ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ಶ್ರಮಜೀವಿ.

ಕಾರ್ತಿಯಾನಿ ಅವರ ಮಗಳು, ಕೆಲವು ವರ್ಷಗಳ ಹಿಂದೆ ತಮ್ಮ 60ನೇ ವಯಸ್ಸಿನಲ್ಲಿ 10ನೇ ತರಗತಿ ಉತ್ತೀರ್ಣರಾಗಿದ್ದರು. ಇದರಿಂದ ಸ್ಫೂರ್ತಿಗೊಂಡ ಕಾರ್ತಿಯಾನಿ, ಸಾಕ್ಷರತೆ ಪರೀಕ್ಷೆ ಎದುರಿಸಿ, ಉತ್ತಮ ಅಂಕಗಳ ಜತೆ ಉತ್ತೀರ್ಣರಾಗಿದ್ದಾರೆ. ಕಾರ್ತಿಯಾನಿ ಅವರ ಮುಂದಿನ ಗುರಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಾಗಿದೆ.

ಸಾಕ್ಷರತೆ ಪರೀಕ್ಷೆಯಲ್ಲಿ 42,933 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಪರೀಕ್ಷೆಯು ಓದುವ, ಬರೆಯುವ ಮತ್ತು ಗಣಿತದ ಕೌಶಲ್ಯಗಳನ್ನು ಒಳಗೊಂಡಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ