ಆ್ಯಪ್ನಗರ

'ಅವನು ಬೇರೆ ಹುಡುಗಿಯನ್ನು ಲವ್ ಮಾಡ್ತಿದ್ದಾನೆ', ಪತ್ರ ಬರೆದು ಆತ್ಮಹತ್ಯೆಗೆ ಶರಣಾದ 12ರ ಬಾಲಕಿ..!

ತನಗೆ ಪ್ರೀತಿಯುಂಟಾದ ಬಾಲಕ ಮತ್ತೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಅಂದಿದ್ದು ತಿಳಿದಿದ್ದೇ ತಡ ಆ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ. ಸಾವಿಗೂ ಮುನ್ನ ಪತ್ರವೊಂದನ್ನು ಬರೆದಿರುವ ಮೃತ ಬಾಲಕಿ, ಅದರಲ್ಲಿ ತನ್ನ ಸಾವಿಗೆ ಕಾರಣವನ್ನು ಉಲ್ಲೇಖಿಸಿದ್ದಾಳೆ.

Agencies 10 Sep 2020, 4:42 pm
ಹೊಸದಿಲ್ಲಿ: ಪ್ರೀತಿ ಯಾವ ಕ್ಷಣದಲ್ಲಿ ಯಾರ ಮೇಲೂ ಆಗಬಹುದು. ಅದಕ್ಕೆ ಜಾತಿ, ಮತ, ಧರ್ಮ, ಭಾಷೆ, ರಾಷ್ಟ್ರೀಯತೆ ಅದೂ ಇದು ಅನ್ನೋದರ ಬೇಲಿಯಿಲ್ಲ. ಒಬ್ಬ ವ್ಯಕ್ತಿಯ ಮೇಲೆ ಪ್ರೀತಿಯಾಗೋಕೆ ಅಡೆತಡೆಗಳೇನೂ ಇಲ್ಲ. ಅನೇಕ ಸಂದರ್ಭಗಳಲ್ಲಿ ಅಡೆತಡೆ ಉಂಟಾಗೋದೆ ಆ ಪ್ರೀತಿ ಮನೆಯವರಿಗೆ ಗೊತ್ತಾದ ಮೇಲೆ. ಆದರೆ ತನ್ನ ಸಂಗಾತಿಯ ಜೊತೆ ಒಂದು ನಿಜವಾದ ಪ್ರೀತಿ ಹುಟ್ಟೋಕೆ ಬುದ್ಧಿಯಾದ್ರೂ ಬೆಳೆಯಬೇಡ್ವೇ?
Vijaya Karnataka Web suicide0


ಸೆ.10 ವಿಶ್ವ ಆತ್ಮಹತ್ಯೆ ತಡೆ ದಿನ: ಒಂದು ಆತ್ಮಹತ್ಯೆ ಇಡೀ ಕುಟುಂಬವನ್ನೇ ಕಗ್ಗೊಲೆ ಮಾಡಿದಂತೆ!

ಇಲ್ಲೊಬ್ಬಳು ಹನ್ನೆರಡು ವರ್ಷದ ಅಪ್ರಾಪ್ತೆಯೊಬ್ಬಳು ತನ್ನ ಪ್ರೀತಿ ವಿಫಲವಾಯಿತೆಂದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದರೆ ಏನನ್ನಬೇಕು. ಇದು ಹರ್ಯಾಣದ ಫರೀದಾಬಾದ್‌ನಲ್ಲಿ ನಡೆದ ಘಟನೆ. ಆಕೆಗಿನ್ನೂ ಬದುಕಿನ ನಿಜ ಅರ್ಥ ತಿಳಿದೇ ಇಲ್ಲ. ಇನ್ನೂ ತಂದೆತಾಯಿಯ ಮಡಿಲಲ್ಲೇ ಮಲಗುವ ಆ ಪುಟ್ಟ ಹುಡುಗಿ ಹೈಸ್ಕೂಲ್‌ ಮೆಟ್ಟಿಲು ಕೂಡ ಹತ್ತಿಲ್ಲ. ಅದಾಗಲೇ 12 ವರ್ಷದ ಆ ಬಾಲಕಿಗೆ ಮನೆ ಪಕ್ಕದ ಅಪ್ರಾಪ್ತ ಬಾಲಕನೊಂದಿಗೆ ಕ್ರಷ್ ಆಗಿದೆ. ಆದರೆ ಆತ ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದನಂತೆ.

ವಾಯುಪಡೆಗೆ ರಫೇಲ್‌ ಅಧಿಕೃತ ಸೇರ್ಪಡೆ ಕಾರ್ಯಕ್ರಮ: ವಿವಿಧ ಧರ್ಮಗುರುಗಳಿಂದ 'ಸರ್ವ ಧರ್ಮ

ತನಗೆ ಪ್ರೀತಿಯುಂಟಾದ ಬಾಲಕ ಮತ್ತೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಅಂದಿದ್ದು ತಿಳಿದಿದ್ದೇ ತಡ ಆ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ. ಸಾವಿಗೂ ಮುನ್ನ ಪತ್ರವೊಂದನ್ನು ಬರೆದಿರುವ ಮೃತ ಬಾಲಕಿ, ಅದರಲ್ಲಿ ತನ್ನ ಸಾವಿಗೆ ಕಾರಣವನ್ನು ಉಲ್ಲೇಖಿಸಿದ್ದಾಳೆ. ‘ನಾನು ನನ್ನದೇ ವಯಸ್ಸಿನ ಪಕ್ಕದ ಮನೆಯ ಹುಡುಗನನ್ನು ಪ್ರೀತಿಸುತ್ತಿದ್ದೆ. ಆದರೆ ಆತ ಬೇರೊಂದು ಹುಡಗಿಯನ್ನು ಪ್ರೀತಿಸುತ್ತಿದ್ದ. ಈ ನೋವಿನಿಂದ ಹೊರಬರಲಾದೆ ನಾನು ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳುತ್ತಿದ್ದೇನೆ’ ಎಂದು ಬರೆದಿದ್ದಾಳೆ.

ಬಿಹಾರ‌ ಚುನಾವಣೆಗೂ ಮುನ್ನ ಆರ್‌ಜೆಡಿಗೆ ಭಾರೀ ಹಿನ್ನಡೆ..! 32 ವರ್ಷಗಳ ಬಳಿಕ ಪಕ್ಷ ತೊರೆದ ಲಾಲು ಅತ್ಯಾಪ್ತ

ಮೃತ ಬಾಲಕಿಯ ತಂದೆಗೆ ಸಿಕ್ಕಿದ ಪತ್ರದಿಂದ ಸಾವಿನ ಕಾರಣ ಬಯಲಾಗಿದ್ದು, ಸದ್ಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದೇನೇ ಇರಲಿ, ಇನ್ನೂ ಬುದ್ಧಿ ಸರಿಯಾಗಿ ಬೆಳೆಯದ ಈ ಸಣ್ಣ ಪ್ರಾಯದಲ್ಲೂ ಅಪ್ರಾಪ್ತ ಮಕ್ಕಳು ತಮ್ಮ ಸೋಲಿಗೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ ಎಂದರೆ ಮಕ್ಕಳ ಮನಸ್ಸಲ್ಲಿ ಅಂತಹ ಯೋಚನೆ ಬರೋಕೆ ಮೂಲ ಕಾರಣ ಏನು? ಯಾಕಾಗಿ ಭಾರತದಲ್ಲಿ ಆತ್ಮಹತ್ಯಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತೆ ಅನ್ನುವ ಪ್ರಶ್ನೆಗೆ ‘ವಿಶ್ವ ಆತ್ಮಹತ್ಯಾ ದಿನ’ವಾದ ಇಂದಿನಿಂದ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ನಡೆಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ