ಆ್ಯಪ್ನಗರ

ಪುಲ್ವಾಮಾ ಮಾದರಿ ದಾಳಿ ಯತ್ನ ವಿಫಲ: 20 ಕೆಜಿ ಸ್ಫೋಟಕ ಹೊಂದಿದ್ದ ಕಾರು ಬಿಟ್ಟು ಓಡಿದ ಉಗ್ರ!

ಪುಲ್ವಾಮಾ ದಾಳಿ ಮಾಸುವ ಮುನ್ನವೇ ಮತ್ತೊಂದು ಭೀಕರ ದಾಳಿಗೆ ಸಂಚು ರೂಪಿಸಿದ್ದ ಉಗ್ರರ ಯೋಜನೆಯನ್ನು ವಿಫಲಗೊಳಿಸುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪುಲ್ವಾಮದಲ್ಲಿ ಬರೋಬ್ಬರಿ 20 ಕೆಜಿ ಸ್ಫೋಟಕಗಳನ್ನು ಹೊತ್ತಿದ್ದ ಕಾರನ್ನು ತಡೆದು ಭಾರೀ ಅನಾಹುತವೊಂದನ್ನು ತಪ್ಪಿಸಲಾಗಿದೆ.

Vijaya Karnataka Web 28 May 2020, 10:19 am
ಶ್ರೀನಗರ: 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ವಾಹನದ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಯ ನೆನಪು ಇನ್ನೂ ಮಾಸಿಲ್ಲ. ಈ ಮಧ್ಯೆ ಅದೇ ರೀತಿಯ ವಿಧ್ವಂಸಕ ದಾಳಿಯ ಯೋಜನೆಯೊಂದನ್ನು ಭಧ್ರತಾ ಪಡೆಗಳು ವಿಫಲಗೊಳಿಸಿವೆ.
Vijaya Karnataka Web Pulwama
IED ಸ್ಪೋಟಕಗಳನ್ನು ಹೊಂದಿದ್ದ ಕಾರು


ಹೌದು, ಪುಲ್ವಾಮದಲ್ಲಿ ಬರೋಬ್ಬರಿ 20 ಕೆಜಿ ಸ್ಫೋಟಕಗಳನ್ನು ಹೊತ್ತಿದ್ದ ಕಾರೊಂದನ್ನು ತಡೆದ ಭದ್ರತಾ ಪಡೆಗಳು, ಭಯೋತ್ಪಾದಕರ ಬೃಹತ್ ಸಂಚೊಂದನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಕಲಿ ನಂಬರ್ ಪ್ಲೇಟ್ ಇದ್ದ ಕಾರೊಂದನ್ನು ಭದ್ರತಾ ತಪಾಸಣೆಗೆಂದು ತಡೆದ ಸಿಬ್ಬಂದಿ, ಕಾರಿನಲ್ಲಿ 20 ಕೆಜಿ IED ಸ್ಫೋಟಕ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಭದ್ರತಾ ಸಿಬ್ಬಂದಿ ಕಾರು ನಿಲ್ಲಿಸುತ್ತಿದ್ದಂತೇ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪುಲ್ವಾಮ ದಾಳಿ ಕರಾಳ ದಿನಕ್ಕೆ 1 ವರ್ಷ, ಆ ದಿನ ಫೆಬ್ರವರಿ 14ರ ಗುರುವಾರ ಏನೇನಾಯ್ತು?

ಭದ್ರತಾ ಸಿಬ್ಬಂದಿ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡುತ್ತಿದ್ದಂತೇ ಭದ್ರತಾ ತಡೆಗೋಡೆಯನ್ನು ಒಡೆದು ಮುನ್ನುಗ್ಗಲೆತ್ನಿಸಿದ ಚಾಲಕನ ಮೇಲೆ ಸೈನಿಕರು ಗುಂಡು ಹಾರಿಸಿದ್ದಾರೆ. ಆದರೆ ಕಾರನ್ನು ನಿಲ್ಲಿಸಿ ಓಡಿ ಹೋಗುವಲ್ಲಿ ಚಾಲಕ ಯಶಸ್ವಿಯಾಗಿದ್ದಾನೆ.

ಈ ಕುರಿತು ಮಾಹಿತಿ ನೀಡಿರುವ ಐಜಿಪಿ ವಿಜಯ್ ಕುಮಾರ್, ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಭಾರೀ ಅನಾಹುತವೊಂದನ್ನು ತಪ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌, ಪೊಲೀಸರ ಮೇಲೆ ಉಗ್ರರ ಗ್ರೆನೆಡ್‌ ದಾಳಿ

ಸದ್ಯ IED ಸ್ಪೋಟಕಗಳಿದ್ದ ಕಾರನ್ನು ಬಾಂಬ್ ನಿಷ್ಕ್ರೀಯ ದಳ ನಾಶ ಮಾಡಿದ್ದು, ಈ ಕುರಿತು ತನಿಖೆಗೆ ತಂಡ ರಚಿಸಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ