ಆ್ಯಪ್ನಗರ

ಪುಲ್ವಾಮದಲ್ಲಿ ಗುಂಡಿನ ಚಕಮಕಿ; ಯೋಧ ಹುತಾತ್ಮ-ಉಗ್ರ ಬಲಿ

ಮನೆಯೊಂದರಲ್ಲಿ ಉಗ್ರರು ಅವಿತು ಕುಳಿತಿದ್ದಾರೆ ಅನ್ನುವ ಸುದ್ದಿ ತಿಳಿದ ಸೇನೆ, ಸಿಆರ್‌ಪಿಎಫ್‌ನ 183ನೇ ಬೆಟಾಲಿಯನ್, ರಾಷ್ಟ್ರೀಯ ರೈಫಲ್ ಘಟಕ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಮುಂಜಾನೆ 5.30ರ ಸುಮಾರಿಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಬೆಳಗ್ಗೆ ಆರರ ಸುಮಾರಿಗೆ ಒಬ್ಬ ಯೋಧ ಹುತಾತ್ಮನಾಗಿರುವುದಾಗಿಯೂ, ಒಬ್ಬ ಉಗ್ರನನ್ನು ಕೊಂದು ಹಾಕಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

Agencies 7 Jul 2020, 11:08 am
ಕಾಶ್ಮೀರ: ಇಂದು ಮುಂಜಾನೆ ನಸುಕಿನ ಜಾವದಲ್ಲಿ ನಡೆದ ಭಾರತೀಯ ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ.
Vijaya Karnataka Web Jammu Kashmir


ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಗೂಸು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಒಬ್ಬ ಉಗ್ರರನ್ನು ಹೊಡೆದುರುಳಿಸುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂಜಾಬ್‌ ಮೇಲೆ ಪಾಪಿ ಪಾಕ್‌ ಕಣ್ಣು, ಖಲಿಸ್ತಾನ್‌ ಭಯೋತ್ಪಾದನೆಗೆ ಮರುಜೀವ!

ಮನೆಯೊಂದರಲ್ಲಿ ಉಗ್ರರು ಅವಿತು ಕುಳಿತಿದ್ದಾರೆ ಅನ್ನುವ ಸುದ್ದಿ ತಿಳಿದ ಸೇನೆ, ಸಿಆರ್‌ಪಿಎಫ್‌ನ 183ನೇ ಬೆಟಾಲಿಯನ್, ರಾಷ್ಟ್ರೀಯ ರೈಫಲ್ ಘಟಕ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಮುಂಜಾನೆ 5.30ರ ಸುಮಾರಿಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಬೆಳಗ್ಗೆ ಆರರ ಸುಮಾರಿಗೆ ಒಬ್ಬ ಯೋಧ ಹುತಾತ್ಮನಾಗಿರುವುದಾಗಿಯೂ, ಒಬ್ಬ ಉಗ್ರನನ್ನು ಕೊಂದು ಹಾಕಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಉಗ್ರರನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.


ಗಲ್ವಾನ್ ಕಣಿವೆಯಲ್ಲಿ 1 ಕಿ.ಮೀ. ಹಿಂದೆ ಸರಿದ ಚೀನಾ, ಮೋದಿ ಭೇಟಿಯಿಂದ ಬೆದರಿತೆ?

ಪುಲ್ವಾಮ ಅಂದಾಕ್ಷಣ ಭಾರತೀಯರ ಮುಖದಲ್ಲಿ ಒಂದು ಕ್ಷಣ ಕರಿಛಾಯೆ ಆವರಿಸುತ್ತದೆ. 2019ರ ಫೆಬ್ರವರಿ 14ರಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಉಗ್ರರು 40 ಭಾರತೀಯ ಯೋಧರನ್ನು ಬಲಿ ಪಡೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ