ಆ್ಯಪ್ನಗರ

ಚಹಾ ಅಂಗಡಿಯವರ ಮಗಳು ಈಗ ಏರ್‌ಪೋರ್ಸ್‌ ಪೈಲಟ್‌! ಯುವತಿ ಸಾಧನೆಗೆ ಪ್ರಶಂಸೆ!

ಬಡತನ ಇದ್ದರೆ ಏನು ಸಾಧನೆಗೆ ಯಾವುದು ಅಡ್ಯಾಡಿಗುವುದಿಲ್ಲ ಎಂದು ಮಧ್ಯಪ್ರದೇಶದ ಯುವತಿ ಸಾಧಿಸಿ ತೋರಿಸಿದ್ದಾಳೆ. ಚಹಾ ಮಾರುವವರೊಬ್ಬರ ಪುತ್ರಿಯಾಗಿರುವ ಯುವತಿ ಈಗ ಭಾರತೀಯ ವಾಯುಸೇನೆಯಲ್ಲಿ ಪೈಲಟ್.

THE ECONOMIC TIMES 24 Jun 2020, 6:11 pm
ಭೋಪಾಲ್‌: ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲಎಂಬ ಮಾತಿಗೆ ಬೆಸ್ಟ್‌ ಉದಾಹರಣೆ ಮಧ್ಯಪ್ರದೇಶದ ಈ 24ರ ಯುವತಿ. ಬಸ್‌ ಸ್ಟ್ಯಾಂಡ್‌ನಲ್ಲಿ ಚಹಾ ಮಾರುವವರೊಬ್ಬರ ಪುತ್ರಿಯಾಗಿರುವ ಅವರು ಈಗ ಭಾರತೀಯ ವಾಯುಸೇನೆಯಲ್ಲಿ ಪೈಲಟ್‌. ಇತ್ತೀಚೆಗೆ ಅವರು ಏರ್‌ಫೋರ್ಸ್‌ನಲ್ಲಿ ಫ್ಲೈಯಿಂಗ್‌ ಆಫೀಸರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Vijaya Karnataka Web 2020_6$largeimg24_Jun_2020_143420830


ಮಧ್ಯಪ್ರದೇಶದ ಗಡಿ ಪ್ರದೇಶ ನೀಮುಚ್‌ ಪಟ್ಟಣದ ಅಂಚಲ್‌ ಗಂಗ್ವಾಲ್‌ ಅವರೇ ಈ ಸಾಧಕಿ. 2013ರಲ್ಲಿ ನಡೆದ ಕೇದಾರನಾಥ ದುರಂತದ ವೇಳೆ ವಾಯುಸೇನೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಅವರ ಮನಸೆಳೆದಿತ್ತು. ಆಗಲೇ ತಾವು ಪೈಲಟ್‌ ಆಗಬೇಕು ಎಂದು ಕನಸು ಕಂಡರು. ಆದರೆ, ನೀಮುಚ್‌ ಪಟ್ಟಣದ ಬಸ್‌ಸ್ಟ್ಯಾಂಡ್‌ನಲ್ಲಿ ಚಹಾ ಅಂಗಡಿ ಇಟ್ಟಿರುವ ತಂದೆ ಸುರೇಶ್‌ ಗಂಗ್ವಾಲ್‌ ಸಂಪಾದನೆಯಿಂದ ಶಾಲಾ ಶುಲ್ಕ ಪಾವತಿಸಲು ಪರದಾಡುತ್ತಿರುವ ನಡುವೆ ಈ ಸಾಧನೆ ಸರಳವಾಗಿರಲಿಲ್ಲ.

ಆದರೂ, ಎಲ್ಲರ ಪ್ರೋತ್ಸಾಹದಿಂದ ಗೆದ್ದಿದ್ದಾರೆ. ಪಟ್ಟಣದ ಬುಕ್‌ಸ್ಟಾಲ್‌ಗಳಿಗೆ ತೆರಳುತ್ತಿದ್ದ ಅಂಚಲ್‌, ಏರ್‌ಫೋರ್ಸ್‌ಗೆ ಸೇರಲು ಬೇಕಾಗುವ ಅರ್ಹತೆಯ ಮಾಹಿತಿ ಪಡೆದುಕೊಂಡಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿದ ಅವರು ಸತತ ಆರು ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾಗಿದ್ದಾರೆ. ದಿಂಡಿಗಲ್‌ನ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ ಬಳಿಕ ಸೇವೆಗೆ ನಿಯುಕ್ತಿಗೊಂಡಿದ್ದಾರೆ.

"ದೇಶದಲ್ಲಿ ಕೊರೊನಾ ಮಾತ್ರ ಹೆಚ್ಚಾಗ್ತಿಲ್ಲ": ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

ಮಗಳ ಸಾಧನೆ ಬಗ್ಗೆ ತಂದೆ ಸುರೇಶ್‌ ಗಂಗ್ವಾಲ್‌ ಅಪಾರ ಸಂತಸವಿದೆ. ಆದರೆ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮಗಳನ್ನು ನೋಡಲು ಹೋಗುವುದಕ್ಕೆ ಸಾಧ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಅಂಚಲ್‌ ಸಾಧನೆಯನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೊಂಡಾಡಿದ್ದು, ತಮ್ಮ ರಾಜ್ಯದ ಯುವತಿಯ ಸಾಧನೆ ಅಪ್ರತಿಮ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ