ಆ್ಯಪ್ನಗರ

ಕೇವಲ ಮಿಸ್‌ಕಾಲ್‌ ಸಾಕು ನಿಮ್ಮ ಜೀವನ ಬದಲಿಸಲು...

ನಿಷ್ಕಲ್ಮಶ ಪ್ರೀತಿಗೆ ಯಾವುದೇ ರೂಪವಾಗಲೀ, ಅಂತಸ್ತಾಗಲೀ ಅಡ್ಡಿಯಾಗುವುದಿಲ್ಲ, ಇದಕ್ಕೆ ಉದಾಹರಣೆಯೆಂದರೆ ಆಸಿಡ್ ದಾಳಿಗೆ ಒಳಗಾಗಿದ್ದ ಲಲಿತಾ ಬೆನ್ಬನ್ಸಿ ಕಥೆ.

ಟೈಮ್ಸ್ ಆಫ್ ಇಂಡಿಯಾ 24 May 2017, 4:06 pm
ಮುಂಬಯಿ: ನಿಷ್ಕಲ್ಮಶ ಪ್ರೀತಿಗೆ ಯಾವುದೇ ರೂಪವಾಗಲೀ, ಅಂತಸ್ತಾಗಲೀ ಅಡ್ಡಿಯಾಗುವುದಿಲ್ಲ, ಇದಕ್ಕೆ ಉದಾಹರಣೆಯೆಂದರೆ ಆಸಿಡ್ ದಾಳಿಗೆ ಒಳಗಾಗಿದ್ದ ಲಲಿತಾ ಬೆನ್ಬನ್ಸಿ ಕಥೆ.
Vijaya Karnataka Web acid attack survivor gets a call from a wrong number it blossoms in to love then marriage
ಕೇವಲ ಮಿಸ್‌ಕಾಲ್‌ ಸಾಕು ನಿಮ್ಮ ಜೀವನ ಬದಲಿಸಲು...


2012ರಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಲಿತಾ ಮೇಲೆ ಸಹೋದರ ಮುಖಕ್ಕೆ ಆಸಿಡ್ ಹಾಕಿದ್ದ. ಲಲಿತಾರ ಮುಖ ಬಹುತೇಕ ಸುಟ್ಟು ಹೋಗಿತ್ತು. ಲಲಿತಾಗೆ ಮುಂಬಯಿ ಆಸ್ಪತ್ರೆಯಲ್ಲಿ 17 ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಕೆಲ ತಿಂಗಳ ಹಿಂದೆ ರಾಹುಲ್ ಎಂಬ ವ್ಯಕ್ತಿಯಿಂದ ಮಿಸ್‌ ಕಾಲ್‌ ಬಂದಿತ್ತು, ಬಳಿಕ ಇದೇ ಕರೆ ಇಬ್ಬರ ನಡುವೆ ಪ್ರೀತಿ ಚಿಗುರಲು ಕಾರಣವಾಯ್ತು. ಪರಸ್ಪರ ಭೇಟಿಯಾಗಿ, ಮಾತುಕತೆ ನಡೆಸಿ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದರು. ಮೊದಲು ರಿಜಿಸ್ಟರ್ ಮ್ಯಾರೇಜ್ ಆದ ದಂಪತಿ ಮುಂಬೈನಲ್ಲಿ ರಿಸೆಪ್ಶನ್ ಏರ್ಪಡಿಸಿದ್ದರು. ಮಂಗಳವಾರ ಲಲಿತಾ ರಾಹುಲ್‌ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಆಸಿಡ್ ದಾಳಿಗೊಳಗಾಗಿದ್ದ ಇನ್ನೂ ಅನೇಕ ಮಹಿಳೆಯರು ರಿಸೆಪ್ಶನ್ ನಲ್ಲಿ ಪಾಲ್ಗೊಂಡಿದ್ದರು.



ವಿಶೇಷವೆಂದರೆ ಮುಂಬಯಿನಲ್ಲಿ ನಡೆದ ಮದುವೆಗೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕೂಡಾ ಒಂದು ಫ್ಲಾಟ್‌ ಅನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಅಲ್ಲದೇ ಅವರ ಚಿಕಿತ್ಸೆಯ ಖರ್ಚನ್ನೂ ನೀಡುವುದಾಗಿ ಭರವಸೆ ಒದಗಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ