ಆ್ಯಪ್ನಗರ

ವೋಕಲ್ ಫಾರ್ ಲೋಕಲ್ ಮಂತ್ರಕ್ಕೆ ಧ್ವನಿಯಾಗಿ: ಜನತೆಗೆ ಪ್ರಧಾನಿ ಮೋದಿ ಕರೆ!

74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ನವದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ವೋಕಲ್ ಫಾಲ್ ಲೋಕಲ್' ಮಂತ್ರವನ್ನು ಅಳವಡಿಸಿಕೊಳ್ಳುವಂತೆ ದೇಶವಾಸಿಗಳಿಗೆ ಕರೆ ನೀಡಿದರು.

Vijaya Karnataka Web 15 Aug 2020, 10:17 am
ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ನವದೆಹಲಿಯ ಕೆಂಪುಕೋಟೆಯಿಂದ ಸತತ ಒಂದುವರೆ ಗಂಟೆಗೂ ಅಧಿಕ ಕಾಲ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
Vijaya Karnataka Web PM Modi
ವೋಕಲ್ ಫಾರ್ ಲೋಕಲ್ ಮಂತ್ರ ಅಳವಡಿಸಿಕೊಳ್ಳುವಂತೆ ಪ್ರಧಾನಿ ಕರೆ


ಈ ವೇಳೆ ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಜನತೆಯ ಸಹಕಾರ ಕೋರಿದ ಪ್ರಧಾನಿ ಮೋದಿ, 'ವೋಕಲ್ ಫಾಲ್ ಲೋಕಲ್' ಮಂತ್ರವನ್ನು ಅಳವಡಿಸಿಕೊಳ್ಳುವಂತೆ ದೇಶವಾಸಿಗಳಿಗೆ ಕರೆ ನೀಡಿದರು.

ಭಾರತವನ್ನು ಕೆಣಕಿದವರಿಗೆ ಸೂಕ್ತ ತಿರುಗೇಟು ನೀಡಲಾಗಿದೆ: ಮೋದಿ ಗುಡುಗು!

ಭಾರತ ಆತ್ಮ ನಿರ್ಭರ ದೇಶವಾಗಬೇಕು ಎಂಬುದು ಸಮಸ್ತ ಭಾರತೀಯರ ಕನಸು. ಈ ಕನಸನ್ನು ನನಸು ಮಾಡಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸ್ವಾವಲಂಬನೆ ದೇಶದ ತುರ್ತು ಅಗತ್ಯವಾಗಿದ್ದು, ಇದಕ್ಕಾಗಿ ವೋಕಲ್ ಫಾರ್ ಲೋಕಲ್ ಯೋಜನೆಯ ಮಂತ್ರವನ್ನು ಜನತೆ ಅಳವಡಿಸಿಕೊಳ್ಳಬೇಕು ಎಂದು ಕರೆ ಮೋದಿ ಕರೆ ನೀಡಿದರು.

ನ್ಯಾಶನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಘೋಷಿಸಿದ ಪ್ರಧಾನಿ ಮೋದಿ: ಪ್ರತಿ ಭಾರತೀಯನಿಗೂ ಹೆಲ್ತ್ ಐಡಿ!

ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಭಾರತ ಬದಲಾದರೆ ವಿಶ್ವ ಬದಲಾಗುತ್ತದೆ. ವಿಶ್ವಕ್ಕೆ ಭಾರತದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಭಾರತ ವಿಶ್ವ ಕಲ್ಯಾಣಕ್ಕಾಗಿ ದುಡಿಯಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಭಾರತವನ್ನು ಆತ್ಮ ನಿರ್ಭರವನ್ನಾಗಿ ಮಾಡಿದಾಗ ಮಾತ್ರ ಜಾಗತಿಕ ವೇದಿಕೆಯಲ್ಲಿ ದೇಶದ ಪ್ರಭಾವ ಹೆಚ್ಚಾಗಲು ಸಾಧ್ಯ ಎಂದ ಪ್ರಧಾನಿ ಮೋದಿ, ಆತ್ಮ ನಿರ್ಭರ ಭಾರತ ಕಟ್ಟುವಲ್ಲಿ ಸಮಸ್ತ ಭಾರತೀಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ