ಆ್ಯಪ್ನಗರ

Adultery Challenge: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ - ಸುಪ್ರೀಂ ಕೋರ್ಟ್ ತೀರ್ಪು

ಅನೈತಿಕ ಸಂಬಂಧ ಇನ್ನು ಕ್ರಿಮಿನಲ್ ಅಪರಾಧವಲ್ಲ. ಸೆಕ್ಷನ್ 497 ಅಸಾಂವಿಧಾನಿಕ. ಮಹಿಳೆ, ಪುರುಷ ಇಬ್ಬರೂ ಸಮಾನರು. ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು. ಎಂದು ಸುಪ್ರೀಂ ಕೋರ್ಟ್ ಸಿಜೆಐ ದೀಪಕ್ ಮಿಶ್ರಾ ಅವರನ್ನೊಳಗೊಂಡ ನಾಲ್ಕು ಮಂದಿ ನ್ಯಾಯಾಧೀಶರ ಪೀಠ ತೀರ್ಪು ನೀಡಿದ್ದಾರೆ.

THE ECONOMIC TIMES 27 Sep 2018, 2:36 pm
ಹೊಸದಿಲ್ಲಿ: ಅನೈತಿಕ ಸಂಬಂಧ ಇನ್ನು ಕ್ರಿಮಿನಲ್ ಅಪರಾಧವಲ್ಲ. ಸೆಕ್ಷನ್ 497 ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಗುರುವಾರ (ಸೆಪ್ಟೆಂಬರ್ 27) ಮಹತ್ವದ ತೀರ್ಪು ನೀಡಿದೆ.

ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು. ಗಂಡ ಹೆಂಡತಿಗೆ ಮಾಲೀಕನಲ್ಲ. ಮಹಿಳೆ, ಪುರುಷ ಇಬ್ಬರೂ ಸಮಾನರು. ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು ಎಂದು ಸುಪ್ರೀಂ ಕೋರ್ಟ್ ಸಿಜೆಐ ದೀಪಕ್ ಮಿಶ್ರಾ ಅವರನ್ನೊಳಗೊಂಡ ನಾಲ್ಕು ಮಂದಿ ನ್ಯಾಯಾಧೀಶರ ಪೀಠ ತೀರ್ಪು ನೀಡಿದ್ದಾರೆ.

ಈ ಮೂಲಕ 150 ವರ್ಷಗಳ ಹಳೆಯ ಕಾನೂನನ್ನು ಅಸಾಂವಿಧಾನಿಕ ಎಂದಿದೆ ಕೋರ್ಟ್. ಪತ್ನಿಗೆ ಪತಿಯೇ ಮಾಲೀಕನಲ್ಲ ಎಂದಿದೆ ನ್ಯಾಯಪೀಠ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಎ ಎಂ ಖಾನ್‌ವಿಲ್ಕರ್, ಡಿ ವೈ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರಿದ್ದ ಪೀಠ ಸೆಕ್ಷನ್ 497 ಮತ್ತು ಸಿಆರ್‌ಪಿಸಿಯ ಸೆಕ್ಷನ್ 198 ಅಸಾಂವಿಧಾನಿಕ ಎಂದಿದೆ.


ತೀರ್ಪಿನ ಕೆಲವು ಮುಖ್ಯಾಂಶಗಳು:
* ಅನೈತಿಕತೆ ಎಂಬುದು ವಿಚ್ಛೇದನಕ್ಕೆ ದಾರಿಯಾಗಬಹುದು ಆದರೆ ಕ್ರಿಮಿನಲ್ ಅಪರಾಧವಲ್ಲ ಎಂದಿದ್ದಾರೆ ಸಿಜೆಐ ದೀಪಕ್ ಮಿಶ್ರಾ.
* ಅನೈತಿಕತೆ ಅಪರಾಧವಲ್ಲ, ಆದರೆ ಅನೈತಿಕತೆ ಸಂಬಂಧದ ಕಾರಣದಿಂದ ಅನ್ಯಾಯಕ್ಕೊಳಗಾದ ಪತಿ/ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ, ಸಾಕ್ಷ್ಯಾಧಾರ ಹಾಜರುಪಡಿಸಿದರೆ, ಅದನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ ಸಿಜೆಐ ಮಿಶ್ರಾ ಮತ್ತು ನ್ಯಾಯಮೂರ್ತಿ ಖಾನ್‍ವಿಲ್ಕರ್.
* ಸಂವಿಧಾನದಲ್ಲಿ "the I, me and you" ಒಳಗೊಂಡಿದೆ ಎಂದಿದ್ದಾರೆ ಸಿಜೆಐ.
* ಪತಿ ಪತ್ನಿಯ ಯಜಮಾನ ಅಲ್ಲ.
* ಅನೈತಿಕತೆ ಅತೃಪ್ತ ಮದುವೆಗೆ ಕಾರಣವಲ್ಲ, ಇದರ ಪರಿಣಾಮದಿಂದಾಗಿ ಅಸಂತೋಷಕ್ಕೆ ಮದುವೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
* ಸೆಕ್ಷನ್ 497 ಪುರಾತನ ಸೌಲಭ್ಯವಾಗಿದ್ದು, ಇದು ಅಸಾಂವಿಧಾನಿಕ ಎಂದು ಸಿಜೆಐ ಮಿಶ್ರಾ ಮತ್ತು ನ್ಯಾಯಮೂರ್ತಿ ಖಾನ್‍ವಿಲ್ಕರ್ ಅವರೊಂದಿಗೆ ಧ್ವನಿಗೂಡಿಸಿದ್ದಾರೆ ನ್ಯಾಯಮೂರ್ತಿ ಆರ್ ಎಫ್ ನಾರಿಮನ್.

ಸೆಕ್ಷನ್‌ 497 ಹೇಳುವುದೇನು?
ಮಹಿಳೆಯು ಇನ್ನೊಬ್ಬ ವ್ಯಕ್ತಿಯ ಪತ್ನಿ ಎಂದು ಗೊತ್ತಿದ್ದೂ, ಆತನ ಒಪ್ಪಿಗೆ ಇಲ್ಲದೆಯೇ ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅದು ಅತ್ಯಾಚಾರ ಎಂದು ಪರಿಗಣಿತವಾಗುವುದಿಲ್ಲ. ಬದಲಾಗಿ, ಸಂಬಂಧ ಹೊಂದಿದ ವ್ಯಕ್ತಿಯನ್ನು ವ್ಯಭಿಚಾರದ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.

ಕೋರ್ಟ್‌ ಏನು ಹೇಳುತ್ತದೆ?
ಇದರಲ್ಲಿ ವೈವಾಹಿಕ ಪಾವಿತ್ರ್ಯತೆಯ ಅಂಶವಿದೆಯಾದರೂ, ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ. ಕ್ರಿಮಿನಲ್‌ ಕಾನೂನು ಲಿಂಗ ಸಮಾನತೆ-ತಟಸ್ಥ ಧೋರಣೆ ಹೊಂದಿರಬೇಕು. ಗಂಡ ತನ್ನ ಹೆಂಡತಿಯ ಜತೆ ಇನ್ನೊಬ್ಬನ ಸಂಬಂಧಕ್ಕೆ ಒಪ್ಪಿದರೆ ಆಕೆಯನ್ನು 'ವಸ್ತುವಾಗಿ' ಬಳಸಿಕೊಂಡಂತಾಯಿತು. ಇದು ವ್ಯಭಿಚಾರದ ವ್ಯಾಪ್ತಿಗೆ ಬರುವುದಿಲ್ಲ.

ಇಟಲಿ ವಾಸಿ ಭಾರತೀಯ ಜೋಸೆಫ್‌ ಶೈನ್‌ ಈ ಪ್ರಕರಣ ಅರ್ಜಿದಾರರಾಗಿದ್ದು, ಪರಸ್ಪರ ಸಮ್ಮತಿಯಿಂದ ಲೈಂಗಿಕವಾಗಿ ಒಂದುಗೂಡುವ ಪುರುಷ-ಮಹಿಳೆಗೆ ಪ್ರತ್ಯೇಕ ನ್ಯಾಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ಹಿಂದಿನ ಕೆಲವು ತೀರ್ಪುಗಳೂ ಮಹಿಳಾಪರವಾಗಿಯೇ ಇದ್ದು ಅವುಗಳನ್ನು ಮರುಪರಿಶೀಲಿಸಬೇಕೆಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ