ಆ್ಯಪ್ನಗರ

ಲಡಾಖ್‌ ಗಡಿಯಲ್ಲಿ ಸೈನ್ಯ ಬಲವರ್ಧನೆ: ಏನಿದು ಸೇನೆಯ ಹೊಸ ಯೋಜನೆ?

ಭಾರತ-ಚೀನಾ ಸೈನಿಕರ ನಡುವಿನ ಸಂಘರ್ಷದ ಬಳಿಕ ಲಡಾಖ್‌ ಗಡಿಯಲ್ಲಿರುವ ಗಲ್ವಾನ್ ನದಿಯ ಗುಂಟ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಟೆಂಟ್ ಹಾಕಿದ್ದು, ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆ ಮಾಡಿದೆ.

Vijaya Karnataka Web 17 May 2020, 3:22 pm
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಕ್ಕಿಂ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡವಿನ ಸಂಘರ್ಷದ ಬಳಿಕ, ಲಡಾಖ್‌‌ನ ಭಾರತ-ಚೀನಾ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.
Vijaya Karnataka Web ITBP Soldiers
ಐಟಿಬಿಪಿ ಯೋಧರು


ಲಡಾಖ್‌ ಗಡಿಯಲ್ಲಿರುವ ಗಲ್ವಾನ್ ನದಿಯ ಗುಂಟ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಟೆಂಟ್ ಹಾಕಿದ್ದು, ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆ ಮಾಡಿದೆ.

ಸಿಕ್ಕಿಂ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡವಿನ ಸಂಘರ್ಷದ ಬಳಿಕ ಗಡಿಯಲ್ಲಿ ಚೀನಾ ಸೇನೆ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಹೆಚ್ಚಿನ ನಿಗಾ ಇರಿಸುವಂತೆ ಕೇಂದ್ರ ರಕ್ಷಣಾ ಇಲಾಖೆ ಭದ್ರತಾ ಪಡೆಗಳಿಗೆ ಸಂದೇಶ ರವಾನಿಸಿದೆ.

ಗಡಿಯಲ್ಲಿ ಕೈ ಕೈ ಮಿಲಾಯಿಸಿದ ಭಾರತ-ಚೀನಾ ಸೈನಿಕರು: ಡ್ರ್ಯಾಗನ್ ತಗಾದೆಗೆ ಪ್ರತ್ಯುತ್ತರ!

ಇದೇ ಕಾರಣಕ್ಕೆ ಲಡಾಖ್‌ ಗಡಿಯಲ್ಲಿ ಐಟಿಬಿಪಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, ವಾಸ್ತವ ನಿಯಂತ್ರಣ ರೇಖೆ(LAC)ಯಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಮೇಲೆ ನಿಗಾ ಇರಿಸಿದೆ.

ಚೀನಾ ಕೂಡ ಗಲ್ವಾನ್ ನದಿಯ ಗಡಿಗುಂಟ ಟೆಂಟ್‌ಗಳನ್ನು ಹಾಕಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆ ಮಾಡಿದೆ. ಗಡಿಯಲ್ಲಿ ಉದ್ರೇಕಕಾರಿ ವರ್ತನೆ ತೋರುತ್ತಿರುವ ಚೀನಿ ಸೈನಿಕರಿಗೆ ಅಂಕುಶ ಹಾಕಲು ಭಾರತ ಕೂಡ ಹೆಚ್ಚುವರಿ ಸೇನೆಯನ್ನು ಜಮಾವಣೆ ಮಾಡಿದೆ.

ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಬಡಿದಾಟಕ್ಕೆ ಬಂದು ತೇಪೆ ಹಚ್ಚಿದ ಚೀನಾ!

1962ರಲ್ಲಿ ಗಲ್ವಾನ್ ನದಿಯ ಗಡಿಯಲ್ಲಿ ಭಾರತೀಯ ಸೇನಾ ಪೋಸ್ಟ್‌ ಮೇಲೆ ದಾಳಿ ಮಾಡುವ ಮೂಲಕವೇ ಚೀನಾ ಭೀಕರ ಯುದ್ಧಕ್ಕೆ ಮುನ್ನುಡಿ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ