ಆ್ಯಪ್ನಗರ

ಕೃಷಿ ಕಾಯ್ದೆ ವಿರುದ್ಧ ಸಿಡಿದೆದ್ದ ಅನ್ನದಾತ: ರಾಷ್ಟ್ರಪತಿ ಅಂಗಳಕ್ಕೆ ಪ್ರತಿಪಕ್ಷ ನಾಯಕರ ನಿಯೋಗ

10 ದಿನಕ್ಕೂ ಹೆಚ್ಚು ಕಾಲ ಕೊರೆವ ಚಳಿಯನ್ನೂ ಲೆಕ್ಕಿಸದೆ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ಕುಳಿತಿರುವ ರೈತರು, ಮಂಗಳವಾರ ಭಾರತ್ ಬಂದ್ ಕರೆಯನ್ನೂ ನೀಡಿದ್ದರು. ಈ ಬಂದ್ ಕರೆಗೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು.

ANI 8 Dec 2020, 4:22 pm

ಹೈಲೈಟ್ಸ್‌:

  • ಪ್ರತಿಭಟನೆ, ಬಂದ್ ಬಳಿಕ ರಾಷ್ಟ್ರಪತಿ ಅಂಗಳಕ್ಕೆ
  • ಕೋವಿಂದ್ ಅವರನ್ನು ಭೇಟಿ ಮಾಡಲಿದೆ ನಿಯೋಗ
  • ಪ್ರತಿಪಕ್ಷಗಳ ಮುಖಂಡರ ನಿಯೋಗದಿಂದ ರಾಷ್ಟ್ರಪತಿ ಭೇಟಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ramnath Kovind
ರಾಷ್ಟ್ರಪತಿ
ಹೊಸ ದಿಲ್ಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಇದೀಗ ಪ್ರತಿಪಕ್ಷಗಳು ಮತ್ತೊಂದು ಅಸ್ತ್ರ ಪ್ರಯೋಗಿಸಲು ಹೊರಟಿವೆ. ರೈತರು ಬೀದಿಗಿಳಿದಿದ್ದಾಯ್ತು, ಭಾರತ್ ಬಂದ್ ಆಚರಣೆ ಮಾಡಿದ್ದಾಯ್ತು, ಇದೀಗ ಇದೇ ವಿಚಾರ ರಾಷ್ಟ್ರಪತಿ ಭವನದಲ್ಲೂ ಪ್ರತಿಧ್ವನಿಸಲಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ಪ್ರತಿಪಕ್ಷ ನಾಯಕರು ನಿರ್ಧರಿಸಿದ್ದಾರೆ. ಬುಧವಾರ ಸಂಜೆ 5 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಪಕ್ಷ ನಾಯಕರ ಭೇಟಿಗೆ ಸಮಯಾವಕಾಶ ನೀಡಿದ್ದಾರೆ.


ಪ್ರತಿಪಕ್ಷಗಳ ಜಂಟಿ ನಿಯೋಗದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಐವರು ಇರಲಿದ್ದಾರೆ ಎಂದು ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಮಾಹಿತಿ ನೀಡಿದ್ದಾರೆ.

ರೈತರೇನು ಮೂರ್ಖರೇ..? ಮಾಧ್ಯಮಗಳಿಗೇ ಸವಾಲೆಸೆದ ಕಾಂಗ್ರೆಸ್ ನಾಯಕ ಕಮಲ್‌ನಾಥ್..!

ಕೊರೊನಾ ವೈರಸ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕೇವಲ 5 ಮಂದಿಯ ನಿಯೋಗ ಮಾತ್ರ ರಾಷ್ಟ್ರಪತಿಗಳನ್ನು ಭೇಟಿ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಐವರು ಪ್ರತಿಪಕ್ಷ ನಾಯಕರು ರಾಷ್ಟ್ರಪತಿ ಭೇಟಿಗೆ ತೆರಳಲಿದ್ದಾರೆ ಎಂದು ಎಡಪಕ್ಷ ನಾಯಕ ಸೀತಾರಾಂ ಯೆಚೂರಿ ಮಾಹಿತಿ ನೀಡಿದ್ದಾರೆ. ಆದ್ರೆ, ರಾಹುಲ್ ಹಾಗೂ ಶರದ್ ಪವಾರ್ ಅವರ ಜೊತೆಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿರುವ ಇನ್ನೂ ಮೂವರು ನಾಯಕರು ಯಾರು ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಭಾರತ್‌ ಬಂದ್ ಮೆರವಣಿಗೆಯಲ್ಲಿ 'ಡ್ಯಾನ್ಸಿಂಗ್ ಸ್ಟಾರ್' ಮೋಡಿ..! ಆಕೆ ಮೈಸೂರಿನ ಚಾಮುಂಡಿ..!

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ಸಂಸತ್‌ನಲ್ಲಿ ಅಂಗೀಕಾರಗೊಂಡಿವೆ. ಈ ಕಾಯ್ದೆಗಳ ವಿರುದ್ಧ ಪ್ರತಿಪಕ್ಷಗಳು ಸಂಸತ್‌ನಲ್ಲಿ ದನಿ ಎತ್ತಿದವು. ಇದೀಗ ಕಾಯ್ದೆ ಪಾಸ್ ಆದ ಬಳಿಕ ರೈತ ಹೋರಾಟ ತೀವ್ರಗೊಂಡಿದೆ. 10 ದಿನಕ್ಕೂ ಹೆಚ್ಚು ಕಾಲ ಕೊರೆವ ಚಳಿಯನ್ನೂ ಲೆಕ್ಕಿಸದೆ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ಕುಳಿತಿರುವ ರೈತರು, ಮಂಗಳವಾರ ಭಾರತ್ ಬಂದ್ ಕರೆಯನ್ನೂ ನೀಡಿದ್ದರು. ಈ ಬಂದ್ ಕರೆಗೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು.

ಪ್ರತಿಭಟನೆ ರಣಕೇಕೆ.. ಮರೆತೋಯ್ತು ಕೊರೊನಾ ಮುನ್ನೆಚ್ಚರಿಕೆ..! ಭಾರತ್‌ ಬಂದ್ ಬೇಕೇ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ