ಆ್ಯಪ್ನಗರ

ವಿಭಜನೆಯ ಬಳಿಕ ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು: ಹೈಕೋರ್ಟ್ ನ್ಯಾಯಮೂರ್ತಿ

ಭಾರತ-ಪಾಕಿಸ್ತಾನ ವಿಭಜನೆಯಾದಾಗ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿತ್ತು ಎಂದು ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಸೇನ್ ಸೋಮವಾರ ಹೇಳಿದ್ದಾರೆ. ಅಮನ್ ರಾಣಾ ಎಂಬುವವರಿಗೆ ರಾಜ್ಯ ಸರಕಾರ ನಿವಾಸ ಪ್ರಮಾಣಪತ್ರ ನಿರಾಕರಿಸಿದ ಪ್ರಕರಣದ ತೀರ್ಪು ನೀಡಿದ ಸಂದರ್ಭದಲ್ಲಿ ಸೇನ್ ಈ ರೀತಿ ಹೇಳಿದರು.

TIMESOFINDIA.COM 13 Dec 2018, 11:34 am
[This story originally published in Times of India on Dec 13, 2018]
Vijaya Karnataka Web shillong


ಶಿಲ್ಲಾಂಗ್: ಭಾರತ-ಪಾಕಿಸ್ತಾನ ವಿಭಜನೆಯಾದಾಗ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿತ್ತು ಎಂದು ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಸೇನ್ ಸೋಮವಾರ ಹೇಳಿದ್ದಾರೆ. ಅಮನ್ ರಾಣಾ ಎಂಬುವವರಿಗೆ ರಾಜ್ಯ ಸರಕಾರ ನಿವಾಸ ಪ್ರಮಾಣಪತ್ರ ನಿರಾಕರಿಸಿದ ಪ್ರಕರಣದ ತೀರ್ಪು ನೀಡಿದ ಸಂದರ್ಭದಲ್ಲಿ ಸೇನ್ ಈ ರೀತಿ ಹೇಳಿದರು.

"ಇಬ್ಭಾಗವಾದಾಗ ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಲಾಯಿತು. ಧಾರ್ಮಿಕ ಆಧಾರದ ಮೇಲೆ ಭಾರತ ಇಬ್ಭಾಗವಾದ ಕಾರಣ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿತ್ತು. ಆದರೆ ಇನ್ನೂ ಜಾತ್ಯಾತೀಯ ರಾಷ್ಟ್ರವಾಗಿಯೇ ಉಳಿದಿದೆ" ಎಂದಿದ್ದಾರೆ.

ಮೇಘಾಲಯ ಹೈಕೋರ್ಟ್‌ನ ಏಕೈಕ ನ್ಯಾಯಮೂರ್ತಿ ಸೇನ್ ಆಗಿದ್ದು, ತಮ್ಮ ಆದೇಶದಲ್ಲಿ ಈ ರೀತಿ ತಿಳಿಸಿದ್ದಾರೆ, "ನಮ್ಮ ದೇಶದಲ್ಲಿ ಅಥವಾ ಜಗತ್ತಿನಲ್ಲಿ ಪ್ರಳಯ ಸಂಭವಿಸಿದರೆ ಹೊರತು ಭಾರತವನ್ನು ಯಾರೂ ಇನ್ನೊಂದು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ಮಾಡಬೇಡಿ. ಇದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಮಾತ್ರ ಇದೆ ಎಂಬ ವಿಶ್ವಾಸ ತಮಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ಹಿತಾಸಕ್ತಿಗೆ ಬೆಂಬಲ ಸೂಚಿಸಬೇಕು" ಎಂದಿದ್ದಾರೆ.

ಏಕ ರೂಪದ ಕಾನೂನು ಜಾರಿಗೆ ತರಲು ಸರಕಾರವನ್ನು ವಿನಂತಿಸಿಕೊಳ್ಳುತ್ತೇನೆ. ಇದು ಎಲ್ಲ ನಾಗರಿಕರನ್ನು ಒಗ್ಗೂಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಸೇನ್. "ಭಾರತದ ಕಾನೂನು ಮತ್ತು ಸಂವಿಧಾನವನ್ನು ವಿರೋಧಿಸುವ ಯಾರೇ ಆಗಲಿ ಅವರನ್ನು ಭಾರತದ ನಾಗರಿಕ ಎಂದು ಗುರುತಿಸಬಾರದು. ಇದನ್ನು ಎಲ್ಲರೂ ನೆನಪಿಡಬೇಕು. ಮೊದಲು ನಾವು ಮನುಷ್ಯರು ಆ ಬಳಿಕವಷ್ಟೇ ಅವರವರ ಸಮುದಾಯ ಬರುತ್ತದೆ" ಎಂದು ತಮ್ಮ 37 ಪುಟಗಳ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ ಸೇನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ