ಆ್ಯಪ್ನಗರ

ಸತ್ತ ಉಗ್ರರ ಸಂಖ್ಯೆ ಎಷ್ಟೆಂಬುದು ಇನ್ನೊಂದು ದಿನದಲ್ಲಿ ಬಹಿರಂಗ!

ವಾಯುದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡು ಸಲ ಭದ್ರತೆ ಕುರಿತು ಸಂಪುಟ ಸಮಿತಿ ಸಭೆಗಳನ್ನು ನಡೆಸಿದೆ.

Vijaya Karnataka 6 Mar 2019, 5:00 am
ಹೊಸದಿಲ್ಲಿ: ಪಾಕಿಸ್ತಾನದ ಬಾಲಾಕೋಟ್‌ ಮೇಲೆ ನಡೆದ ವಾಯುದಾಳಿಯಲ್ಲಿ ಎಷ್ಟು ಉಗ್ರರ ಹತ್ಯೆ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಹಿರಿಯ ಸಚಿವರಿಬ್ಬರು ಮೊದಲ ಬಾರಿ ಮಾತನಾಡಿದ್ದಾರೆ. ಆದರೆ, ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿರುವ ಹೇಳಿಕೆಗಳು ಮತ್ತಷ್ಟು ಗೊಂದಲ ಮೂಡಿಸಿವೆ.
Vijaya Karnataka Web sing


ವಾಯುದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡು ಸಲ ಭದ್ರತೆ ಕುರಿತು ಸಂಪುಟ ಸಮಿತಿ ಸಭೆಗಳನ್ನು ನಡೆಸಿದೆ. ಈ ಸಭೆಯಲ್ಲಿ ರಾಜನಾಥ್‌ ಹಾಗೂ ನಿರ್ಮಲಾ ಇಬ್ಬರೂ ಪಾಲ್ಗೊಂಡಿದ್ದರು. ಮಂಗಳವಾರ ಅಸ್ಸಾಂನ ಧುಬ್ರಿಯ ರಾರ‍ಯಲಿಯಲ್ಲಿ ರಾಜನಾಥ್‌, ''ದಾಳಿಗೂ ಮುನ್ನ ಉಗ್ರರ ಶಿಬಿರದಲ್ಲಿ 300ಕ್ಕೂ ಹೆಚ್ಚು ಮೊಬೈಲ್‌ಗಳು ಸಕ್ರಿಯವಾಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಹೇಳಿದ್ದು, ಇದರ ಆಧಾರದ ಮೇಲೆ ಎಷ್ಟು ಭಯೋತ್ಪಾದಕರು ಸತ್ತಿರಬಹುದೆಂದು ಅಂದಾಜಿಸಬಹುದಾಗಿದೆ. ವಾಯುದಾಳಿಯಲ್ಲಿ ಸತ್ತ ಉಗ್ರರೆಷ್ಟು ಎಂಬ ಬಗ್ಗೆ ಇನ್ನೊಂದು ದಿನದಲ್ಲಿ ನಿಖರ ಮಾಹಿತಿ ದೊರೆಯಲಿದೆ,'' ಎಂದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ''ದಾಳಿಯಲ್ಲಿ ಮೃತಪಟ್ಟ ಉಗ್ರರ ಸಂಖ್ಯಾ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸುವಲ್ಲಿ ನಮ್ಮ ವಾಯುಪಡೆ ಯಶಸ್ವಿಯಾಗಿದೆ. ಆ ಬಗ್ಗೆ ಹೆಮ್ಮೆ ಇದೆ,'' ಎಂದು ಹೇಳಿಕೆ ನೀಡಿದರು.

ಬೇಕಿದ್ದರೆ ಪಾಕ್‌ಗೆ ಹೋಗಲಿ: ''ದಾಳಿ ನಡೆಸಿದ ಬಳಿಕ ವಾಯುಪಡೆ 1,2,3,4,5... ಎಂದು ಹೆಣಗಳನ್ನು ಎಣಿಸಬೇಕಿತ್ತೇ? ಪ್ರತಿಪಕ್ಷಗಳಿಗೆ ಕಾಮನ್‌ಸೆನ್ಸ್‌ ಇಲ್ಲವೇ? ಅಷ್ಟಕ್ಕೂ ದಾಳಿಯಲ್ಲಿ ಸತ್ತ ಉಗ್ರರೆಷ್ಟು ಎಂದು ಕೇಳುವ ಕಾಂಗ್ರೆಸ್‌ ನಾಯಕರು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಿ ಹೆಣಗಳ ಲೆಕ್ಕ ಹಾಕಲಿ,'' ಎಂದೂ ರಾಜನಾಥ್‌ ಸಿಂಗ್‌ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ