ಹೊಸದಿಲ್ಲಿ: ಬಹುಕೋಟಿ ರೂ. ಅಗಸ್ಟಾವೆಸ್ಟ್ಲ್ಯಾಂಡ್ ಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಜಾರಿ ನಿರ್ದೇಶನಾಲಯ ಗುರುವಾರ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅನೇಕ ರಹಸ್ಯ ಮಾಹಿತಿಗಳನ್ನು ಹೊರಗೆಡವಲಾಗಿದೆ. ''ಡೈರಿಯಲ್ಲಿ ಬರೆದುಕೊಂಡಿದ್ದ 'ಎಪಿ' ಮತ್ತು 'ಎಫ್ಎಎಂ'ಯ ಅರ್ಥ ಏನು ಎನ್ನುವುದನ್ನು ಆತ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಎಪಿ ಅಂದರೆ 'ಅಹ್ಮದ್ ಪಟೇಲ್' ಮತ್ತು ಎಫ್ಎಎಂ ಅಂದರೆ 'ಅವರ ಕುಟುಂಬ ಪರಿವಾರ' ಎಂದು ಅದರ ಅರ್ಥ ಎಂದಿದ್ದಾನೆ.
ಅಂದು ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ಮೇಲೆ ಕೆಲವು ಪ್ರಭಾವಿ ಮುಖಂಡರ ಒತ್ತಡ ಇತ್ತು ಎನ್ನುವ ಬಗ್ಗೆಯೂ ಆತ ಮಾಹಿತಿ ನೀಡಿದ್ದಾನೆ,'' ಎಂದು ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ.
ಮೈಕೆಲ್ ಡೈರಿಯಲ್ಲಿ ಉಲ್ಲೇಖಿಸಿದ Fam ಎಂಬುದು ಫ್ಯಾಮಿಲಿ (ಕಾಂಗ್ರೆಸ್ನ ಗಾಂಧಿ ಕುಟುಂಬ) ಆಗಿದ್ದು, 3 ಕೋಟಿ ಯುರೋಗಳ ಲಂಚ ನೀಡಿರುವುದರ ವಿವರಣೆ ಅದರಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯಪಡೆ ಅಧಿಕಾರಿಗಳು, ಅಧಿಕಾರಿಗಳು, ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮತ್ತು ಆಗಿನ ಆಡಳಿತ ಪಕ್ಷದ ವರಿಷ್ಠ ನಾಯಕರಿಗೆ ಈ ಹಣ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.