ಆ್ಯಪ್ನಗರ

ಭಯ್ಯು ಮಹರಾಜ್‌ ಆತ್ಮಹತ್ಯೆ ಪ್ರಕರಣ: ಮೂವರ ಬಂಧನ

ಮಹಾರಾಜ್‌ ಅವರ ಮೇಲೆ ನಿಯಂತ್ರಣ ಸಾಧಿಸಲು ಗುಟ್ಟಾಗಿ ಅವರಿಗೆ ಹೆಚ್ಚಿನ ಪ್ರಮಾಣದ ಔಷಧಗಳನ್ನು ಈ ಮೂವರು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

Vijaya Karnataka 20 Jan 2019, 5:00 am
ಇಂದೋರ್‌: ಸ್ವಯಂ ಘೋಷಿತ ದೇವ ಮಾನವ ಭಯ್ಯು ಮಹಾರಾಜ್‌ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web bhayyu


ಮಹಾರಾಜ್‌ ಅವರ ಮೇಲೆ ನಿಯಂತ್ರಣ ಸಾಧಿಸಲು ಗುಟ್ಟಾಗಿ ಅವರಿಗೆ ಹೆಚ್ಚಿನ ಪ್ರಮಾಣದ ಔಷಧಗಳನ್ನು ಈ ಮೂವರು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಜೂನ್‌ 12ರಂದು ಸ್ವಗೃಹದಲ್ಲಿ ಭಯ್ಯು ಮಹಾರಾಜ್‌ ಅಲಿಯಾಸ್‌ ಉದಯ್‌ ಸಿಂಗ್‌ ದೇಶ್‌ಮುಖ್‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಪಾಲಕ್‌ ಪುರಾಣಿಕ್‌(25) ಮತ್ತು ಆಕೆಯ ಇಬ್ಬರು ಸಹಚರರಾದ ವಿನಾಯಕ್‌ ದೂಧೇಡ್‌(42) ಮತ್ತು ಶರದ್‌ ದೇಶ್‌ಮುಖ್‌(34) ಅವರನ್ನು ಶುಕ್ರವಾರ ಬಂಧಿಸಲಾಗಿದೆ.

''ತನ್ನನ್ನು ಮುದುವೆಯಾಗುವಂತೆ ಭಯ್ಯು ಮಹಾರಾಜ್‌ ಅವರಿಗೆ ಪಾಲಕ್‌ ಬ್ಲಾಕ್‌ಮೇಲ್‌ ಮಾಡಿ, ಒತ್ತಡ ಹೇರುತ್ತಿದ್ದಳು. ಅವರ ಮೇಲೆ ನಿಯಂತ್ರಣ ಸಾಧಿಸಲು ಈ ಮೂವರು ಆರೋಪಿಗಳು ಹೆಚ್ಚಿನ ಪ್ರಮಾಣದ ಔಷಧಗಳನ್ನು ನೀಡುತ್ತಿದ್ದರು. ಇದು ಅವರ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಿತ್ತು. ಕಳೆದ ವರ್ಷ ಜೂನ್‌ 16ರರೊಳಗೆ ತನ್ನನ್ನು ಮದುವೆಯಾಗದಿದ್ದರೆ, ದೂರು ದಾಖಲಿಸಿ ಮಾನ ಹರಾಜು ಹಾಕುವುದಾಗಿ ಭಯ್ಯು ಅವರಿಗೆ ಪಾಲಕ್‌ ಬೆದರಿಕೆ ಹಾಕಿದ್ದಳು. ಈ ಕುರಿತು ನಮ್ಮ ಬಳಿ ದಿಜಿಟಲ್‌ ಸಾಕ್ಷಿಗಳಿವೆ,'' ಎಂದು ಡಿಐಜಿ ಎಚ್‌.ಸಿ.ಮಿಶ್ರಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ