ಆ್ಯಪ್ನಗರ

Telangana Elections: ನನ್ನ ಕಿಡ್ನಿಗಳು ಹಾನಿಯಾಗಿವೆ, ಇದು ನನ್ನ ಕೊನೆ ಚುನಾವಣೆ - ಅಕ್ಬರುದ್ದೀನ್ ಓವೈಸಿ

ಸದಾ ವಿವಾದ, ಕೋಮು ಸಾಮರಸ್ಯ ಹರಡುವ ಭಾಷಣಗಳಿಂದಲೇ ಪ್ರಸಿದ್ಧಿ ಪಡೆದಿರುವ ಅಕ್ಬರುದ್ದೀನ್, ಅಸಾದುದ್ದೀನ್ ಓವೈಸಿಯ ಸಹೋದರ. ಈ ಬಾರಿ ಚುನಾವಣೆಯಲ್ಲಿ ಚಂದ್ರಯಾನಗುಟ್ಟಾದಿಂದ ಎಐಎಂಐಎಂ ಅಭ್ಯರ್ಥಿಯಾಗಿರುವ ಅಕ್ಬರುದ್ದೀನ್, ಚುನಾವಣಾ ಪ್ರಚಾರ, ಸಮಾವೇಶದಲ್ಲಿ ಹಿಂದಿನಂತೆ ಭಾಷಣ ಮಾಡುತ್ತಿಲ್ಲ. ಅಲ್ಲದೆ ಬಿರುಸಿನಿಂದಲೂ ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣ ಅನಾರೋಗ್ಯ ಎನ್ನುವುದು ಈಗ ಬಯಲಾಗಿದೆ.

Samayam Telugu 3 Dec 2018, 3:47 pm
ಹೈದರಾಬಾದ್: ನನ್ನ ಕಿಡ್ನಿಗಳು ಹಾನಿಗೊಂಡಿವೆ, ಹಿಂದಿನಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಬಹುಃಷ ಇದು ನನ್ನ ಕೊನೆಯ ಚುನಾವಣೆಯಾಗಿರಬಹುದು ಎಂದು ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಹೇಳಿದ್ದಾರೆ.
Vijaya Karnataka Web Telugu-image

ಸದಾ ವಿವಾದ, ಕೋಮು ಸಾಮರಸ್ಯ ಹರಡುವ ಭಾಷಣಗಳಿಂದಲೇ ಪ್ರಸಿದ್ಧಿ ಪಡೆದಿರುವ ಅಕ್ಬರುದ್ದೀನ್, ಅಸಾದುದ್ದೀನ್ ಓವೈಸಿಯ ಸಹೋದರ. ಈ ಬಾರಿ ಚುನಾವಣೆಯಲ್ಲಿ ಚಂದ್ರಯಾನಗುಟ್ಟಾದಿಂದ ಎಐಎಂಐಎಂ ಅಭ್ಯರ್ಥಿಯಾಗಿರುವ ಅಕ್ಬರುದ್ದೀನ್, ಚುನಾವಣಾ ಪ್ರಚಾರ, ಸಮಾವೇಶದಲ್ಲಿ ಹಿಂದಿನಂತೆ ಭಾಷಣ ಮಾಡುತ್ತಿಲ್ಲ. ಅಲ್ಲದೆ ಬಿರುಸಿನಿಂದಲೂ ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣ ಅನಾರೋಗ್ಯ ಎನ್ನುವುದು ಈಗ ಬಯಲಾಗಿದೆ.

ಯಕೂತ್‌ಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅಕ್ಬರುದ್ದೀನ್, ನನ್ನ ಕಿಡ್ನಿಗಳು ಹಾನಿಯಾಗಿದ್ದು, ಬುಲೆಟ್‌ ಚೂರುಗಳು ಕಿಡ್ನಿಯ ಸಮೀಪದಲ್ಲಿವೆ. ಡಯಾಲಿಸೀಸ್ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂದಿದ್ದಾರೆ.

ಈಗ ನನ್ನ ಶಾಲೆಗಳು, ದಾರುಸ್ಸಲಾಂ ಬ್ಯಾಂಕ್ ಮತ್ತು ಆಸ್ಪತ್ರೆಯ ಜತೆಗೆ ನನ್ನ ಆರೋಗ್ಯವನ್ನೂ ನೋಡಿಕೊಳ್ಳಬೇಕಿದೆ. ನನಗೆ ಈಗ ನನಗಾಗಿ ಸಮಯ ಬೇಕಿದೆ ಎಂದಿದ್ದಾರೆ.

2011ರ ಏಪ್ರಿಲ್ 30ರಂದು ಅಕ್ಬರುದ್ದೀನ್ ಓವೈಸಿ ಮೇಲೆ ಅಪರಿಚಿತರು ಚೂರಿಯಿಂದ ದಾಳಿ ನಡೆಸಿದ್ದರು. ನಂತರ ಗುಂಡಿನ ದಾಳಿ ನಡೆಸಿದ್ದರು.

ಮೂಲ ವರದಿ: ಸಮಯಂ ತೆಲುಗು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ