ಆ್ಯಪ್ನಗರ

ಮಂಡಳಿ ವಿರುದ್ಧ ಹೇಳಿಕೆ: ಸಲ್ಮಾನ್‌ ನದ್ವಿ ಉಚ್ಚಾಟನೆ

ನದ್ವಿ ಹೇಳಿದ ಬೆನ್ನಲ್ಲೇ ಇವರನ್ನು ಮಂಡಳಿಯಿಂದಲೇ ಉಚ್ಚಾಟನೆ ಮಾಡಲಾಗಿದೆ.

Vijaya Karnataka Web 11 Feb 2018, 7:22 pm
ಹೊಸದಿಲ್ಲಿ: ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಇಸ್ಲಾಮ್‌ ನಲ್ಲಿ ಅವಕಾಶ ಇದೆ ಎಂದು ಅಖಿಲ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಸಯ್ಯದ್‌ ಸಲ್ಮಾನ್‌ ಹುಸೇನಿ ನದ್ವಿ ಹೇಳಿದ ಬೆನ್ನಲ್ಲೇ ಅವರನ್ನು ಮಂಡಳಿಯಿಂದಲೇ ಉಚ್ಚಾಟನೆ ಮಾಡಲಾಗಿದೆ.
Vijaya Karnataka Web aimplb sacks cleric for suggesting shifting babri mosque site
ಮಂಡಳಿ ವಿರುದ್ಧ ಹೇಳಿಕೆ: ಸಲ್ಮಾನ್‌ ನದ್ವಿ ಉಚ್ಚಾಟನೆ


ಬಾಬರಿ ಮಸೀದಿ - ರಾಮ ಜನ್ಮಭೂಮಿ ವಿವಾದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ಆರು ಸದಸ್ಯರ ಮುಸ್ಲಿಂ ನಿಯೋಗವನ್ನು ಶ್ರೀ ರವಿಶಂಕರ್ ಗುರುಜಿ ಅವರು ಭೇಟಿ ಮಾಡಿದ್ದರು. ಈ ವೇಳೆ ನದ್ವಿ, ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಎಲ್ಲಾ ಅವಕಾಶ ಇಸ್ಲಾಂ ಕಾನೂನಿನಲ್ಲಿ ಮುಕ್ತವಾಗಿದೆ ಎಂದು ಹೇಳಿದ್ದಾರೆ. ನದ್ವಿ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಮಸೀದಿ ವಿಚಾರದಲ್ಲಿ ನದ್ವಿ ಹೇಳಿಕೆ ಅವರ ವೈಯಕ್ತಿಕವಾಗಿದೆ, ಆದರೆ ಎಐಎಂಪಿಎಲ್‌ಬಿ ಬಾಬರಿ ಮಸೀದಿ ವಿಚಾರದಲ್ಲಿನ ನಿಲುವನ್ನು ಯಾವುದೇ ಕಾರಣಕ್ಕೆ ಬದಲಾಯಿಸುವುದಿಲ್ಲ. ಅಲ್ಲದೇ ನದ್ವಿ ಇಂತಹ ಹೇಳಿಕೆಯನ್ನು ನೀಡುವುದರ ಮೂಲಕ ನಮ್ಮ ಮಂಡಳಿಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದುಮತ್ತೊಬ್ಬ ಸದಸ್ಯ ಕ್ವಾಸಿಮ್‌ ಇಲಿಯಾಸ್‌ ಹೇಳಿದ್ದಾರೆ.

ಅಯೋಧ್ಯಾ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಅಯೋಧ್ಯೆಯಲ್ಲಿ ವಿವಾದಿತ ಪ್ರದೇಶದ ಸುಮಾರು 13 ಅರ್ಜಿಗಳ ವಿಚಾರಣೆ ಮಾಡಿದ್ದರು. ಈ ವೇಳೆ ಮಾತನಾಡಿದ್ದ ನದ್ವಿ ಹೇಳಿಕೆಯ ಆಡಿಯೋ ಬಹಳಷ್ಟು ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ