ಆ್ಯಪ್ನಗರ

ವೆಜಿಟೇರಿಯನ್‌ಗೆ ಮಾಂಸಾಹಾರ ಪೂರೈಕೆ: ಜೆಟ್ ಏರ್‌ವೇಸ್‌ಗೆ 65,000 ದಂಡ

ಸಸ್ಯಾಹಾರಿ ಪ್ರಯಾಣಿಕನಿಗೆ ಮಾಂಸಾಹಾರ ನೀಡಿದ್ದಕ್ಕೆ ದಂಡವಾಗಿ 65,000 ಪಾವತಿಸುವಂತೆ ಗ್ರಾಹಕ ನ್ಯಾಯಾಲಯ ವೈಮಾನಿಕ ಸಂಸ್ಥೆ ಜೆಟ್ ಏರ್‌ವೇಸ್‌ಗೆ ಆದೇಶ ನೀಡಿದೆ.

TIMESOFINDIA.COM 11 Sep 2018, 12:58 pm
[This story originally published in Times Of India on Sep 11, 2018]
Vijaya Karnataka Web Non Veg


ಅಹಮದಾಬಾದ್:
ಸಸ್ಯಾಹಾರಿ ಪ್ರಯಾಣಿಕನಿಗೆ ಮಾಂಸಾಹಾರ ನೀಡಿದ್ದಕ್ಕೆ ದಂಡವಾಗಿ 65,000 ಪಾವತಿಸುವಂತೆ ಗ್ರಾಹಕ ನ್ಯಾಯಾಲಯ ವೈಮಾನಿಕ ಸಂಸ್ಥೆ ಜೆಟ್ ಏರ್‌ವೇಸ್‌ಗೆ ಆದೇಶ ನೀಡಿದೆ.

''ನಾನು ಶುದ್ಧ ಜನಿವಾರುಧಾರಿ ಬ್ರಾಹ್ಮಣನಾಗಿದ್ದು ಜೀವನದಲ್ಲಿ ಒಂದೇ ಒಂದು ಬಾರಿ ಮೊಟ್ಟೆಯನ್ನು ಸಹ ತಿಂದಿಲ್ಲ. ಆದರೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸಸ್ಯಾಹಾರವನ್ನು ಆರ್ಡರ್ ಮಾಡಿದ್ದರೂ ಸಹ ಮಾಂಸಾಹಾರವನ್ನು ನೀಡಿ ನನ್ನ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಸಸ್ಯಾಹಾರವೆಂದುಕೊಂಡು ಸೇವಿಸಿದ ಬಳಿಕ ಅಸ್ವಸ್ಥನಾದ ಪರಿಣಾಮ ವಾಂತಿಯಾಯ್ತು'', ಎಂದು ರಾಜ್ಕೋಟ್ ನಿವಾಸಿ ಪ್ರಯಾಣಿಕ ಭಾನುಪ್ರಸಾದ್ ಜಾನಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಜಾನಿಗೆ ಮಾಂಸಾಹಾರ ನೀಡಿದ್ದು 'ನ್ಯಾಯಸಮ್ಮತವಲ್ಲ ಎಂದ ರಾಜ್ಕೋಟ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ವೇದಿಕೆ ವೈಮಾನಿಕ ಸಂಸ್ಥೆಗೆ ದಂಡ ತುಂಬುವಂತೆ ಆದೇಶಿಸಿದೆ. ಮಾನಸಿಕ ಸಂಕಟ, ಕಿರುಕುಳ, ಮತ್ತು ಕಾನೂನು ಖರ್ಚು ಸಹ ಈ ಪರಿಹಾರ ಮೊತ್ತದಲ್ಲಿ ಸೇರಿವೆ.

ಆಗಸ್ಟ್ 20, 2016 ರಂದು ಚೆನ್ನೈನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ಪ್ರಸಂಗ ನಡೆದಿತ್ತು. ಜಾನಿ ವೈಮಾನಿಕ ಸಂಸ್ಥೆಯಿಂದ 7.25 ಲಕ್ಷ ಪರಿಹಾರ ಅಪೇಕ್ಷಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ