ಆ್ಯಪ್ನಗರ

ಮನೆ ಬಿಟ್ಟು ಬಂದ ಬಾಲಕ ವಿಮಾನವನ್ನೇರಿ ಓಡಿ ಹೋಗಲೆತ್ನಿಸಿದ

ಫರಿದಾಬಾದ್ ನಿವಾಸಿಯಾಗಿರುವ ಬಾಲಕ 7 ನೇ ತರಗತಿಯಲ್ಲಿ ಓದುತ್ತಿದ್ದು, ತಂದೆ-ತಾಯಿ ಜತೆ ಜಗಳವಾಡಿ ಶುಕ್ರವಾರ ಮನೆಯಿಂದ ಹೊರಟಿದ್ದ.

TIMESOFINDIA.COM 27 Nov 2018, 1:52 pm
ಹೊಸದಿಲ್ಲಿ: ಮನೆ ಬಿಟ್ಟು ಓಡಿ ಬಂದ 12 ವರ್ಷದ ಬಾಲಕನೊಬ್ಬ ವಿಮಾನ ಟಿಕೆಟ್ ಬುಕ್ ಮಾಡಿ ಬೆಂಗಳೂರಿಗೆ ಹಾರಲು ಯತ್ನಿಸಿದ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ. ಆತ ಟಿಕೆಟ್ ಬುಕ್ ಮಾಡಲು ತಾಯಿಯ ಕಾರ್ಡ್ ಬಳಸಿದ್ದು, ಆಕೆಗೆ ಈ ಬಗ್ಗೆ SMS ಹೋಗಿದ್ದರಿಂದ ಬಾಲಕ ಮರಳಿ ತಂದೆ-ತಾಯಿ ಮಡಿಲಿಗೆ ಸೇರುವಂತಾಗಿದೆ.
Vijaya Karnataka Web flight 1


ಫರಿದಾಬಾದ್ ನಿವಾಸಿಯಾಗಿರುವ ಬಾಲಕ 7 ನೇ ತರಗತಿಯಲ್ಲಿ ಓದುತ್ತಿದ್ದು, ತಂದೆ-ತಾಯಿ ಜತೆ ಜಗಳವಾಡಿ ಶುಕ್ರವಾರ ಮನೆಯಿಂದ ಹೊರಟಿದ್ದ. ವಿಮಾನವನ್ನೇರಿ ಬೆಂಗಳೂರಿಗೆ ಹೋಗಲು ನಿರ್ಧರಿಸಿದ ಆತ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ್ದ. ತನ್ನ ಕಾರ್ಡ್‌ನ್ನು ಟಿಕೆಟ್ ಬುಕ್ ಮಾಡಲು ಬಳಸಲಾಗಿರುವ SMS ಪಡೆದ ತಾಯಿ ತಕ್ಷಣ ಫರಿದಾಬಾದ್ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ವಿಸ್ತಾರಾ ಏರ್‌ಲೈನ್ಸ್‌ಗೆ ಕರೆ ಮಾಡಿ ಅಪ್ರಾಪ್ತ ಬಾಲಕ ಬೆಂಗಳೂರಿಗೆ ಹಾರಲಿರುವ UK 811 ವಿಮಾನವನ್ನೇರುವ ಬಗ್ಗೆ ವಿಚಾರಿಸಿ ಸ್ಥಳಕ್ಕೆ ಧಾವಿಸಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಬಳಿಕ ಆತನ ತಂದೆ-ತಾಯಿಗಳಿಗೆ ಕರೆ ಮಾಡಿ ಬಾಲಕನನ್ನು ಒಪ್ಪಿಸಿದ್ದಾರೆ. ತಂದೆ-ತಾಯಿ ಮೇಲೆ ಕೋಪಕ್ಕೆ ಅವರಿಗೆ ಹೇಳದೆ ಮನೆ ಬಿಟ್ಟು ಬಂದಿದ್ದು, ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಲು ವಿಮಾನ ಟಿಕೆಟ್ ಬುಕ್ ಮಾಡಿದ್ದೆ ಎಂದು ಬಾಲಕ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ