ಆ್ಯಪ್ನಗರ

ಅಕ್ಬರ್‌ ಮಾನಹಾನಿ ಖಟ್ಲೆಯ ಸಮನ್ಸ್‌ ಆದೇಶ ಕಾಯ್ದಿರಿಸಿದ ಕೋರ್ಟ್‌

'ಮಿ ಟೂ' ಅಭಿಯಾನದ ವೇಳೆ ಪ್ರಿಯಾ ರಮಣಿ ಅವರು 20 ವರ್ಷಗಳ ಹಿಂದೆ ಅಕ್ಬರ್‌ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು. ಇದನ್ನು ಅಕ್ಬರ್‌ ಸಾರಾಸಗಟಾಗಿ ತಳ್ಳಿಹಾಕಿದ್ದರು.

Vijaya Karnataka 23 Jan 2019, 5:00 am
ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ದಾಖಲಿಸಿರುವ ಮಾನಹಾನಿ ಖಟ್ಲೆ ವಿಚಾರಣೆ ನಡೆಸಿರುವ ದಿಲ್ಲಿ ನ್ಯಾಯಾಲಯ ಆರೋಪಿ, ಪತ್ರಕರ್ತೆ ಪ್ರಿಯಾ ರಮಣಿ ಅವರಿಗೆ ಸಮನ್ಸ್‌ ನೀಡುವ ಕುರಿತ ಆದೇಶವನ್ನು ಜನವರಿ 29ಕ್ಕೆ ಕಾಯ್ದಿರಿಸಿದೆ.
Vijaya Karnataka Web akbar


'ಮಿ ಟೂ' ಅಭಿಯಾನದ ವೇಳೆ ಪ್ರಿಯಾ ರಮಣಿ ಅವರು 20 ವರ್ಷಗಳ ಹಿಂದೆ ಅಕ್ಬರ್‌ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು. ಇದನ್ನು ಅಕ್ಬರ್‌ ಸಾರಾಸಗಟಾಗಿ ತಳ್ಳಿಹಾಕಿದ್ದರು. ಆದರೆ ಪ್ರತಿಭಟನೆಯ ಬಿಸಿ ತಾಳಲಾರದೇ ಕಳೆದ ಅ. 17ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ, ಪ್ರಿಯಾ ರಮಣಿ ತಮ್ಮ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ದಿಲ್ಲಿಯ ಅಡಿಷನಲ್‌ ಚೀಫ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌, ಪ್ರಕರಣದಲ್ಲಿ ಆರೋಪಿ ಪ್ರಿಯಾ ರಮಣಿ ಅವರಿಗೆ ಸಮನ್ಸ್‌ ನೀಡುವ ಆದೇಶವನ್ನು ಜ.29ಕ್ಕೆ ಕಾಯ್ದಿರಿಸಲಾಗಿದೆ ಎಂದು ಮಂಗಳವಾರ ಹೇಳಿದೆ. ನ್ಯಾಯಾಲಯ ಜ.11ರಂದು ಅಕ್ಬರ್‌ ಅವರ ವಾದ ಬೆಂಬಲಿಸಿದ್ದ ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ