ಆ್ಯಪ್ನಗರ

ಚಿಕ್ಕಪ್ಪ ಶಿವಪಾಲ್‌ ಜೊತೆ ಸಂಧಾನಕ್ಕೆ ಮುಂದಾದ ಅಖಿಲೇಶ್ ಯಾದವ್‌‌

ಆದರೆ, 'ಯಾವ ಕಾರಣಕ್ಕೂ ದೊಡ್ಡ ಪಕ್ಷಗಳ ಸಹವಾಸ ಮಾಡುವುದಿಲ್ಲ,' ಎಂದು ಅಖಿಲೇಶ್‌ ಯಾದವ್‌ ಹೇಳಿದ್ದು, ಪರೋಕ್ಷವಾಗಿ ಮಾಯಾವತಿ ಜೊತೆ ಮತ್ತೆ ಮೈತ್ರಿಯ ಮಾತೇ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

Agencies 14 Nov 2020, 6:36 pm
ಲಖನೌ: ಪ್ರಗತಿಶೀಲ ಸಮಾಜವಾದಿ ಪಾರ್ಟಿ ಸ್ಥಾಪಿಸಿರುವ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಅವರ ಜೊತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿರುವ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು, ತಾವು ಸರಕಾರ ರಚಿಸಿದರೆ ಚಿಕ್ಕಪ್ಪನಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾಗಿಯೂ ತಿಳಿಸಿದ್ದಾರೆ.
Vijaya Karnataka Web Akhilesh-Yadav


ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಯಾವುದೇ ಸಣ್ಣಪುಟ್ಟ ಪಕ್ಷಗಳ ಜೊತೆ ಎಸ್ಪಿ ಚುನಾವಣೆ ಮೈತ್ರಿ ಮಾಡಿಕೊಳ್ಳಲಿದೆ. ಆದರೆ ಯಾವ ಕಾರಣಕ್ಕೂ ದೊಡ್ಡ ಪಕ್ಷಗಳ ಸಹವಾಸ ಮಾಡುವುದಿಲ್ಲ," ಎಂದು ಹೇಳಿದರು. ಆ ಮೂಲಕ, ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

"ಚಿಕ್ಕಪ್ಪ ಶಿವಪಾಲ್‌ ಯಾದವ್‌ ಅವರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವಿರಾ," ಎಂದು ಪ್ರಶ್ನಿಸಿದಾಗ, "ಏಕಿಲ್ಲ? ಜಸ್ವಂತ್‌ನಗರದಲ್ಲಿ (ಶಿವಪಾಲ್‌ ಯಾದವ್‌ ಕ್ಷೇತ್ರ) ನಾವು ಅಲ್ಲಿಅಭ್ಯರ್ಥಿ ಹಾಕುವುದಿಲ್ಲ. ಅಷ್ಟೇ ಅಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶಿವಪಾಲ್‌ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು," ಎಂದು ತಿಳಿಸಿದರು.

ಸಮಾಜವಾದಿ ಪಾರ್ಟಿ ಸ್ಥಾಪಕ ಮುಲಾಯಂ ಸಿಂಗ್‌ ಅವರ ಸಹೋದರ ಶಿವಪಾಲ್‌ ಯಾದವ್‌, ಬಹು ವರ್ಷ ಸಹೋದರನ ಜೊತೆ ನಿಂತಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ ಜಸ್ವಂತ್‌ನಗರದಿಂದ ಆಯ್ಕೆಯಾಗಿದ್ದಾರೆ. ನಾಯಕತ್ವ ವಿಚಾರದಲ್ಲಿ ಮುನಿಸಿಕೊಂಡು 2019ರ ಲೋಕಸಭೆ ಚುನಾವಣೆ ವೇಳೆ ಪ್ರಗತಿಶೀಲ ಸಮಾಜವಾದಿ ಪಾರ್ಟಿ ಹುಟ್ಟುಹಾಕಿ, ಫಿರೋಜಾಬಾದ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಗೆ 2022ರ ಮಾರ್ಚ್‌ನಲ್ಲಿ ಚುನಾವಣೆ ನಡೆಯಲಿದೆ.

ಅಧಿಕಾರ ದುರ್ಬಳಕೆಬಿಹಾರ ವಿಧಾನಸಭೆ ಚುನಾವನೆ ಫಲಿತಾಂಶ ಕುರಿತು ಪ್ರಸ್ತಾಪಿಸಿದ ಅಖಿಲೇಶ್‌ ಯಾದವ್‌, "ಮಹಾಘಟಬಂಧನ್‌ ಸಮಾವೇಷಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಮತಗಟ್ಟೆ ಸಮೀಕ್ಷೆಗಳೂ ಈ ಮೈತ್ರಿಕೂಟವು ನಿಚ್ಚಳ ಬಹುಮತ ಗಳಿಸುತ್ತದೆ ಎಂದಿದ್ದವು. ಆದರೆ ಮತ ಎಣಿಕೆಯನ್ನು ಕೆಲ ಕಾಲ ನಿಲ್ಲಿಸಲಾಯಿತು ಮತ್ತು ವಿಜೇತರಿಗೆ ಪ್ರಮಾಣಪತ್ರ ನೀಡಲು ವಿಳಂಬ ಮಾಡಲಾಯಿತು. ಅಕ್ರಮ ನಡೆದಿರುವುದಕ್ಕೆ ಇದೇ ಪುಷ್ಟಿ ನೀಡುವುದಿಲ್ಲವೆ," ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ