ಆ್ಯಪ್ನಗರ

ಅಕ್ಷರಧಾಮ ಮಂದಿರ ದಾಳಿಯ ಪ್ರಧಾನ ಸಂಚುಕೋರನ ಸೆರೆ

ಅಕ್ಷರಧಾಮ ಮಂದಿರ ದಾಳಿಗೂ ಮುನ್ನ ಯಾಸಿನ್‌ ಭಟ್‌, ಉತ್ತರ ಪ್ರದೇಶ ಮೂಲಕ ಅಹಮದಾಬಾದ್‌ಗೆ ರೈಲಿನ ಬಂದು ದಾಳಿಗೆ ಸಜ್ಜಾಗಿದ್ದ ಇಬ್ಬರು ಉಗ್ರರಿಗೆ ಎಕೆ-47 ರೈಫಲ್‌ ಸೇರಿದಂತೆ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಸರಬರಾಜು ಮಾಡಿದ್ದ ಎಂದು ಎಟಿಎಸ್‌ ಮೂಲಗಳು ಹೇಳಿವೆ.

PTI 27 Jul 2019, 5:00 am
ಗಾಂಧಿನಗರ: ಗುಜರಾತ್‌ನ ಅಹಮದಾಬಾದ್‌ ಸಮೀಪದ ಅಕ್ಷರಧಾಮ ಮಂದಿರದ ಮೇಲೆ 2002ರಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯ ಪ್ರಧಾನ ಸಂಚುಕೋರ ಮೊಹಮ್ಮದ್‌ ಯಾಸಿನ್‌ ಭಟ್‌ನನ್ನು ಗುಜರಾತ್‌ ಉಗ್ರ ನಿಗ್ರಹ ದಳ (ಎಟಿಎಸ್‌) ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಿದೆ. ಸಂಜೆ ಹೊತ್ತಿಗೆ ಆತನನ್ನು ವಿಮಾನದಲ್ಲಿ ಅಹಮದಾಬಾದ್‌ಗೆ ಕರೆತರಲಾಗಿದ್ದು, ವಿಚಾರಣೆ ಮುಂದುವರಿದಿದೆ.
Vijaya Karnataka Web yasin

2002ರ ಸೆಪ್ಟೆಂಬರ್‌ 24ರಂದು ಅಕ್ಷರಧಾಮ ಮಂದಿರದಲ್ಲಿ ಇಬ್ಬರು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಎನ್‌ಎಸ್‌ಜಿಯ ಒಬ್ಬ ಕಮಾಂಡೊ ಸೇರಿ 33 ಮಂದಿ ಮೃತಪಟ್ಟಿದ್ದರು. 80ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಎನ್‌ಎಸ್‌ಜಿ ಕಾರ್ಯಾಚರಣೆ ನಡೆಸಿ ಇಬ್ಬರೂ ಉಗ್ರರನ್ನು ಹೊಡೆದುರುಳಿಸಿತ್ತು. ಈ ದಾಳಿ ಬಳಿಕ ಲಷ್ಕರೆ ತಯ್ಬಾ ಸಂಘಟನೆಯ ಉಗ್ರ ಮೊಹಮ್ಮದ್‌ ಯಾಸಿನ್‌ ಭಟ್‌ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿದ್ದ. ಆದರೆ ಈತ ಇತ್ತೀಚೆಗೆ ಅನಂತನಾಗ್‌ ಜಿಲ್ಲೆಗೆ ಮರಳಿ ಅಲ್ಲಿನ ಟಿಂಬರ್‌ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಈ ಮಾಹಿತಿಯ ಜಾಡು ಹಿಡಿದು ಗುಜರಾತ್‌ ಉಗ್ರ ನಿಗ್ರಹ ದಳ ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದೆ.
ಅಕ್ಷರಧಾಮ ಮಂದಿರ ದಾಳಿಗೂ ಮುನ್ನ ಯಾಸಿನ್‌ ಭಟ್‌, ಉತ್ತರ ಪ್ರದೇಶ ಮೂಲಕ ಅಹಮದಾಬಾದ್‌ಗೆ ರೈಲಿನ ಬಂದು ದಾಳಿಗೆ ಸಜ್ಜಾಗಿದ್ದ ಇಬ್ಬರು ಉಗ್ರರಿಗೆ ಎಕೆ-47 ರೈಫಲ್‌ ಸೇರಿದಂತೆ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಸರಬರಾಜು ಮಾಡಿದ್ದ ಎಂದು ಎಟಿಎಸ್‌ ಮೂಲಗಳು ಹೇಳಿವೆ. ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಮೂವರು ದೋಷಿಗಳು ಸೇರಿ ಆರು ಬಂಧಿತರನ್ನು ಸುಪ್ರೀಂಕೋರ್ಟ್‌ 2014ರ ಮೇನಲ್ಲಿ ದೋಷಮುಕ್ತಗೊಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೊಹಮ್ಮದ್‌ ಫಾರೂಕ್‌ ಶೇಖ್‌ನನ್ನು (47) ಅಹಮದಾಬಾದ್‌ ಪೊಲೀಸರು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ