ಆ್ಯಪ್ನಗರ

ಮಾಯಾವತಿ, ಕೇಜ್ರಿವಾಲ್‌ಗೆ ಚಾಟಿ ಬೀಸಿದ ಚುನಾವಣಾ ಆಯೋಗ

ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಕೇಜ್ರಿವಾಲ್‌ ಹಾಗೂ ಮಾಯಾವತಿ ಹೇಳಿಕೆಗೆ ಚುನಾವಣಾ ಆಯೋಗ ಚಾಟಿ ಬೀಸಿದೆ.

ಟೈಮ್ಸ್ ಆಫ್ ಇಂಡಿಯಾ 16 Mar 2017, 7:24 pm
ಹೊಸದಿಲ್ಲಿ: ಇತ್ತತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಬಿಎಸ್‌ಪಿ ಪಕ್ಷದ ನಾಯಕಿ ಮಾಯಾವತಿ ಹೇಳಿಕೆಗೆ ಚುನಾವಣಾ ಆಯೋಗ ಚಾಟಿ ಬೀಸಿದೆ.
Vijaya Karnataka Web allegations of evm tampering wild and baseless ec
ಮಾಯಾವತಿ, ಕೇಜ್ರಿವಾಲ್‌ಗೆ ಚಾಟಿ ಬೀಸಿದ ಚುನಾವಣಾ ಆಯೋಗ


ಇವಿಎಂ ಯಂತ್ರಗಳನ್ನು ಟ್ಯಾಂಪರ್‌ ಮಾಡಲಾಗಿದೆ ಎಂದು ಉಭಯ ನಾಯಕರ ಆರೋಪಕ್ಕೆ ಉತ್ತರಿಸಿರುವ ಆಯೋಗ, ಇವಿಎಂಗಳನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ ಎಂದಿದ್ದು, ಇದೊಂದು ಒರಟಾದ ಹಾಗೂ ಆಧಾರರಹಿತ ಆರೋಪ ಎಂದು ಹೇಳಿದೆ.

ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯಿರುವ ಇವಿಎಂಗಳನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ. ಆದರೂ ಒಂದು ವೇಳೆ ಪೂರಕ ದಾಖಲೆಗಳನ್ನು ನೀಡಿದರೆ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಆಯೋಗ ಹೇಳಿದೆ.

ಪಂಚ ರಾಜ್ಯ ಚುನಾವಣೆಯ ಫಲಿತಾಂಶದ ಬಳಿಕ ಬಿಎಸ್‌ಪಿ ಪಕ್ಷದ ನಾಯಕಿ ಮಾಯಾವತಿ ಮೊದಲಿಗೆ ಇವಿಎಂ ಮತಯಂತ್ರದ ವಿರುದ್ಧ ಆರೋಪ ನಡೆಸಿದ್ದರು. ಇದಾದ ಬಳಿಕ ಕೇಜ್ರಿವಾಲ್‌ ಪಂಜಾಬ್‌ ಚುನಾವಣೆಯಲ್ಲಿ ಇವಿಎಂ ಯಂತ್ರದಿಂದ ತನಗೆ ಮೋಸವಾಗಿದೆ ಆರೋಪಿಸಿದ್ದರು, ಅಲ್ಲದೇ ಇಬ್ಬರು ನಾಯಕರು ತನಿಖೆ ನಡೆಯಬೇಕು ಆಯೋಗವನ್ನು ಒತ್ತಾಯಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ