ಆ್ಯಪ್ನಗರ

ಪಾತಕಿ ದಾವೂದ್ ಜತೆ ಭೂ ವ್ಯವಹಾರದ ನಂಟು, ಮಾಜಿ ಸಚಿವ ಪ್ರಫುಲ್‌ ಪಟೇಲ್‌ ಗೆ ಇಡಿ ಸಮನ್ಸ್

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬಂಟ ಇಕ್ಬಾಲ್‌ ಮೆಮೊನ್‌ 'ಮಿರ್ಚಿ' ನಡುವಿನ ಭೂ ವ್ಯವಹಾರಕ್ಕೆ ಸಂಬಂಧಿಸಿ ಎನ್ ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಇಡಿ ನೋಟಿಸ್ ನೀಡಿದೆ. ಮುಂಬಯಿ ಮತ್ತು ಬೆಂಗಳೂರಿನಲ್ಲಿ ನಡೆಸಿದ ದಾಳಿ ವೇಲೆ ಈ ವಿಚಾರ ಬಹಿರಂಗವಾಗಿತ್ತು.

Vijaya Karnataka Web 17 Oct 2019, 11:40 am
ಹೊಸದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ವ್ಯವಹಾರದಲ್ಲಿ ನಂಟು ಹೊಂದಿರುವ ಕೇಂದ್ರದ ಮಾಜಿ ಸಚಿವ, ಎನ್ ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
Vijaya Karnataka Web Praful Patel


ದಾವೂದ್‌ ಬಂಟನ ಜತೆ ಮಾಜಿ ಕೇಂದ್ರ ಸಚಿವ ಪ್ರಫುಲ್‌ ಪಟೇಲ್ ಭೂ ನಂಟು

ಪ್ರಫುಲ್‌ ಪಟೇಲ್‌ ಮತ್ತು ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಬಂಟ ಇಕ್ಬಾಲ್‌ ಮೆಮೊನ್‌ 'ಮಿರ್ಚಿ' ನಡುವಿನ ಭೂ ವಹಿವಾಟು ಅಕ್ರಮ ಆರೋಪ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಈ ಸಂಬಂಧ ನೋಟಿಸ್ ನೀಡಲಾಗಿದೆ.

ಎನ್‌ಸಿಪಿಗೆ ಸುತ್ತಿಕೊಂಡ ವಿಮಾನಯಾನ ಹಗರಣ

ಪ್ರಫುಲ್‌ ಪಟೇಲ್‌ ಕುಟುಂಬದ ಮಾಲೀಕತ್ವದ ಮಿಲೇನಿಯಂ ಡೆವಲಪರ್ಸ್ ಮತ್ತು ಹತ ಇಕ್ಬಾಲ್‌ ಮೊಮೊನ್‌ ನಡುವೆ ವಿವಾದಿತ ಸೀಜೆ ಹೌಸ್ ಕಟ್ಟಡದ ಭೂ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿತ್ತು. ಆದರೆ ಸದ್ಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಪ್ರಫುಲ್ ಪಟೇಲ್ ತನ್ನ ಮೇಲೆ ಕೇಳಿ ಬಂದಿರುವ ಆರೋಪವನ್ನು ತಳ್ಳಿಹಾಕಿದ್ದು, ವಿವಾದಿತ ಸೀಜೆ ಹೌಸ್ ಕಟ್ಟಡದ ಭೂ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2004ರಿಂದ 2009ರವರೆಗೆ ಪ್ರಫುಲ್ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದರು.

ಫಿಫಾ ಕಾರ್ಯನಿರ್ವಾಹಕ ಮಂಡಳಿಗೆ ಪ್ರಫುಲ್‌ ಪಟೇಲ್‌ ಆಯ್ಕೆ

ಮುಂಬಯಿಯ ಅತಿ ದುಬಾರಿ ಪ್ರದೇಶ ಎನಿಸಿರುವ ವರ್ಲಿಯ ನೆಹರೂ ತಾರಾಲಯದ ಮುಂಭಾಗ ಇಕ್ಬಾಲ್‌ ಪತ್ನಿ ಹಜಾರಾ ಮೆಮೊನ್‌ಗೆ ಸೇರಿರುವ ನಿವೇಶನವನ್ನು ಮಿಲೇನಿಯಂ ಡೆವಲಪರ್ಸ್ ಕಂಪನಿಗೆ ಹಸ್ತಾಂತರಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಿರ್ಧಾರ

ಹಸ್ತಾಂತರಗೊಂಡ ಈ ನಿವೇಶನದಲ್ಲಿಕಂಪನಿಯು 15 ಅಂತಸ್ತುಗಳ ವಾಣಿಜ್ಯ ಮತ್ತು ಗೃಹ ಬಳಕೆಯ 'ಸೀಜೆ ಹೌಸ್‌' ಹೆಸರಿನ ಕಟ್ಟಡವನ್ನು 2006-07ನೇ ಸಾಲಿನಲ್ಲಿ ನಿರ್ಮಾಣ ಮಾಡಿದೆ. 2007ರಲ್ಲಿಮಿಲೇಧಿನಿಯಂ ಡೆವಲಪರ್ಸ್ ಕಂಪನಿಯು ಈ ಕಟ್ಟಡದಲ್ಲಿನ ಸರಿಸುಮಾರು 200 ಕೋಟಿ ರೂ. ಮಾರುಕಟ್ಟೆ ಮೌಲ್ಯದ 14,000 ಚದರ ಅಡಿಯ ಎರಡು ಫ್ಲ್ಯಾಟ್‌ಗಳನ್ನು ಇಕ್ಬಾಲ್‌ ಮೆಮೊನ್‌ ಕುಟುಂಬಕ್ಕೆ ಕೊಟ್ಟಿತ್ತು. ಕೊಡುಕೊಳ್ಳುವಿಕೆಯಲ್ಲಿ ಈ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬ ಆರೋಪವಿದೆ.

ವಿಮಾನಯಾನ ಹಗರಣ: ಚಿದಂಬರಂಗೆ ಸಮನ್ಸ್‌

ದಾಳಿ ನೀಡಿದ ಸುಳಿವು: ಕೆಲವು ವಾರಗಳ ಹಿಂದೆ ಜಾರಿ ನಿರ್ದೇಶನಾಲಯವು ಪ್ರಕರಣವೊಂದರ ಸಂಬಂಧ ಮುಂಬಯಿ ಮತ್ತು ಬೆಂಗಳೂರಿನ 11 ಕಡೆ ದಾಳಿ ನಡೆಸಿ ಕಾಗದ ರೂಪದ ಹಾಗೂ ಡಿಜಿಟಲ್‌ ರೂಪದ ದಾಖಲೆಗಳನ್ನು ವಶಪಡಿಸಿಸಿಕೊಂಡಿತ್ತು. ಈ ದಾಖಲೆಗಳ ಅನುಸಾರ 18 ಜನರಿಂದ ಹೇಳಿಕೆ ಪಡೆದುಕೊಂಡಿತ್ತು. ಒಂದು ದಾಖಲೆಯಲ್ಲಿ ಹಜಾರಾ ಮೆಮೊನ್‌ ನಿವೇಶನವು ಮಿಲೇನಿಯಂ ಡೆವಲಪರ್ಸ್ಗೆ ಹಸ್ತಾಂತರಗೊಂಡಿರುವ ಬಗ್ಗೆ ಸುಳಿವು ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ