ಆ್ಯಪ್ನಗರ

#MeToo: ವಿಂಟಾ ನಂದಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಅಲೋಕ್‌ನಾಥ್‌

ಮಿ ಟೂ ಅಭಿಯಾನದ ಮೂಲಕ ನಟ ಅಲೋಕ್‌ನಾಥ್‌ ಬಗ್ಗೆ ದೂರು ದಾಖಲಿಸಿದ್ದ ವಿಂಟಾ ನಂದಾ ವಿರುದ್ಧ ಅಲೋಕ್‌ನಾಥ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ

TIMESOFINDIA.COM 13 Oct 2018, 3:57 pm
[This story originally published in Times of India oct 13, 2018]
Vijaya Karnataka Web aloknath


ಮುಂಬಯಿ:
ಲೈಂಗಿಕ ಕಿರುಕುಳದ ಆರೋಪ ಮಾಡಿದ ಲೇಖಕಿ ವಿಂಟಾ ನಂದಾ ವಿರುದ್ಧ ಬಾಲಿವುಡ್‌ ನಟ ಅಲೋಕ್‌ನಾಥ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಮೀಟೂ ಅಭಿಯಾನದ ಮೂಲಕ ಅಲೋಕ್‌ನಾಥ್‌ ವಿರುದ್ಧ ಕೇಳಿಬಂದಿರುವ ಆರೋಪವನ್ನು ತಳ್ಳಿಹಾಕಿದ್ದರು. 20 ವರ್ಷದ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿಂಟಾ ನಂದ ಆರೋಪಿಸಿದ್ದರು.

ಕಳೆದ ಕೆಲ ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಮಿಟೂ ಅಭಿಯಾನ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಅನೇಕ ನಿರ್ಮಾಪಕರು, ಬಾಲಿವುಡ್‌ ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬರುತ್ತಿದೆ. ಬಾಲಿವುಡ್‌ ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ತನುಶ್ರೀ ದತ್ತ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಮೂಲಕ ಆರಂಭಗೊಂಡಿದ್ದ ಅಭಿಯಾನ ಇದೀಗ ಸಾಕಷ್ಟು ನಟಿಯರು, ಲೇಖಕಿಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಸಂಧ್ಯಾ ಮೃದುಲ್‌, ದೀಪಿಕಾ ಅಮಿನ್‌ ಹಾಗೂ ರೇಣುಕಾ ಶಹನೆ, ಅಲೋಕ್‌ನಾಥ್‌ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ವಿಂಟಾ ನಂದ ಅಲೋಕ್‌ನಾಥ್‌ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಈ ಸಂಬಂಧ ಅಲೋಕ್‌ನಾಥ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಅಲೋಕ್‌ನಾಥ್‌ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ ಹಾಗೂ ಶುದ್ಧ ಸುಳ್ಳು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಲೋಕ್‌ನಾಥ್‌ ವಕೀಲರು ತಿಳಿಸಿದ್ದರು.

ಇದೇ ವೇಳೆ ಮಿ ಟೂ ಅಭಿಯಾನಕ್ಕೆ ಮತ್ತಷ್ಟು ಮಂದಿ ಕೈ ಜೋಡಿಸುತ್ತಿದ್ದು, ಪ್ರಸ್ತುತ ಸಾಜಿದ್‌ ಖಾನ್‌, ಕೈಲಾಶ್‌ ಖೇರ್‌, ಅನು ಮಲ್ಲಿಕ್‌, ವಿಕಾಸ ಬಹಿ, ಲವ್‌ ರಾಜನ್‌ ಹಾಗೂ ಸುಭಾಷ್ ಘಾಯ್‌ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ