ಆ್ಯಪ್ನಗರ

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ್ರೆ ಕಾಂಗ್ರೆಸ್‌ಗೇಕೆ ಹೊಟ್ಟೆನೋವು ಎಂದ ಅಮಿತ್ ಶಾ

ಜಮ್ತಾರಾ(ಜಾರ್ಖಂಡ್‌): ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದು ಮಾಡಿದರೆ ಕಾಂಗ್ರೆಸ್‌ಗೇಕೆ ಹೊಟ್ಟೆನೋವಿನ ಅನುಭವವಾಗುತ್ತದೆ ಎಂದು ಗೃಹ ಸಚಿವ ಅಮಿತ್‌ ಶಾ ಪ್ರಶ್ನಿಸಿದ್ದಾರೆ.

Vijaya Karnataka 19 Sep 2019, 6:19 am
ಜಮ್ತಾರಾ(ಜಾರ್ಖಂಡ್‌): ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದು ಮಾಡಿದರೆ ಕಾಂಗ್ರೆಸ್‌ಗೇಕೆ ಹೊಟ್ಟೆನೋವಿನ ಅನುಭವವಾಗುತ್ತದೆ ಎಂದು ಗೃಹ ಸಚಿವ ಅಮಿತ್‌ ಶಾ ಪ್ರಶ್ನಿಸಿದ್ದಾರೆ.
Vijaya Karnataka Web amit shah


ಜಾರ್ಖಂಡ್‌ನ ಜಮ್ತಾರಾದಲ್ಲಿಬಿಜೆಪಿಯ 'ಜೋಹರ್‌ ಜನ್‌ ಆಶೀರ್ವಾದ್‌ ರಾರ‍ಯಲಿ' ಉದ್ಘಾಟಿಸಿ ಮಾತನಾಡಿದ ಅವರು, ಮುಂದೆ ರಾಹುಲ್‌ ಗಾಂಧಿ ಅವರು ಮಹಾರಾಷ್ಟ್ರ, ಜಾರ್ಖಂಡ್‌, ಹರಿಯಾಣಗಳಲ್ಲಿಸುತ್ತಾಡುವಾಗ ವಿಧಿ ರದ್ದತಿಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ತಾಕೀತು ಮಾಡಿದರು. ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ಹರಿಯಾಣಗಳಲ್ಲಿ ಈ ವರ್ಷದಲ್ಲೇ ಚುನಾವಣೆಗಳು ನಡೆಯಲಿವೆ.

ಪಾಕ್‌ಗೆ ತಕ್ಕಪಾಠ: 370ನೇ ವಿಧಿ ರದ್ದತಿ ಮೂಲಕ ಮೋದಿ ಅವರು ಪಾಕಿಸ್ತಾನಕ್ಕೆ ಅದರ ಜಾಗ ಎಲ್ಲಿಎನ್ನುವುದನ್ನು ತೋರಿಸಿದ್ದಾರೆ. ಜತೆಗೆ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಪ್ರತಿಷ್ಠಾಪಿಸಿದ್ದಾರೆ ಎಂದರು.

''370ನೇ ವಿಧಿಯನ್ನು ಜಾರಿಗೊಳಿಸಿದ ದಿನದಿಂದಲೇ ನಾವು ಅದನ್ನು ವಿರೋಧಿಸಿದ್ದೇವೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್‌ ತನ್ನ ನಿಲುವನ್ನು ಸ್ಪಷ್ಟಪಡಿಸಲಿ,'' ಎಂದು ಶಾ ಸವಾಲು ಹಾಕಿದರು.

ದೇಶಾದ್ಯಂತ ಎನ್‌ಆರ್‌ಸಿ

ಹೊಸದಿಲ್ಲಿ: ದೇಶದಲ್ಲಿಅಕ್ರಮವಾಗಿ ವಾಸಿಸುತ್ತಿರುವ ಪ್ರತಿಯೊಬ್ಬ ವಿದೇಶಿಯನನ್ನು ಹುಡುಕಿ ಹುಡುಕಿ ಹೊರಹಾಕಲಾಗುವುದು ಎಂಬ ಮಾತನ್ನು ಗೃಹ ಸಚಿವ ಅಮಿತ್‌ ಶಾ ಪುನರುಚ್ಚರಿಸಿದ್ದಾರೆ.

''ಬೇರೆ ದೇಶದಲ್ಲಿಒಬ್ಬ ಭಾರತೀಯ ಅಕ್ರಮವಾಗಿ ವಾಸಿಸುತ್ತಿದ್ದರೆ ಅವರು ಅವಕಾಶ ಕೊಡುತ್ತಾರಾ? ಭಾರತ ಯಾಕೆ ಕೊಡಬೇಕು? ದೇಶಾದ್ಯಂತ ಪೌರತ್ವ ನೋಂದಣಿ ನಡೆಯುತ್ತದೆ. ಯಾರ ಹೆಸರು ಪಟ್ಟಿಯಲ್ಲಿಇರುವುದಿಲ್ಲವೋ ಅವರನ್ನು ಕಾನೂನುಬದ್ಧವಾಗಿಯೇ ದೇಶದಿಂದ ಹೊರಹಾಕಲಾಗುತ್ತದೆ,'' ಎಂದು ಶಾ ಅವರು ಖಾಸಗಿ ಕಾರ್ಯಕ್ರಮದಲ್ಲಿಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ