ಆ್ಯಪ್ನಗರ

AMU ಪ್ರೊಫೆಸರ್‌ನಿಂದ ತ್ರಿವಳಿ ತಲಾಕ್: ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ತ್ರಿವಳಿ ತಲಾಕ್ ಮೇಲೆ ನಿಷೇಧ ಹೇರಿದೆ.

Vijaya Karnataka Web 12 Nov 2017, 9:11 am
ಹೊಸದಿಲ್ಲಿ: ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ತ್ರಿವಳಿ ತಲಾಕ್ ಮೇಲೆ ನಿಷೇಧ ಹೇರಿದೆ. ಆದರೆ, ಉತ್ತರ ಪ್ರದೇಶದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಯೂಸುಫ್ ಖಾನ್ ಪತ್ನಿಗೆ ತ್ರಿವಳಿ ತಲಾಕ್ ನೀಡಲು ಮುಂದಾಗಿದ್ದಾರೆ. ತನಗೆ ನ್ಯಾಯ ಸಿಗದಿದ್ದರೆ, ಕುಲಪತಿಯ ನಿವಾಸದ ಮುಂದೆ ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈ ಪತ್ನಿ ಎಚ್ಚರಿಸಿದ್ದಾರೆ.
Vijaya Karnataka Web amu profs wife threatens suicide with kids says victim of triple talaq
AMU ಪ್ರೊಫೆಸರ್‌ನಿಂದ ತ್ರಿವಳಿ ತಲಾಕ್: ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ


ಈ ಕುರಿತು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಪ್ರೊಫೆಸರ್ ಪತ್ನಿ ಯಾಸ್ಮಿನ್, ಕಳೆದ 27 ವರ್ಷಗಳಿಂದ ಆಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ ಯೂಸುಫ್, ತನಗೆ ವಾಟ್ಸಪ್ ಹಾಗೂ ಎಸ್‌ಎಂಎಸ್ ಮೂಲಕ ತ್ರಿವಳಿ ತಲಾಕ್ ನೀಡಿದ್ದಾರೆಂದು ಅಳಲು ತೊಡಿಕೊಂಡಿದ್ದಾರೆ.

'ಪತಿ ಖಾನ್ ನನ್ನನ್ನು ಮನೆಯಿಂದ ಹೊರದಬ್ಬಿದ್ದು, ಇದೀಗ ಅತಂತ್ರಳಾಗಿದ್ದೇನೆ. ನ್ಯಾಯಕ್ಕಾಗಿ ಅವರಿವರ ಕಾಲು ಹಿಡಿಯುವ ಸ್ಥಿತಿ ತಲುಪಿದ್ದು, ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಸದ್ಯ, ಪೊಲೀಸರ ಸಹಾಯದಿಂದ ಪತಿಯ ಮನೆ ಸೇರಿದ್ದೇನೆ,' ಎಂದು ಯಾಸ್ಮಿನ್ ಅಳಲು ತೋಡಿಕೊಂಡಿದ್ದಾರೆ.

ಆದರೆ, ತಲಾಕ್ ನೀಡಿರುವುದನ್ನು ಪ್ರೊಫೆಸರ್ ಖಾನ್ ಸಮರ್ಥಿಸಿಕೊಂಡಿದ್ದಾರೆ. 'ನನ್ನ ಪತ್ನಿ ಯಾಸ್ಮಿನ್ ಕಳೆದ ಎರಡು ದಶಕಗಳಿಂದ ಕಿರುಕುಳ ನೀಡುತ್ತಿದ್ದು, ಪದವೀಧರೆ ಎಂದು ಸುಳ್ಳು ಹೇಳಿ ವಿವಾಹವಾಗಿದ್ದಾಳೆ. ನಾನು ವಾಟ್ಸಪ್ ಹಾಗೂ ಎಸ್‌ಎಂಎಸ್ ಮೂಲಕ ತಲಾಕ್ ನೀಡಿಲ್ಲ. ಷರಿಯಾ ಕಾನೂನಿನ ಪ್ರಕಾರವೇ ಸಮಯ ತೆಗೆದುಕೊಂಡು ಎರಡು ಬಾರಿ ತಲಾಕ್ ಹೇಳಿದ್ದೇನೆ. ಸೂಕ್ತ ಸಮಯ ನೋಡಿ ಮೂರನೇ ತಲಾಕ್ ಕೂಡ ನೀಡುತ್ತೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ,' ಎಂದು ಖಾನ್ ತಿಳಿಸಿದ್ದಾರೆ.

ನಾನು ಕೇವಲ ಪದವೀಧರೆಯಲ್ಲ. ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಎಂಎ ಮತ್ತು ಬಿ.ಎಡ್ ಪದವಿ ಪಡೆದಿದ್ದೇನೆ,' ಎನ್ನುತ್ತಾರೆ ಯಾಸ್ಮೀನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ