ಆ್ಯಪ್ನಗರ

ಆಂಧ್ರ ಸಿಎಂ ಜಗನ್‌ಗೆ ಐವರು ಉಪ ಮುಖ್ಯಮಂತ್ರಿಗಳು!

ಒಂದು ವೇಳೆ ಐವರು ಉಪಮುಖ್ಯಮಂತ್ರಿಗಳು ನೇಮಕಗೊಂಡರೆ ರಾಷ್ಟ್ರದ ಇತಿಹಾಸದಲ್ಲೇ ಮೊದಲು ಎಂದೆನಿಸಿಕೊಳ್ಳಲಿದೆ. ಈ ಹಿಂದೆ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ ಇಬ್ಬರು ಉಪ ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸಿದ್ದರು.

TOI.in 7 Jun 2019, 12:39 pm
ಅಮರಾವತಿ: ಅಭೂತಪೂರ್ವ ಗೆಲುವಿನ ಮೂಲಕ ಆಂಧ್ರ ಪ್ರದೇಶದಲ್ಲಿ ಅಧಿಕಾರ ಸ್ಥಾಪಿಸಿದ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್‌ಮೋಹನ್‌ ರೆಡ್ಡಿ ಐವರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ.
Vijaya Karnataka Web YS Jagan Mohan Reddy


ಇದೇ ಮೊದಲ ಬಾರಿಗೆ ರಾಜ್ಯವೊಂದಕ್ಕೆ ಐವರು ಉಪ ಮುಖ್ಯಮಂತ್ರಿಗಳು ನೇಮಕವಾಗಲಿದ್ದಾರೆ. ಎಲ್ಲಾ ಸಮುದಾಯವನ್ನು ಸಮಾನವಾಗಿ ಕೊಂಡೊಯ್ಯುವ ಚಿಂತನೆ ನಡೆಸಿರುವ ಜಗನ್‌ಮೋಹನ್‌ ಎಸ್‌ಸಿ, ಎಸ್‌ಟಿ, ಬಿಸಿ, ಅಲ್ಪಸಂಖ್ಯಾತ ಮತ್ತು ಕಾಪು ಸಮುದಾಯಗಳಿಂದ ತಲಾ ಓರ್ವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ.

ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಜಗನ್‌ಮೋಹನ್‌ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಐವರು ಉಪಮುಖ್ಯಮಂತ್ರಿಗಳು ನೇಮಕಗೊಂಡರೆ ರಾಷ್ಟ್ರದ ಇತಿಹಾಸದಲ್ಲೇ ಮೊದಲು ಎಂದೆನಿಸಿಕೊಳ್ಳಲಿದೆ. ಈ ಹಿಂದೆ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ ಇಬ್ಬರು ಉಪ ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸಿದ್ದರು.

ಜನತೆಯ ಆಕಾಂಕ್ಷೆಗಳಿಗೆ ಒತ್ತು ಕೊಟ್ಟು ಸಂಪುಟವನ್ನು ರಚನೆ ಮಾಡಲಾಗುವುದು. ರಾಜ್ಯ ಸಂಪುಟ 25 ಸಚಿವರು ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಜಗನ್‌ಮೋಹನ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ