ಆ್ಯಪ್ನಗರ

ಹಾವು ಕಡಿತ ಪ್ರಕರಣ ಏರಿಕೆ: ನಾಗದೇವನ ಪ್ರಸನ್ನಗೊಳಿಸಲು ಮುಂದಾದ ಆಂಧ್ರ ಸರಕಾರ

ಕೃಷ್ಣಾ ಜಿಲ್ಲೆಯ ದಿವಿಸೀಮಾದಲ್ಲಿ ಹಾವಿನ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಸರಕಾರ ನಾಗದೇವತೆಗಳನ್ನು ಶಾಂತಗೊಳಿಸಲು 'ಸರ್ಪ ಶಾಂತಿ ಯಜ್ಞ' ನಡೆಸಲು ಸಿದ್ಧತೆ ನಡೆಸಿದೆ.

TIMESOFINDIA.COM 27 Aug 2018, 2:13 pm
ಹೈದರಾಬಾದ್: ಕೃಷ್ಣಾ ಜಿಲ್ಲೆಯ ದಿವಿಸೀಮಾದಲ್ಲಿ ಹಾವಿನ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಸರಕಾರ ನಾಗದೇವತೆಗಳನ್ನು ಶಾಂತಗೊಳಿಸಲು 'ಸರ್ಪ ಶಾಂತಿ ಯಜ್ಞ' ನಡೆಸಲು ಸಿದ್ಧತೆ ನಡೆಸಿದೆ.
Vijaya Karnataka Web Andhra govt to conduct ritual to appease snake god


ಕಳೆದೆರಡು ತಿಂಗಳಲ್ಲಿ ಹಾವಿನ ಕಡಿತದಿಂದ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದು, ನೂರಾರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ವಿಷ ಮತ್ತು ಹಾವಿನ ವಿಷ ನಿರೋಧಕ ರಾಸಾಯನಿಕಗಳನ್ನು ಪೂರೈಸುವುದರ ಜತೆ ಹಾವಿನ ಕಡಿತದಿಂದ ತಪ್ಪಿಸಿಕೊಳ್ಳುವುಗುದು ಹೇಗೆ ಎಂಬ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ. ಅದರ ಜತೆಗೆ ಆತಂಕಕ್ಕೆ ಒಳಗಾಗಿರುವ ಸಾರ್ವಜನಿಕರಿಗೆ ಧೈರ್ಯ ತುಂಬಲು ದತ್ತಿ ಇಲಾಖೆ ದೇವರ ಪೂಜೆಯ ಮೊರೆ ಹೋಗಿದೆ. ಆಗಸ್ಟ್ 29ರಂದು ಮೋಪಿದೇವಿಯ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಯಜ್ಞವನ್ನು ಆಯೋಜಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಬಿ. ಲಕ್ಷ್ಮಿಕಾಂತಮ್ , "ದತ್ತಿ ಇಲಾಖೆಯೊಂದಿಗೆ ಸ್ಥಳೀಯರು ಸೇರಿ 'ಸರ್ಪ ಯಾಗ' ನಡೆಸುತ್ತಿದ್ದಾರೆ, ಇದು ಭಯಭೀತಗೊಂಡಿರುವ ಸ್ಥಳೀಯರಲ್ಲಿ ಮನೋಸ್ಥೈರ್ಯವನ್ನು ತುಂಬಲಿದೆ", ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ